ಎರಡು ದಿನ ನಮ್ಮ ಮೆಟ್ರೋ ಸೇವೆ ವಿಸ್ತರಣೆ
ಬೆಂಗಳೂರು, ಡಿ. 24 : ಬೆಂಗಳೂರು ನಗರದಲ್ಲಿ ಕ್ರಿಸ್‌ಮಸ್ ಮತ್ತು ಹೊಸವರ್ಷಾಚರಣೆ ಮಾಡುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ತನ್ನ ಸೇವೆಯನ್ನು ವಿಸ್ತರಣೆ ಮಾಡಿದೆ. ಡಿ. 24 ಮತ್ತು ಡಿ.31ರಂದು ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿವರೆಗೆ ವಿಸ್ತರಿಸಲಾಗಿದೆ.
ಎಂಜಿ ರಸ್ತೆ-ಬೈಯಪ್ಪನಹಳ್ಳಿ ಮತ್ತು ಸಂಪಿಗೆ ರಸ್ತೆ -ಪೀಣ್ಯ ಕೈಗಾರಿಕಾ ಪ್ರದೇಶದ ಹಸಿರು ಮೆಟ್ರೋ ಮಾರ್ಗದಲ್ಲಿ ಡಿ.24 ಮತ್ತು ಡಿ.31ರಂದು ಸಂಚರಿಸುವ ಮೆಟ್ರೋ ರೈಲುಗಳ ಸೇವೆಯನ್ನು ಮಧ್ಯರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಡಿ. 24ರಂದು ರಾತ್ರಿ 1 ಗಂಟೆವರೆಗೆ ಮತ್ತು ಡಿ. 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ರೈಲುಗಳು ಸಂಚರಿಸಲಿವೆ. ಈ ಎರಡೂ ದಿನ ರಾತ್ರಿ 10 ಗಂಟೆ ಬಳಿಕ ಪ್ರತಿ 30 ನಿಮಿಷಕ್ಕೊಮ್ಮೆ ಎರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. [ನಮ್ಮ ಮೆಟ್ರೋ ಬೇಗ ಕಟ್ರೋಗೆ 3 ವರ್ಷ]
ಅಂದಹಾಗೆ ಎಂಜಿ ರಸ್ತೆ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಅಕ್ಟೋಬರ್ 20ಕ್ಕೆ ಮೂರು ವರ್ಷ ಕಳೆದಿದೆ. ಸದ್ಯ, ಎಂಜಿ ರಸ್ತೆ-ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ ಪೀಣ್ಯ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದ್ದು, ಪ್ರತಿದಿನ ಸುಮಾರು 45,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. [ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ]
ಮಾರ್ಚ್ 1 2014ರಿಂದ ಜಾರಿಗೆ ಬರುವಂತೆ ಬಿಎಂಆರ್ ಸಿಎಲ್ ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವಿನ ಪ್ರಯಾಣದರವನ್ನು ಪರಿಷ್ಕರಣೆ ಮಾಡಿದೆ. ನೂತನ ದರ ಪಟ್ಟಿ ಹೀಗಿದೆ
* ಎಂಜಿ ರಸ್ತೆ ಬೈಯಪ್ಪನಹಳ್ಳಿ - 17 ರೂ.
* ಎಂಜಿ ರಸ್ತೆ-ಇಂದಿರಾನಗರ - 14 ರೂ.
* ಎಂಜಿ ರಸ್ತೆ-ಹುಲಸೂರು -13 ರೂ.
* ಎಂಜಿ ರಸ್ತೆ- ಎಸ್ ವಿ ರಸ್ತೆ - 16 ರೂ.












Click it and Unblock the Notifications