Namma Metro: 'ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್' ವ್ಯವಸ್ಥೆಯ ಮೊದಲ ಮೆಟ್ರೋ ಮಾರ್ಗ 2026ಕ್ಕೆ ಓಪನ್
ಬೆಂಗಳೂರು, ಮಾರ್ಚ್ 05: ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗ (Metro Pink Line) ಮುಂದಿನ ವರ್ಷ ಕಾರ್ಯಾಚರಣೆಗೆ ಸಿದ್ದವಾಗುತ್ತಿದೆ. ಒಂದೆಡೆ ಸಿವಿಲ್ ಕಾಮಗಾರಿ ಕೆಲಸ ಭರದಿಂದ ಸಾಗಿದೆ. ಮತ್ತೊಂದೆಡೆ ಭೂಗತ ಸುರಂಗ ಮಾರ್ಗ ಕೊರೆಯುವ ಕೆಲಸ ಶೇಕಡಾ 95ರಷ್ಟು ಪೂರ್ಣಗೊಂಡಿದೆ. ಈ ಮಾರ್ಗದ ಮತ್ತೊಂದು ವಿಶೇಷತೆ ಏನೆಂದರೆ ಉದ್ದೇಶಿತ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ವ್ಯವಸ್ಥೆ ಅಳವಡಿಕೆ ಇಲ್ಲಿ ಆಗಲಿದೆ.
ಬೆಂಗಳೂರು ಮೆಟ್ರೋ ಗುಲಾಬಿ ಮಾರ್ಗದ ಒಟ್ಟು 21 ಕಿಲೋ ಮೀಟರ್ ಉದ್ದದಲ್ಲಿ 13 ಕಿಲೋ ಮೀಟರ್ ಸುರಂಗ ಮಾರ್ಗ ಬರಲಿದೆ. ನಾಗವಾರದಿಂದ ಡೈರಿ ವೃತ್ತದವರೆಗಿನ ಈ ಸುರಂಗದಲ್ಲಿ ನಿಲ್ದಾಣ ನಿರ್ಮಾಣದ ಕೆಲಸಗಳು ನಡೆದಿವೆ. ಸುರಂಗದಲ್ಲೇ ಒಟ್ಟು 12 ನಿಲ್ದಾಣಗಳು, 06 ಎತ್ತರದ ನಿಲ್ದಾಣಗಳು ಬರುತ್ತವೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಎಲ್ಲ 18 ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆಗೆ ಚಿಂತನೆ ನಡೆಸಿದೆ. ಈ ಪಿಎಸ್‌ಡಿ ಯೋಜನೆ ಮೊದಲು ಜಾರಿಗೆ ಬರುವುದು ಈ ಗುಲಾಬಿ ಮಾರ್ಗದಲ್ಲಿ ಎನ್ನಲಾಗುತ್ತಿದೆ.
ಮೆಟ್ರೋ ಗುಲಾಬಿ ಭೂಗತ ಮಾರ್ಗವು ಗರಿಷ್ಠ 80 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಎಲ್ಲ ನಿಲ್ದಾಣಗಳು ತಲಾ 200 ಮೀಟರ್ ಉದ್ದವನ್ನು ಹೊಂದಿದ್ದು, ವಿಶಾಲವಾಗಿದೆ. ಇಲ್ಲಿನ ಪ್ಲಾಟ್‌ಪಾರ್ಮ್‌ಗಳು ಸ್ಕ್ರೀನ್ ಡೋರ್ ಹೊಂದಿರಲಿವೆ. ಇದು ಯಾವುದೇ ಸಂಭವನೀಯ ಅನಾಹುತ ಆಗದಂತೆ ತಡೆಯಲು ಅನುಕೂಲವಾಗುತ್ತದೆ.

ಈಗಾಗಲೇ ಹಳದಿ ಮಾರ್ಗ ಸಿದ್ಧವಾಗಿದೆ. ಇಲ್ಲಿ ಈ ಪಿಎಸ್‌ಡಿ ವ್ಯವಸ್ಥೆ ಮಾಡಲಾಗಿಲ್ಲ. ಒಂದೆರಡು ಆತ್ಮಹತ್ಯೆ ಪ್ರಕರಣಗಳು, ಅನಾಹುತಗಳು ಸಂಭವಿಸಿದ ಬೆನ್ನಲ್ಲೆ ಎಚ್ಚೆತ್ತ ನಮ್ಮ ಮೆಟ್ರೋ ಸದ್ಯ ಮೆಜೆಸ್ಟಿಕ್‌ನಲ್ಲಿ ಬ್ಯಾರಿಕೇಡ್ ರೀತಿಯಲ್ಲಿ ಅಳವಡಿಕೆ ಮಾಡಿದೆ. ವಾಸ್ತವದಲ್ಲಿ ಪಿಎಸ್‌ಡಿ ಬೇರೆ ರೀತಿಯಲ್ಲಿರುತ್ತದೆ.
ಏನಿದು ಪಿಎಸ್‌ಡಿ ವ್ಯವಸ್ಥೆ?
ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ವ್ಯವಸ್ಥೆಯು ಬೆಂಗಳೂರಿನ ಯಾವೊಂದು ನಿಲ್ದಾಣದಲ್ಲಿ ನಿರ್ಮಿಸಲಾಗಿಲ್ಲ. ದೆಹಲಿ, ಮುಂಬೈ ಹೈದರಾಬಾದ್ ಇತರೆಡೆ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಅಂಚಿನಲ್ಲಿ ಬಾಗಿಲು ರೀತಿ ಆಟೋ ಮ್ಯಾಟಿಕ್ ಸ್ಕ್ರೀನ್ ಡೋರ್ ನಿರ್ಮಿಸಿರಲಾಗುತ್ತದೆ. ರೈಲು ಬರುವವರೆಗೂ ಇದು ತೆರೆಯುವುದಿಲ್ಲ. ರೈಲು ಬರುತ್ತಿದ್ದಂತೆ ಮೆಟ್ರೋ ಬಾಗಿಲು ತೆರೆದಂತೆ ಇದು ತೆರೆದುಕೊಳ್ಳುತ್ತದೆ. ರೈಲು ಹೋದ ಬಳಿಕ ಮತ್ತೆ ಬಾಗಿಲು ಹಾಕಿಕೊಳ್ಳುವ ವ್ಯವಸ್ಥೆ ಆಗಿದೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ನಲ್ಲಿ ಕಾಣುವ ಹಳದಿ ಗೆರೆ ದಾಟದಂತೆ ಆಗಾಗ ಸಿಬ್ಬಂದಿ ಪ್ರಯಾಣಿಕರನ್ನು ಎಚ್ಚರಿಸುತ್ತಿರುತ್ತಾರೆ. ಈ ಹಳದಿ ಲೈನ್ ಸ್ಥಳದಲ್ಲಿ ಪಿಎಸ್‌ಡಿ ವ್ಯವಸ್ಥೆ ನಿರ್ಮಾಣವಾಗಬಹುದು ಎನ್ನಲಾಗಿದೆ.
ಅತ್ತಿಗುಪ್ಪೆ, ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ತಲಾ ಒಬ್ಬರು ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುವಾಗ ಆತ್ಮಹತ್ಯೆಗೆ ವ್ಯಕ್ತಿ ಯತ್ನಿಸಿದ್ದ. ಇಂತಹ ಘಟನೆ ಮರುಕಳಿಸಿದಂತೆ ಈ ಪಿಎಸ್‌ಡಿ ವ್ಯವಸ್ಥೆ ತಡೆಯುತ್ತದೆ.
ಸುರಂಗ ಕೊರೆಯುವ ಸವಾಲು
ಗುಲಾಬಿ ಮಾರ್ಗದಲ್ಲಿ ಹಂತ 1 ಮತ್ತು ಹಂತ 2 ರ ಅಡಿಯಲ್ಲಿ ಕಾಮಗಾರಿ, ಸುರಂಗ ಕೊರತೆ ನಡೆಸಲಾಯಿತು. ಈ ಸುರಂಗವೇಳೆ ಸಾಕಷ್ಟು ಸವಾಲುಗಳನ್ನು ಎದುರಿಸಿರುವ ಸಿಬ್ಬಂದಿ, ಐದು ವರ್ಷದ ಬಳಿಕ ಕೊನೆಗೂ ಯಶಸ್ವಿಯಾಗಿದ್ದಾರೆ. ಶೀಘ್ರವೇ ಇತರ ಸಿವಿಲ್ ಕೆಲಸ ಪೂರ್ಣಗೊಳ್ಳಲಿದ್ದು, ಟ್ರ್ಯಾಕ್ ಕೆಲಸಗಳು ನಡೆಯಲಿವೆ. ಬಳಿಕ ಸಿಗ್ನಲ್, ವಿದ್ಯುತ್ ಸರಬರಾಜು ಕೆಲಸಗಳು ಆಗಿ 2026ರ ಹೊತ್ತಿಗೆ ಈ ಮಾರ್ಗವು ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
ನಮ್ಮ ಮೆಟ್ರೊ ಗುಲಾಬಿ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗರವಾರವರೆಗೆ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ ಎಂಜಿ ರಸ್ತೆ, ಡೈರಿ ವೃತ್ತ ಇನ್ನಿತರ ಪ್ರಮುಖ ಬಡಾವಣೆಗಳ ಮಾರ್ಗವಾಗಿ ಈ ಲೈನ್ ಸಾಗುತ್ತದೆ. ಎಂಜಿ ರಸ್ತೆಯಲ್ಲಿ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ಈಗಾಗಲೇ ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications