Indian Railway: ಬಣ್ಣದಿಂದಲೇ ರೈಲುಗಳ ವ್ಯತ್ಯಾಸ ಗುರುತಿಸುವುದು ಹೇಗೆ?
Indian Railways: ಭಾರತಿಯ ರೈಲ್ವೆಯಲ್ಲಿ ಪ್ರಯಾಣ ಮಾಡುವವರು ಯಾವುದೆ ರೈಲು ನಿಲ್ದಾಣಕ್ಕೆ ಹೋದರು ಮೊದಲು ಗಮನ ಸೇಳೆಯವ ಸಂಗತಿಯಂದರೆ ವಿವಿಧ ಬಣ್ಣದ ರೈಲುಗಳು. ಭಾರತಿಯ ರೈಲುಗಳು ಕೆಲವು ನೀಲಿ ಬಣ್ಣದಲ್ಲಿ ಇರುತ್ತವೆ, ಕೆಲವು ಬಿಳಿ ಬಣ್ಣಗಳಲ್ಲಿ ಇರುತ್ತವೆ ಕೆಲವು ಕೆಂಪು ಹಾಗೂ ಮರೂನ್ ಬಣ್ಣಗಳಲ್ಲಿ ಇರುತ್ತವೆ. ಈ ರೈಲುಗಳ ಬಣ್ಣಗಳು ನೋಡುವುದಕ್ಕೆ ಬಣ್ಣದಲ್ಲಿ ವ್ಯತ್ಯಾಸಗಳು ಕಾಣಬಹುದು. ಆದರೆ ವಾಸ್ತವದಲ್ಲಿ ಈ ರೈಲುಗಳ ತಂತ್ರಜ್ಙಾನ ಮತ್ತು ಅವುಗಳ ತಲೆಮಾರಿನ ಬಗ್ಗೆ ಸೂಚನೆ ನೀಡುತ್ತವೆ.
ಭಾರತೀಯ ರೈಲ್ವೆಯಲ್ಲಿ ಬಣ್ಣಗಳು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗಿಲ್ಲ. ಇದು ಅಧಿಕೃತ ವರ್ಗೀಕರಣವಲ್ಲದಿದ್ದರೂ, ರೈಲಿನ ಪ್ರಕಾರ, ಅದರ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ.

ನೀಲಿ ಬಣ್ಣ
ನೀಲಿ ಬಣ್ಣದ ಕೋಚ್‌ಗಳು ಭಾರತದಲ್ಲಿ ಸಾಮಾನ್ಯವಾಗಿ ಕಾಣುತ್ತವೆ. ಇವು ಐಸಿಎಫ್ (ICF) ಕೋಚ್‌ಗಳಾಗಿದ್ದು ಹಳೆಯ ತಲೆಮಾರಿಗೆ ಸೇರಿವೆ. ದಶಕಗಳಿಂದ ಇವು ದೇಶದ ರೈಲು ಪ್ರಯಾಣದ ಬೆನ್ನೆಲುಬಾಗಿವೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಈ ಕೋಚ್‌ಗಳನ್ನು ಹೆಚ್ಚು ಬಳಸಲಾಗುತ್ತದೆ. ಈ ಬೋಗಿಗಳು ವಿಶ್ವಾಸಾರ್ಹವಾಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಸುಲಭವಾಗಿ ಲಭ್ಯವಾಗುವಂತಿವೆ. ಆದರೆ ಈಗ ಇವುಗಳನ್ನು ಹಂತ ಹಂತವಾಗಿ ಹೊಸ ಮಾದರಿಯ ಕೋಚ್‌ಗಳಿಂದ ಬದಲಾಯಿಸಲಾಗುತ್ತಿದೆ.
ಕೆಂಪು ಬಣ್ಣ
ಇತ್ತೀಚಿನ ವರ್ಷಗಳಲ್ಲಿ ಕೆಂಪು ಅಥವಾ ಮರೂನ್ ಬಣ್ಣದ ಕೋಚ್‌ಗಳು ಹೆಚ್ಚಾಗಿ ಕಾಣಿಸುತ್ತಿವೆ. ಇವುಗಳನ್ನು LHB ಕೋಚ್‌ಗಳು ಎಂದು ಕರೆಯಲಾಗುತ್ತದೆ. ಈ ಕೋಚ್‌ಗಳು ಹೆಚ್ಚು ಸುರಕ್ಷಿತವಾಗಿದ್ದು, ಹೆಚ್ಚಿನ ವೇಗದಲ್ಲಿ ಸಂಚರಿಸಲು ವಿನ್ಯಾಸಗೊಳಿಸಲಾಗಿದೆ. ಪ್ರಯಾಣ ಹೆಚ್ಚು ಸುಗಮವಾಗಿದ್ದು, ಅಪಘಾತಗಳ ಸಂದರ್ಭದಲ್ಲೂ ಹಾನಿ ಕಡಿಮೆ ಆಗುತ್ತದೆ. ಪ್ರೀಮಿಯಂ ಮತ್ತು ಸೂಪರ್ ಫಾಸ್ಟ್ ರೈಲುಗಳಲ್ಲಿ ಈ ಕೋಚ್‌ಗಳನ್ನು ಬಳಸಲಾಗುತ್ತದೆ.

ಬಿಳಿ ಬಣ್ಣ
ಬಿಳಿ ಬಣ್ಣದ ರೈಲುಗಳು ವಿಶೇಷವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರತಿಬಿಂಬಿಸುತ್ತವೆ. ಇವು ಕೇವಲ ರೈಲುಗಳಲ್ಲ ಇವು ತಾಂತ್ರಿಕವಾಗಿ ರೈಲು ಸೆಟ್‌ಗಳಾಗಿವೆ. ಅಂದರೆ ಎಂಜಿನ್ ಮತ್ತು ಕೋಚ್‌ಗಳನ್ನು ಒಂದೇ ಘಟಕವಾಗಿ ವಿನ್ಯಾಸಗೊಳಿಸಲಾಗಿದೆ. ಇವು ವೇಗ ಆರಾಮ ಮತ್ತು ಪ್ರೀಮಿಯಂ ಅನುಭವವನ್ನು ಒದಗಿಸುತ್ತವೆ.
ಬಣ್ಣಗಳೇ ಎಲ್ಲವನ್ನೂ ಹೇಳುವುದಿಲ್ಲ
ಸಾಮಾನ್ಯವಾಗಿ ಕೆಂಪು ಬಣ್ಣದ ರೈಲು ಕಂಡರೆ ಅದು ಭಾರಿ ವೇಗವಾಗಿ ಹೋಗುತ್ತೆ, ನೀಲಿ ಬಣ್ಣದ್ದು ಅಂದ್ರೆ ನಿಧಾನ ಅಂತಲೇ ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ, ನಿಜಕ್ಕೂ ಬಣ್ಣಗಳೇ ರೈಲಿನ ವೇಗವನ್ನು ನಿರ್ಧರಿಸುತ್ತವೆಯೇ? ಈ ಬಗ್ಗೆ ರೈಲ್ವೆ ಇಲಾಖೆ ಹೇಳೋದೇ ಬೇರೆ.
ರೈಲುಗಳ ಬಣ್ಣಗಳನ್ನು ನೋಡಿ ಅವುಗಳ ವೇಗ ಅಥವಾ ವರ್ಗವನ್ನು ನಾವು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ. ಉದಾಹರಣೆಗೆ, ಎಲ್‌ಎಚ್‌ಬಿ (LHB) ತಂತ್ರಜ್ಞಾನದ ಕೆಂಪು ಬಣ್ಣದ ಕೋಚ್‌ಗಳು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ ನಿಜ, ಆದರೆ ಪ್ರತಿಯೊಂದು ಕೆಂಪು ರೈಲು ಯಾವಾಗಲೂ ಸೂಪರ್ ಫಾಸ್ಟ್ ಆಗಿರುತ್ತದೆ ಎನ್ನಲಾಗದು. ಅದೇ ರೀತಿ ನೀಲಿ ಬಣ್ಣದ ಐಸಿಎಫ್ (ICF) ಕೋಚ್‌ಗಳು ಹಳೆಯ ತಂತ್ರಜ್ಞಾನದವು ಎನಿಸಿದರೂ ಅವುಗಳ ವೇಗವು ಹಳಿಗಳ ಸ್ಥಿತಿ ಮತ್ತು ನಿಲುಗಡೆಗಳ ಮೇಲೆ ನಿರ್ಧಾರವಾಗುತ್ತದೆ.












Click it and Unblock the Notifications