ನಮ್ಮ ಮೆಟ್ರೋ ನಿಲ್ದಾಣದಲ್ಲಿ ವಾಹನ ಸವಾರರಿಗೆ ಹೊಸ ಸಮಸ್ಯೆ

ಬೆಂಗಳೂರು, ನವೆಂಬರ್ 13; ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗಿದೆ, ಪ್ರತಿನಿತ್ಯ ಮೆಟ್ರೋದಲ್ಲಿ ಸಂಚಾರ ನಡೆಸುವ ಜನರ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಆದರೆ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ವಾಹನ ಸವಾರರಿಗೆ ಹೊಸ ಸಮಸ್ಯೆ ಎದುರಾಗಿದೆ.

ನಮ್ಮ ಮೆಟ್ರೋ ನಿಲ್ದಾಣದ ವಾಹನ ಪಾರ್ಕಿಂಗ್‌ಗೆ ಬಿಎಂಆರ್‌ಸಿಎಲ್ ದರವನ್ನು ನಿಗದಿ ಮಾಡಿದೆ. ಆದರೆ ಕೆಲವು ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ದರವನ್ನು ಅಲ್ಲಿನ ಸಿಬ್ಬಂದಿ ಕೇಳುತ್ತಿದ್ದಾರೆ. ಇದರಿಂದಾಗಿ ನಿತ್ಯ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಕಛೇರಿಗೆ ಸಹ ದೂರು ಸಲ್ಲಿಕೆಯಾಗಿದೆ.

Namma Metro Station Parking Lot Operators Demand Excess Fee

ಬಿಎಂಆರ್‌ಸಿಎಲ್ ನಿಗದಿ ಮಾಡಿದ ದರಕ್ಕೆ ಪಾರ್ಕಿಂಗ್ ಲಾಟ್‌ನ ಸಿಬ್ಬಂದಿ ರಶೀದಿ ನೀಡುತ್ತಿಲ್ಲ. ಹೆಚ್ಚಿನ ಹಣವನ್ನು ನೀಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಕೆಲವು ಮೆಟ್ರೋ ನಿಲ್ದಾಣದಲ್ಲಿ ಕಾರುಗಳ ಪಾರ್ಕಿಂಗ್‌ಗೆ ಸಹ ಅವಕಾಶವಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ಎಷ್ಟು ದರ ನಿಗದಿ?; ನಮ್ಮ ಮೆಟ್ರೋ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳಿಗೆ ಮೊದಲ 4 ಗಂಟೆಗೆ 15 ರೂ. ಬಳಿಕ ಪ್ರತಿ ಗಂಟೆಗೆ 5 ರೂ. ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿದೆ. ಕನಿಷ್ಠ 30 ರೂ. ತನಕ ಸಂಗ್ರಹ ಮಾಡಬಹುದು. ಕಾರುಗಳಿಗೆ ಮೊದಲ 4 ಗಂಟೆಗೆ 10 ರೂ. ಗರಿಷ್ಠ 60 ರೂ. ತನಕ ಶುಲ್ಕ ಸಂಗ್ರಹ ಮಾಡಲು ಬಿಎಂಆರ್‌ಸಿಎಲ್ ಸೂಚಿಸಿದೆ.

ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಈ ದರಗಳ ಕುರಿತು ಬ್ಯಾನರ್ ಸಹ ಹಾಕಿದೆ. ಆದರೆ ನವೆಂಬರ್ 1ರಂದು ಚಿಕ್ಕಪೇಟೆ ನಿಲ್ದಾಣದಲ್ಲಿ 4 ಗಂಟೆಗಳ ಕಾಲ ಕಾರು ನಿಲ್ಲಿಸಿದ್ದಕ್ಕೆ 150 ರೂ. ಶುಲ್ಕ ಸಂಗ್ರಹ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಛೇರಿಯ ಸಾರ್ವಜನಿಕ ದೂರು ವಿಭಾಗಕ್ಕೆ ದೂರು ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಮೆಜೆಸ್ಟಿಕ್ ಇಂಟರ್‌ ಚೇಂಜ್‌ ನಿಲ್ದಾಣದಲ್ಲಿ ಪತ್ರಕರ್ತರೊಬ್ಬರು ಸುಮಾರು ಒಂದು ಗಂಟೆ ಬೈಕ್ ನಿಲ್ಲಿಸಿದ್ದಕ್ಕೆ 20 ರೂ. ಸಂಗ್ರಹ ಮಾಡಲಾಗಿದೆ. ಪ್ರತಿ ಎರಡು ಗಂಟೆಗೆ ದರಗಳು ಹೆಚ್ಚಾಗುತ್ತವೆ ಎಂದು ಸಿಬ್ಬಂದಿ ಪತ್ರಕರ್ತರಿಗೆ ಹೇಳಿದ್ದು, ನಿಗದಿಗೊಳಿಸಿದ ಶುಲ್ಕವನ್ನು ಸಂಗ್ರಹ ಮಾಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.

ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಸೌಲಭ್ಯ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದೆ. ಆದರೆ ಬಿಎಂಆರ್‌ಸಿಎಲ್ ಇದು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ?, ನಿಗದಿತ ಶುಲ್ಕ ಸಂಗ್ರಹ ಮಾಡಲಾಗುತ್ತಿದೆಯೇ? ಎಂದು ಗಮನಹರಿಸಿಲ್ಲ ಎಂದು ಮೆಟ್ರೋ ಪ್ರಯಾಣಿಕರು ಹೇಳಿದ್ದಾರೆ. ಒಮ್ಮೆ ಪರಿಶೀಲನೆ ನಡೆಸಿ ಎಂದು ಆಗ್ರಹಿಸಿದ್ದಾರೆ.

ಬಿಎಂಆರ್‌ಸಿಎಲ್ ಪ್ರಕಾರ 66 ಮೆಟ್ರೋ ನಿಲ್ದಾಣಗಳ ಪೈಕಿ 33 ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹವಾಗುತ್ತಿದೆ. ಪ್ರತಿ ವರ್ಷ 6-7 ಕೋಟಿ ಆದಾಯ ಬರುತ್ತಿದೆ. 11,495 ಬೈಕ್ ಮತ್ತು 1,724 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯವಿದೆ.

ಈಗ ಮೆಟ್ರೋ ಜಾಲ ವಿಸ್ತರಣೆಯಾದ ಬಳಿಕ ಹೊಸ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡಲು ಟೆಂಡರ್ ಕರೆಯಲಾಗಿದೆ. ಈ ವರ್ಷವೇ 14 ನಿಲ್ದಾಣದಲ್ಲಿ ಶುಲ್ಕ ಸಂಗ್ರಹ ಆರಂಭವಾಗಲಿದೆ. ಬೆನ್ನಿಗಾನಹಳ್ಳಿ, ಚಲ್ಲಘಟ್ಟ ನಿಲ್ದಾಣಗಳಲ್ಲಿ ಈಗ ಪಾರ್ಕಿಂಗ್ ಸೌಲಭ್ಯಗಳು ಇಲ್ಲ.

ಕಾರು, ಬೈಕ್‌ಗಳಲ್ಲಿ ಮೆಟ್ರೋ ನಿಲ್ದಾಣಕ್ಕೆ ಬಂದು ಅಲ್ಲಿಂದ ಮುಂದೆ ಸಾಗುವ ಜನರಿಗೆ ಪಾರ್ಕಿಂಗ್ ವಿಚಾರಕ್ಕೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಯಾವ ನಿಲ್ದಾಣಗಳಲ್ಲಿ ಹೆಚ್ಚಿನ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ? ಮತ್ತು ಏಕೆ? ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮೆಟ್ರೋ ಪ್ರಯಾಣಿಕರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+