ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro:QR ಕೋಡ್ ಟಿಕೆಟ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ, ಪರದಾಡಿದ ಪ್ರಯಾಣಿಕರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನವೆಂಬರ್‌ನಿಂದ ಆರಂಭಿಸಿದ್ದ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಟಿಕೆಟ್ ವ್ಯವಸ್ಥೆಯಲ್ಲಿ ಸರ್ವರ್ ಕ್ರ್ಯಾಶ್ ಆಗಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರಿಂದ ಪ್ರಯಾಣಿಕರು ಕೆಲ ಕಾಲ ಪರದಾಡಿದರು.

ಸೋಮವಾರ ಸಂಜೆ 4.30ರ ಹೊತ್ತಿಗೆ ಈ ಸಮಸ್ಯೆ ಉಂಟಾಗಿದೆ. ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಟಿಕೆಟ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿವೆ. ಆನ್‌ಲೈನ್‌ ಮೂಲಕವೇ ಟಿಕೇಟ್ ಪಡೆಯುವ ವ್ಯವಸ್ಥೆಯನ್ನು ತಿಂಗಳ ಹಿಂದೆಷ್ಟೇ ಜಾರಿಗೆ ತರಲಾಗಿತ್ತು. ಆದರಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ. ಸದ್ಯ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸವಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma Metro: ಬೆಟ್ಟ ಹಲಸೂರು ಮೆಟ್ರೋ ನಿಲ್ದಾಣ ಕೈ ಬಿಟ್ಟ BMRCLNamma Metro: ಬೆಟ್ಟ ಹಲಸೂರು ಮೆಟ್ರೋ ನಿಲ್ದಾಣ ಕೈ ಬಿಟ್ಟ BMRCL

ನಮ್ಮ ಮೆಟ್ರೋ ಟಿಕೆಟ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಜನತೆಗೆ ಕೊಡುಗೆ ನೀಡಿತ್ತು. ಇದಾದ ಬಳಿಕ ಕಳೆದ ಡಿಸೆಂಬರ್ 8ರಂದು ಪೇಟಿಎಂ ಮತ್ತು ಯಾತ್ರಾ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿ ಪ್ರಯಾಣಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿತ್ತು. ಇದಾದ ಬಳಿಕ ಪ್ರತಿ ನಿತ್ಯ ಕನಿಷ್ಠ 10,000 ಟಿಕೆಟ್ ಗಳು ಬುಕ್ ಆಗುತ್ತಿದ್ದವು ಎನ್ನಲಾಗಿದೆ.

Namma Metro Technical Problem In Recently Introduced Of QR Code Ticket System By BMRCL

ಸೋಮವಾರ ಬೈಯಪ್ಪನಹಳ್ಳಿಯಿಂದ ಸ್ವಾಮಿ ವಿವೇಕಾನಂದ ರಸ್ತೆಗೆವರೆಗೆ ಮೆಟ್ರೋ ಅಪ್ಲಿಕೇಶನ್ ಬಳಸಿ ಪ್ರಯಾಣಿಕರೊಬ್ಬರು ಟಿಕೆಟ್ ಕಾಯ್ದಿರಿಸಲು ಮುಂದಾಗಿದ್ದರು. ಈ ವೇಳೆ ಆಪ್‌ನ ಪರದೆಯ ಮೇಲೆ ಏನೋ ತಪ್ಪಾಗಿದೆ. ದಯವಿಟ್ಟು ಪುನಃ ಪ್ರಯತ್ನಿಸಿ ಎಂದು ತೋರಿಸಿದೆ. ಪುನಃ ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಸಮಸ್ಯೆಗಳನ್ನು ಹಲವರು ಎದುರಿಸಿದ್ದಾರೆ.

Namma Metro Technical Problem In Recently Introduced Of QR Code Ticket System By BMRCL

ಸಾಕಷ್ಟು ಮಂದಿ ವಿವಿಧ ಆಪ್‌ಗಳ ಮೂಲಕ ಟಿಕೆಟ್ ಬುಕ್ ಮಾಡಲು ಯತ್ನಿಸಿದಾಗ ಸರ್ವರ್ ಕ್ರ್ಯಾಶ್ ಆಗಿದೆ. ತಾಂತ್ರಿಕ ಸಮಸ್ಯೆ ಉಂಟಾಗಿರುವುದು ಕಂಡು ಬಂದಿದೆ. ನಿರಂತರ ಪ್ರಯತ್ನದ ಮೂಲಕ ರಾತ್ರಿ 9ಗಂಟೆ ಹೊತ್ತಿಗೆ ಸಮಸ್ಯೆ ಬಗೆಹರಿದಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

English summary
Namma Metro : Technical Problem in Recently introduced of QR Code Ticket System by Bengaluru Metro Rail Corporation Ltd. (BMRCL) passengers stranded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X