ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು
Bengaluru Metro: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಇತ್ತೀಚೆಗೆ ಜೈಕಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಮೆಟ್ರೋ ಹಂತ 2ಎ ಯೋಜನೆಗಾಗಿ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಬಾಗ್ಮನೆ ಗ್ರೂಪ್ಸ್) ಜೊತೆಗೆ ಬರೋಬ್ಬರಿ 40 ಕೋಟಿ ರೂಪಾಯಿ ಮಹತ್ವದ ಒಪ್ಪಂದಕ್ಕೆ ಬಿಎಂಆರ್ಸಿಎಲ್ ಸಹಿ ಹಾಕಿವೆ. ಇಷ್ಟು ಹಣವು ಹೊರ ವರ್ತುಲ ರಸ್ತೆಯ ಪ್ರಮುಖ ಮೆಟ್ರೋ ನಿಲ್ದಾಣ ಸೇರಿದಂತೆ ಪ್ರಮುಖ ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ಒಪ್ಪಂದ ಇದಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
BMRCL ಮಾರ್ಚ್ 27ರಂದು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಬಾಗ್ಮನೆ ಗುಂಪು) ಜೊತೆ ಅನುದಾನ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2ಎ ಅಡಿಯಲ್ಲಿ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ಸಹಭಾಗಿತ್ವವನ್ನು ಒಳಗೊಂಡಿದೆ. ನಮ್ಮ ಮೆಟ್ರೋ 2ಎ ಮತ್ತು 2ಬಿ ಎರಡು ಹಂತಗಳಲ್ಲಿ ಬೆಂಗಳೂರು ಹೊರ ವರ್ತುಲ ರಸ್ತೆ ಉದ್ದಕ್ಕೂ ನಿರ್ಮಾಣವಾಗುತ್ತಿರುವ ನೀಲಿ ಮಾರ್ಗಕ್ಕೆ (ಸಿಲ್ಕ್ ಬೋರ್ಡ್-ಕೆ.ಆರ್.ಪುರಂ-ದೇವನಹಳ್ಳಿ ಏರ್ಪೋರ್ಟ್) ಸಂಬಂಧಿಸಿದ ಒಪ್ಪಂದ ಇದಾಗಿದೆ.

ಈ ಒಪ್ಪಂದದಡಿ ಬಾಗ್ಮನೆ ಸಂಸ್ಥೆ ಔಟರ್ ರಿಂಗ್ ರೋಡ್ (ORR) ಮಾರ್ಗದಲ್ಲಿರುವ ಡಿಆರ್ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ರೂ.40 ಕೋಟಿಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಈ ಮೊತ್ತದಲ್ಲಿ ರೂ.20 ಕೋಟಿಗಳನ್ನು ಈಗಾಗಲೇ ಪಾವತಿಸಿದೆ. ಈ ಪಾಲ್ಗೊಳ್ಳುವಿಕೆ ರೂಪುರೇಷೆಯನ್ನು ನಿಲ್ದಾಣದ ಸ್ಥಳ, ಯೋಜನೆಯ ವೈಶಿಷ್ಟ್ಯಗಳು ಮತ್ತು ಸೀಮಿತ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
20 ವರ್ಷ ಅವಧಿಯ ಒಪ್ಪಂದ
ಇನ್ನೂ ಬಾಗ್ಮನೆ ಡೆವಲಪರ್ಸ್ ಸಂಸ್ಥೆಯು ಮೆಟ್ರೋ ನಿಲ್ದಾಣದ ಒಳಾಂಗಣ ಹಾಗೂ ಹೊರಾಂಗಣ ಮುಖಭಾಗದ ಸುಧಾರಣೆಗೆ ಸಹ ಕೊಡುಗೆ ನೀಡಲಿದೆ. ಈ ಕೊಡುಗೆಯ ಪರಿಗಣನೆಗೆ, ನಮ್ಮ ಮೆಟ್ರೋ ಸಂಸ್ಥೆಯು 20 ವರ್ಷಗಳ ಅವಧಿಗೆ ನಿಲ್ದಾಣಕ್ಕೆ ಹೆಸರಿಡುವ ಹಕ್ಕನ್ನು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ಗೆ ನೀಡುತ್ತದೆ, ಇದು ಒಪ್ಪಂದದ ನಿಯಮಗಳಿಗೆ ಅನುಗುಣವಾಗಿದೆ.
ಈ ವ್ಯವಸ್ಥೆಯು ನಿರ್ಮಾಣ ಹಂತದಲ್ಲಿ ಅನುದಾನ ಆಧಾರಿತ ಸಹಭಾಗಿತ್ವ ಮಾದರಿಯನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಖಾಸಗಿ ಪಾಲುದಾರರು ಮೆಟ್ರೋ ಮೂಲ ಸೌಕರ್ಯಕ್ಕೆ ಬಂಡವಾಳ ವೆಚ್ಚದಲ್ಲಿ ಪಾಗೊಳ್ಳುತ್ತಾರೆ. ಈ ಒಪ್ಪಂದದಡಿಯಲ್ಲಿ ನೀಡಲ್ಪಡುವ ಹಕ್ಕುಗಳು ಕೇವಲ ಹೆಸರಿಡುವ ಹಕ್ಕಿಗೆ ಮಾತ್ರ ಸೀಮಿತವಾಗಿದ್ದು, ಜಾಹೀರಾತು ಹಕ್ಕುಗಳು, ವಾಣಿಜ್ಯ ಸ್ಥಳ ಅಥವಾ ಸಂಪರ್ಕ ಸೌಲಭ್ಯಗಳಂತಹ ಹೆಚ್ಚುವರಿ ಹಕ್ಕುಗಳನ್ನು ಒಳಗೊಂಡಿಲ್ಲ.
ಒಪ್ಪಂದವು BMRCL ನಿಗಮದ ನವೀನ ಹಣಕಾಸು ವ್ಯವಸ್ಥೆಯ ಭಾಗವಾಗಿದೆ. ಖಾಸಗಿ ವಲಯದ ಪಾಲುದಾರಿಕೆ ಉತ್ತೇಜನದೊಂದಿಗೆ ಎಲ್ಲಾ ಮೆಟ್ರೋ ಆಸ್ತಿಗಳ ಮಾಲೀಕತ್ವ ಮತ್ತು ಕಾರ್ಯಾಚರಣಾ ನಿಯಂತ್ರಣವು ಸಂಪೂರ್ಣವಾಗಿ ಬಿಎಂಆರ್ಸಿಎಲ್ ಕೈಯಲ್ಲಿ ಉಳಿಯುವುದನ್ನು ಖಚಿತಪಡಿಸುತ್ತದೆ.
ಮೆಟ್ರೋ ನಿಲ್ದಾಣಕ್ಕೆ ಬಾಗ್ಮನೆ ಹೆಸರು
ಬಾಗ್ಮನೆ ಗುಂಪಿನ ಕೊಡುಗೆಯನ್ನು ಗುರುತಿಸಿ BMRCL ಮತ್ತು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು 'ಬಾಗ್ಮನೆ ಡಿಆರ್ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣ' ಎಂದು ನಾಮಕರಣ ಮಾಡಲು ಕರ್ನಾಟಕ ಸರ್ಕಾರದ ಅನುಮೋದನೆಗಾಗಿ ಸಂಯುಕ್ತವಾಗಿ ಮನವಿ ಮಾಡಲಿವೆ.
ಡಿಆರ್ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣವು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್ ಪುರಂವರೆಗೆ 19.75 ಕಿ.ಮೀ ಉದ್ದದ ಹೊರ ವರ್ತೂಲ ರಸ್ತೆ (ORR) ಮಾರ್ಗದ ಭಾಗವಾಗಿದ್ದು, ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗವು ಸುರಕ್ಷಿತ, ಪರಿಣಾಮಕಾರಿ ಮತ್ತು ಶಾಶ್ವತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮೂಲಕ ನಗರ ಸಂಚಾರವನ್ನು ಸುಧಾರಿಸುವುದಲ್ಲದೆ, ಔಟರ್ ರಿಂಗ್ ರೋಡ್ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕೂ ಹಾಗೂ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ತಗ್ಗಿಸಲು ಸಹಕಾರಿಯಾಗಿದೆ.
ಇದು ORR ಮಾರ್ಗ (ಹಂತ-2ಎ) ಅಡಿಯಲ್ಲಿ ಮೆಟ್ರೋ ನಿಗಮದಿಂದ ನವೀನ ಹಣಕಾಸು ವ್ಯವಸ್ಥೆಯಡಿ ಕೈಗೊಳ್ಳಲಾದ 6ನೇ ಒಪ್ಪಂದವಾಗಿದೆ. ಇನ್ನೂ ಎರಡು ನವೀನ ಒಪ್ಪಂದಗಳು ಪ್ರಗತಿಯಲ್ಲಿವೆ. ಅವು ಶೀಘ್ರವೇ ಅಂತಿಮಗೊಳ್ಳಲಿವೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜೆ. ರವಿಶಂಕರ್ ಅವರು ಹೇಳಿದರು.
ಈ ಸಹಭಾಗಿತ್ವವು ಸಾರ್ವಜನಿಕ ಮಾಲೀಕತ್ವ ಮತ್ತು ನಿಯಂತ್ರಣವನ್ನು ಕಾಪಾಡಿಕೊಳ್ಳುವ ಜೊತೆಗೆ, ಯೋಜನೆ ಆಧಾರಿತ ಖಾಸಗಿ ಸಹಕಾರದ ಮೂಲಕ ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಬೆಂಗಳೂರಿಗೆ ಶಾಶ್ವತ ನಗರ ಸಂಚಾರ ಪರಿಹಾರಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ ಎಂದರು. ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಕಂಪನಿ ಪ್ರತಿನಿಧಿ ಆದಿತ್ಯ ಬಾಗ್ಮನೆ ಸಹ ತಾವು ಹಣ ಒದಗಿಸಲು ಉತ್ಸುಕರಾಗಿರುವ ಬಗ್ಗೆ ತಿಳಿಸಿದರು.
-
Traffic Alert: ಬೆಂಗಳೂರು ಹೊರ ವರ್ತುಲ ಸವಾರರೇ ಗಮನಿಸಿ, ರಸ್ತೆ ಸಂಚಾರ ನಿರ್ಬಂಧ -
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
Indian Railway: ಬಣ್ಣದಿಂದಲೇ ರೈಲುಗಳ ವ್ಯತ್ಯಾಸ ಗುರುತಿಸುವುದು ಹೇಗೆ? -
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ













Click it and Unblock the Notifications