ನಮ್ಮ ಮೆಟ್ರೋ ಅಭಿಯಾನ: 1 ವರ್ಷದಲ್ಲಿ 95,000ಕ್ಕೂ ಅಧಿಕ ನಿಯಮ ಉಲ್ಲಂಘನೆ ಪತ್ತೆ
ಬೆಂಗಳೂರು: ನಮ್ಮ ಮೆಟ್ರೋ ರೈಲುಗಳು ಸಂಚಾರ ಸೇವೆ ಪಡೆಯುತ್ತಿರುವ ನಾಗರಿಕರ ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕಾಗಿ ಎಲ್ಲಾ ಪ್ರಯಾಣಿಕರ ಸಹಭಾಗಿತ್ವ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರಲ್ಲಿ ನಿಯಮಗಳನ್ನು ಪಾಲಿಸಲು ಬಿಎಂಆರ್‌ಸಿ ವಿಶೇಷ ಜಾಗೃತಿ ಅಭಿಯಾನ ನಡೆಸಿತ್ತು. ಈ ವೇಳೆ ಮೆಟ್ರೋ ನಿಯಮ ಉಲ್ಲಂಘಿಸಿದ 95,000 ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಾವಳಿಗಳನ್ನು ಬಲಪಡಿಸುವ ಉದ್ದೇಶದಿಂದ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿತ್ತು.

ಮೆಟ್ರೋ ರೈಲುಗಳಲ್ಲಿ ಹೆಡ್ ಫೋನ್ ಇಲ್ಲದೆ ಸಂಗೀತ ಕೇಳುವುದು, ಆಹಾರ ಸೇವಿಸುವುದು ಅಥವಾ ತುಂಬಾಕು ಸೇವನೆ ಮಾಡುವುದು ಸಹ ಪ್ರಯಾಣಿಕರಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಅದೇ ರೀತಿ, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ಮತ್ತು ಆಸಕ್ತರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡುವುದು ಪ್ರಯಾಣಿಕರ ಆದ್ಯ ಕರ್ತವ್ಯವಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನ ನಡೆಸಿತ್ತು. ಇಬ್ಬರು ಗೃಹ ರಕ್ಷಕರನ್ನೊಳಗೊಂಡ (ಹೋಮ್ ಗಾರ್ಡ್‌ಗಳು) ವಿಶೇಷ ತಂಡಗಳು ಮೆಟ್ರೋ ರೈಲುಗಳಲ್ಲಿ ಸಂಚಾರ ನಡೆಸಿ ಪ್ರಯಾಣಿಕರಿಗೆ ತಿಳಿಸುವ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಿತು. ಒಟ್ಟು ಒಂದು ವರ್ಷದ ಈ ಅಭಿಯಾನದ ವಿಶ್ಲೇಷಣೆಯಲ್ಲಿ ಕೆಳಕಂಡ ಅಂಶಗಳು ಪತ್ತೆ ಆಗಿವೆ.
95,000ಕ್ಕೂ ಅಧಿಕ ಉಲ್ಲಂಘನೆ ಪ್ರಕರಣ/ಅಂಶಗಳು
1. ಪ್ರಯಾಣ ವೇಳೆ 57,538 ಪ್ರಯಾಣಿಕರು ಜೋರಾಗಿ ಸಂಗೀತ ಕೇಳಿದ್ದಾರೆ.
2. 37,038 ಪ್ರಯಾಣಿಕರು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಡದೆ ಬಳಸಿದ್ದಾರೆ.
3. 1,907 ಪ್ರಯಾಣಿಕರು ರೈಲುಗಳೊಳಗೆ ಆಹಾರ ಸೇವಿಸಿದ್ದಾರೆ.
4. 1,677 ಪ್ರಯಾಣಿಕರು ತುಂಬಾಕು ಉತ್ಪನ್ನಗಳ ಸೇವಿಸಿದ್ದ ಗೊತ್ತಾಗಿದೆ.
ಸರಳ ನಿಯಮ ಪಾಲಿಸಿ, ಪ್ರಯಾಣ ಸುಖಕರವಾಗಿಸಿ
ಮೆಟ್ರೋ ರೈಲ್ವೇಸ್ (ಆಪರೇಷನ್ ಅಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದರೆ ಕೆಲವು ಅಪರಾಧಗಳು ದಂಡಕ್ಕೆ ಒಳಪಡುತ್ತವೆ ಎಂಬುದನ್ನು ಬಿಎಂಆರ್‌ಸಿಎಲ್ ಈ ಮೂಲಕ ಎಚ್ಚರಿಸುತ್ತದೆ.
ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವಾಗ ನಿಯಮಗಳು ನಿರಂತರವಾಗಿ ಪಾಲಿಸುವಲ್ಲಿ, ಎಲ್ಲಾ ನಮ್ಮ ಮೆಟ್ರೋ ಪ್ರಯಾಣಿಕರ ಸಹಕಾರವನ್ನು ಬಿಎಂಆರ್‌ಸಿಎಲ್ ಕೋರುತ್ತದೆ. ರೈಲುಗಳು, ಸಂಗೀತ ಕೇಳುವಾಗ ಇಯರ್‌ಫೋನ್‌ಗಳನ್ನು ಬಳಸಲು, ಬಳಕೆದಾರರಿಗೆ ಮೀಸಲು ಆಸನಗಳನ್ನು ನೀಡುವುದು, ಆಹಾರ ಸೇವನೆ ಮಾಡದಿರುವುದು ಮತ್ತು ತುಂಬಾ ಸೇವನೆ ಮಾಡದಿರುವುದು, ಇತ್ಯಾದಿ ಸರಳ ಕ್ರಮ/ನಿಯಮಗಳನ್ನು ಪಾಲಿಸುವುದು ಹೆಚ್ಚು ಸುಖಕರ ಹಾಗೂ ಸುಗಮ ಪ್ರಯಾಣದ ವಾತಾವರಣ ನಿರ್ಮಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋದಲ್ಲಿ ಪ್ರಯಾಣವೂ ಎಲ್ಲರಿಗೂ ಸುರಕ್ಷಿತ, ಮತ್ತು ಆನಂದಕರವಾಗಿರಲು ಸಹ ಪ್ರಯಾಣಿಕರ ಸೌಜನ್ಯ, ಸಹ ಪರಸ್ಪರ ಗೌರವವನ್ನು ತೋರಿಸಬೇಕೆಂದು ನಮ್ಮ ಮೆಟ್ರೋ ಪ್ರಕಟಣೆ ಮೂಲಕ ಮನವಿ ಮಾಡಿದೆ.












Click it and Unblock the Notifications