Namma metro: ಬೆಂಗ್ಳೂರಲ್ಲಿ ಪೆಡಲ್ ಟು ಮೆಟ್ರೋ ಅಭಿಯಾನ, ಏನಿದು ಹಾಗೂ ಇದರ ಉದ್ದೇಶ ಏನು ಗೊತ್ತಾ?-ಮಾಹಿತಿ

ಬೆಂಗಳೂರು, ನವೆಂಬರ್‌, 27: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲೇ ಬರುತ್ತಿದೆ. ಇದೀಗ ನಗರದಲ್ಲಿ ಮೆಟ್ರೋ ನಿಲ್ದಾಣಗಳಿಗೆ ತಲುಪುವುದಕ್ಕೆ ಸೈಕಲ್ ಬಳಕೆಯನ್ನು ಉತ್ತೇಜಿಸುವುದಕ್ಕೆ ಪೆಡಲ್ ಟು ಮೆಟ್ರೋ ಅಭಿಯಾನವನ್ನು ಆಯೋಜನೆ ಮಾಡಲಾಗುತ್ತು. ಅಷ್ಟಕ್ಕೂ ಈ ಅಭಿಯಾನದಿಂದ ಆಗುವ ಪ್ರಯೋಜನೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೌನ್ಸಿಲ್ ಫಾರ್ ಆಕ್ಟೀವ್ ಮೊಬಿಲಿಟಿ (CFAM) ವರ್ಲ್ಡ್ ರಿಸೋರ್ಸಸ್ ಇನ್ಸ್‌ಟಿಟ್ಯೂಟ್ (WRI), ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (BAF) ಸಹಯೋಗದಲ್ಲಿ ಯೆಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಕ್ಕಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯ 9 ಮೆಟ್ರೋ ನಿಲ್ದಾಣಗಳಲ್ಲಿ 200 ಸೈಕಲ್ ಸ್ಟ್ಯಾಂಡ್‌ಗಳನ್ನು ಹೊಂದಿದೆ.

Namma metro: Pedal to Metro campaign in Bengaluru

ಬಿಎಂಟಿಸಿಯಲ್ಲಿ ಹಾಗೂ ಸಾರಿಗೆ ನಿರ್ವಹಣಾ ಕೇಂದ್ರಗಳಲ್ಲಿ 11 ಸೈಕಲ್ ಸ್ಟ್ಯಾಂಡ್‌ಗಳನ್ನು ಹೊಂದಿದೆ. ಬೈಸಿಕಲ್ ಪಾರ್ಕಿಂಗ್ ಸೌಲಭ್ಯಗಳ ಬಗ್ಗೆ ಈ ಅಭಿಯಾನದ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತದೆ. ಈ ಅಭಿಯಾನದಲ್ಲಿ ದಕ್ಷಿಣ ಬೆಂಗಳೂರಿನ ನಿವಾಸಿಗಳು ಉತ್ಸಾಹದಿಂದ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಸಸ್ಟೈನಬಲ್ ಮೊಬಿಲಿಟಿ ನೆಟ್‌ವರ್ಕ್ (SMN) ನಕ್ಷೆ ಯೋಜನೆಯಿಂದ ಬೆಂಬಲಿತವಾದ ಈ ಯೋಜನೆಯ ಸಕ್ರಿಯ ಚಲನಶೀಲತೆಯ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವತ್ತ ಗಮನಹರಿಸಿದೆ. ನಿರ್ದಿಷ್ಟವಾಗಿ ಮೋಟಾರು ಸಾರಿಗೆಗೆ ಪರ್ಯಾಯವಾಗಿ ವಾಕಿಂಗ್ ಮತ್ತು ಸೈಕ್ಲಿಂಗ್ ಅನ್ನು ಈ ಯೋಜನೆ ಹೊಂದಿದೆ ಎಂದು ಇನ್ಸ್‌ಟಿಟ್ಯೂಟ್ ಇಂಡಿಯಾದ ಸಹವರ್ತಿ ಶ್ರೀನಿವಾಸ್ ಅಲವಿಲ್ಲಿ ಹೇಳಿದರು ಅಂತಾ ಕನ್ನಡಪ್ರಭ ವರದಿ ಮಾಡಿದೆ.

ಈ ಅಭಿಯಾನದಲ್ಲಿ ಭಾಗಿಯಾಗಿದ್ದವರು ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಸುಮಾರು 5 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ತಮ್ಮ ಮನೆಗಳಿಂದ ಸೈಕಲ್ ಸವಾರಿ ಮಾಡಿದರು. ಮತ್ತು ತಮ್ಮ ರೈಡ್ ಟ್ರ್ಯಾಕ್ ಮಾಡಲು ಹವಾಮಾನ AltMo ಅನ್ನು ಉಪಯೋಗುಸಿದರು. ಭಾಗವಹಿಸುವವರು ಒದಗಿಸಿದ ಸಂಚಾರ ಮಾರ್ಗಗಳನ್ನು ಎಸ್ಎಂಎನ್ ನಕ್ಷೆಗೆ ಸೇರಿಸಲಾಗಿದ್ದು, ಇದು ಮೊದಲ ಮತ್ತು ಕೊನೆಯ ಹಂತದ ಮೆಟ್ರೋ ಸಂಪರ್ಕಕ್ಕಾಗಿ ಸುರಕ್ಷಿತ ಮತ್ತು ಪರ್ಯಾಯ ಮಾರ್ಗಗಳ ಮೌಲ್ಯಯುತ ಮಾಹಿತಿ ನೀಡಲಿದೆ.

ಬೆಂಗಳೂರಿನ ಬೈಸಿಕಲ್ ಮೇಯರ್ ಮತ್ತು ಸಿಎಫ್‌ಎಎಂ ಸಂಸ್ಥಾಪಕ ಸತ್ಯ ಶಂಕರನ್ ಈ ಬಗ್ಗೆ ಮಾತನಾಡಿ, ಬೈಸಿಕಲ್ ಕಡಿಮೆ ವೆಚ್ಚದ ಹೂಡಿಕೆ ಆಗಿದ್ದು, ಇತರ ಯಾವುದೇ ಸಾರಿಗೆ ವಿಧಾನಗಳಿಗೆ ಆರೋಗ್ಯಕರ ಪರ್ಯಾಯ ಆಗಿದೆ. ವಿಶೇಷವಾಗಿ ನಡೆದು ಹೋಗುವ ದೂರವನ್ನು ಮೀರಿದ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಸಾರಿಗೆ ಸೇವೆಗಳನ್ನು ತಲುಪಲು ಸಹಕಾರಿ ಆಗಿರಲಿದೆ. ಈ ಅಭಿಯಾನವು ನಿಲ್ದಾಣಗಳನ್ನು ತಲುಪಲು ಸುರಕ್ಷಿತ ಮಾರ್ಗಗಳನ್ನು ಕಂಡುಹಿಡಿಯಲು ಜನರಿಗೆ ಅನುವು ಮಾಡಿಕೊಡುವ ಪ್ರಯತ್ನ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+