Namma Metro Pink Line: ಹೆಚ್ಚುವರಿ ಬೋಗಿಗಳಿಗಾಗಿ ₹405 ಕೋಟಿ ಹೊಸ ಒಪ್ಪಂದ: 2026ಕ್ಕೆ ಲೈನ್ ಲೋಕಾರ್ಪಣೆ
ಬೆಂಗಳೂರು, ಏಪ್ರಿಲ್ 29: ಬೆಂಗಳೂರಿನಲ್ಲಿ ಜಾಲ ವಿಸ್ತರಣೆ ಮಾಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ರೈಲು ಕೋಚ್ ಉತ್ಪಾದಿಸುವ ಬಿಇಎಂಎಲ್ (BEML) ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಬಹುಕೋಟೆ ಮೊತ್ತದ ಒಪ್ಪಂದದಡಿ ಹೆಚ್ಚುವರಿಯಾಗಿ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಹೊಂದಿರುವ ಆಧುನಿಕ ಮೆಟ್ರೋ ಕೋಚ್‌ಗಳು ಬೆಂಗಳೂರಿಗೆ ಬರಲಿವೆ. ಈ ಮೂಲಕ 2026 ರಲ್ಲಿ ಗುಲಾಬಿ ಮಾರ್ಗ (metro pink line) ಉದ್ಘಾಟನೆಗೆ ಮೆಟ್ರೋ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಭವಿಷ್ಯದಲ್ಲಿ ರೈಲುಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಡಿ ಸುಗಮ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಈ ಹೊಸ ಕೋಚ್ ಸಹಕಾರಿಯಾಗಲಿವೆ. ಗುಲಾಬಿ ಮಾರ್ಗಕ್ಕಾಗಿ ಬೆಂಗಳೂರು ಮೆಟ್ರೋ ರೂ.405 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಇದರಡಿ ಸಿಬಿಟಿಸಿ ವ್ಯವಸ್ಥೆ ಹೊಂದಿರುವ 42 ಹೆಚ್ಚುವರಿ ಬೋಗಿಗಳನ್ನು ಖರೀದಿಸಲು ಮುಂದಾಗಿದೆ ಎಂದು 'ಬೆಂಗಳೂರು ಮಿರರ್' ವರದಿ ಮಾಡಿದೆ.

ಈ ಒಪ್ಪಂದದಿಂದ ಗುಲಾಬಿ ಮಾರ್ಗದ ಆರಂಭವಾದರೆ ಮುಂದಿನ ವರ್ಷಾಂತ್ಯಕ್ಕೆ ರೈಲು ಕೊರತೆ ನೀಗಿಸುತ್ತದೆ. ಈಗಾಗಲೇ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗಗಳಲ್ಲು ರೈಲುಗಳ ಕೊರತೆ ಎದುರಿಸುತ್ತಿವೆ. ರೈಲುಗಳ ಪೂರೈಕೆ ವಿಳಂಬದಿಂದಲೇ ಮೆಟ್ರೋ ಹಳದಿ ಮಾರ್ಗ ತೆರೆಯುವುದು ವಿಳಂಬವಾಗುತ್ತಿದೆ.
ಈ ಪಿಂಕ್ ಲೈನ್ ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಒಟ್ಟು 21.76 ಕಿ.ಮೀ. ನಿರ್ಮಾಣವಾಗುತ್ತಿದೆ. ಈಗಾಗಲೇ ರಸ್ತೆ ಟನಲ್ ರಸ್ತೆ ಕೊರೆಯುವ ಶೇಕಡಾ 96ರಷ್ಟು ಪೂರ್ಣಗೊಂಡಿದೆ. ಒಂದು ಕಡೆ ಟನಲ್ ಕೆಲಸ ಜೊತೆಗೆ ಮೆಟ್ರೋ ನಿಲ್ದಾಣ ನಿರ್ಮಾಣ ಜೊತೆಗೆ ಹಳಿ ಜೋಡಣೆ ಕಾರ್ಯವು ನಡೆದಿದೆ.
ಪಿಂಕ್ ಮಾರ್ಗದಲ್ಲಿ 23 ರೈಲು ಸಂಚಾರ
ಹೀಗೆ ಹೊಸ ಹೊಸ ರೈಲು ಮಾರ್ಗಗಳು ನಿರ್ಮಾಣ ಯೋಜನೆಗಾಗಿ ರೈಲುಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ. ಮೆಟ್ರೋ ನೀಲಿ ಮಾರ್ಗವು ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ. ಇದು ಸಹ 2026ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಭವಿಷ್ಯದ ಅಗತ್ಯತೆ ದೃಷ್ಟಿಯಿಂದ BMRCL ಈಗಾಗಲೇ 318 ಬೋಗಿಗಳನ್ನು (53 ಸೆಟ್ ರೈಲು) ಪೂರೈಕೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಲ್ಲಿ 16 ಸೆಟ್ ರೈಲುಗಳನ್ನು ಗುಲಾಬಿ ಮಾರ್ಗಕ್ಕೆ ಮೀಸಲಾಗಲಿವೆ. ಇದೀಗ ಅದಕ್ಕೆ ಹೊಸ ಒಪ್ಪಂದದ ಪ್ರಕಾರ ಸಿಬಿಟಿಸಿಯ 07 ಸೆಟ್ ರೈಲುಗಳು ಸೇರಿ 23 ರೈಲುಗಳು ಪಿಂಕ್ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ.
ವಿಶಿಷ್ಟ ವಿನ್ಯಾಸದ ಮೆಟ್ರೋ ಕೋಚ್‌ಗಳು
ಬಿಎಂಆರ್‌ಸಿಎಲ್ ಮೆಟ್ರೋ ಯೋಜನೆಗಳಿಗಾಗಿ ಜಪಾನ್ JICA ಸಂಸ್ಥೆಯು ಬರೋಬ್ಬರಿ 3,177 ಕೋಟಿ ರೂಪಾಯಿ ಯೋಜನೆಗೆ ಹಣಕಾಸು ಸಹಾಯ ನೀಡಲಿವೆ. ಹೊಸದಾಗಿ ಸೇರ್ಪಡೆ ಆಗುವ ರೈಲುಗಳು ಚಾಲಕ ರಹಿತವಾಗಿವೆ. ಈಗಾಗಲೇ ಚೀನಾದಿಂದ ಕೊಲ್ಕತ್ತ ಮಾರ್ಗವಾಗಿ ಎರಡು ಚಾಲಕ ರಹಿತ ರೈಲುಗಳು ಹಳದಿ ಮಾರ್ಗಕ್ಕಾಗಿ ಬೆಂಗಳೂರಿಗೆ ಬಂದಿವೆ. ಪ್ರತಿ ಕೋಚ್‌ಗಳು ಎಸಿ ವ್ಯವಸ್ಥೆ, ಸುಧಾರಿತ ಪ್ರಯಾಣಿಕ ಸ್ನೇಹಿ ವ್ಯವಸ್ಥೆ, ನಾಮಫಲಕ, ಸುರಕ್ಷತಾ ವೈಶಿಷ್ಟ್ಯಗಳು, ಉತ್ತಮ ಒಳಾಂಗಣ ಹೊಂದಿರುತ್ತವೆ.












Click it and Unblock the Notifications