namma metro: ಮೆಟ್ರೋ ನಿಲ್ದಾಣದ ಹೊರಗೆ ಅರ್ಧ ಕಿ.ಮೀ ಕ್ಯೂ ನಿಂತ ಜನ!
ಬೆಂಗಳೂರಿಗೆ ತುರ್ತು ಪ್ರಯಾಣ ಸೇವೆ ಒದಗಿಸುತ್ತಿರುವ ನಮ್ಮ ಮೆಟ್ರೋಗೆ ಹಲವರು ಫಿದಾ ಆಗಿದ್ದಾರೆ. ಆದರೆ, ಇತ್ತೀಚೆಗೆ ಮೆಟ್ರೋ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರುತ್ತಿರುವ ಕಾರಣ, ನಿಲ್ದಾಣಗಳಲ್ಲಿ ಮಾತ್ರವಲ್ಲದೆ ಹೊರಗಿನವರೆಗೆ ಪ್ರಯಾಣಿಕರು ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಇನ್ನು ದೀಪಾವಳಿ, ರಾಜ್ಯೋತ್ಸವ ಹಾಗೂ ವೀಕೆಂಡ್ ಹಿನ್ನೆಲೆ ಸಾಲು ಸಾಲು ರಜೆ ಇದ್ದ ಕಾರಣ ಮುಕ್ಕಾಲು ಬೆಂಗಳೂರು ಖಾಲಿಯಾಗಿತ್ತು. ತಮ್ಮ ಊರುಗಳಿಗೆ ಹೋಗಿದ್ದ ಜನರೆಲ್ಲ ಇಂದಿನಿಂದ ಕೆಲಸಗಳು, ಶಾಲಾ ಕಾಲೇಜುಗಳಿಗೆ ಹೋಗಬೇಕಾದ ಕಾರಣ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಈ ಹಿನ್ನೆಲೆ ಬೆಂಗಳೂರು ಪ್ರವೇಶಿಸುವ ಪ್ರಮುಖ ರಸ್ತೆಗಳೆಲ್ಲವೂ ನಿನ್ನೆ ಸಂಜೆಯಿಂದಲೇ ಫುಲ್ ಜಾಮ್ ಆಗಿದ್ದವು. ಇಂದು ಬೆಳಿಗ್ಗೆ ಕೂಡ ಟ್ರಾಫಿಕ್ ಜಾಮ್ ಕಂಡುಬಂದಿದೆ. ಮತ್ತೊಂದೆಡೆ ಮೆಟ್ರೋದಲ್ಲಾದರೂ ಹೋದರೆ ಬೇಗ ತಲುಪಬಹುದು ಎಂದು ಭಾವಿಸಿ, ಮೆಟ್ರೋ ನಿಲ್ದಾಣಗಳತ್ತ ನುಗ್ಗಿದ ಕಾರಣ ಅಲ್ಲಿಯೂ ಜನದಟ್ಟಣೆ ಕಂಡುಬಂದಿದೆ.
This isn’t just any long line for cricket or event tickets—this extensive queue is simply to enter Nagasandra Metro Station. Following the Deepavali long weekend, commuters are returning to find unprecedented crowds at the station, with lines stretching far outside. The massive… pic.twitter.com/EIT7JHlnAl
— Karnataka Portfolio (@karnatakaportf) November 4, 2024
ದೀಪಾವಳಿ ಹಬ್ಬ, ರಾಜ್ಯೋತ್ಸವ ಹಾಗೂ ವಾರಾಂತ್ಯ ರಜೆ ಸೇರಿದ ಸಾಲು ಸಾಲು ರಜೆ ಸಿಕ್ಕಿದ್ದ ಕಾರಣ ಎಲ್ಲರೂ ತಮ್ಮ ಊರುಗಳತ್ತ ತೆರಳಿದ್ದರು. ಇಂದು ಬೆಳಿಗ್ಗೆಯಿಂದಲೇ ಎಲ್ಲರೂ ಬೆಂಗಳೂರಿಗೆ ಎಂಟ್ರಿ ನೀಡಿದ್ದು, ಎಲ್ಲೆಡೆ ಟ್ರಾಫಿಕ್ ಕಿರಿಕಿರಿ ಇದ್ದಿದ್ದರಿಂದ ನಮ್ಮ ಮೆಟ್ರೋದಲ್ಲಿ ಹೋಗಲು ಮುಗಿಬಿದ್ದರು. ಅದರಲ್ಲೂ ಮುಖ್ಯವಾಗಿ ಹಸಿರು ಮಾರ್ಗದ ಮೆಟ್ರೋ ರೈಲುಗಳು ಬಹುತೇಕ ಜನರಿಂದ ತುಂಬಿತುಳುಕಾಡಿವೆ.
ಬೆಂಗಳೂರಿಗೆ ಒಂದು ರೀತಿಯಲ್ಲಿ ತುಮಕೂರು ರಸ್ತೆಯನ್ನು ಹೆಬ್ಬಾಗಿಲು ಎಂದು ಕರೆಯುತ್ತಾರೆ. ಬಹುತೇಕ ಜಿಲ್ಲಗಳಿಗೆ ಈ ಮಾರ್ಗದಿಂದಲೇ ಪ್ರಯಾಣಿಸಬೇಕಾದ ಕಾರಣ ವಿವಿಧ ಜಿಲ್ಲೆಗಳಿಂದ ಜನ ಇದೇ ಮಾರ್ಗದಲ್ಲಿ ಬಂದು ದಟ್ಟಣೆ ಹೆಚ್ಚಾಗಿತ್ತು. ಅಲ್ಲಿ ನಾಗಸಂದ್ರ ಮೆಟ್ರೋ ನಿಲ್ದಾಣ ಸಿಗುವುದರಿಂದ ಟ್ರಾಫಿಕ್‌ಗೆ ಹೆದರಿ, ನೆಮ್ಮದಿಯಾಗಿ ಮೆಟ್ರೋದಲ್ಲಿ ಹೋಗೋಣ ಎಂದುಕೊಂಡಿದ್ದರು. ಕೊನೆಗೆ ಅಲ್ಲಿಯೂ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಯಿತು.

ಇನ್ನು ತುಮಕೂರು ರಸ್ತೆಯಲ್ಲಿ ಬರುವ ನಾಗಸಂದ್ರ ಮೆಟ್ರೋ ನಿಲ್ದಾಣದ ಹೊರಗೂ ಬರೋಬ್ಬರಿ ಅರ್ಧ ಕಿಲೋಮೀಟರ್‌ವರೆಗೆ ಜನ ಕ್ಯೂ ನಿಂತಿದ್ದರು ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೆಟ್ರೊ ನಿಲ್ದಾಣ ಮಾತ್ರವಲ್ಲದೆ, ಹೊರಗಿನ ರಸ್ತೆಯುದ್ದಕ್ಕೂ ಪ್ರಯಾಣಿಕರು ಸಾಲುಗಟ್ಟಿ ನಿಂತು ಬಳಿಕ ಪ್ರಯಾಣಿಸಿದ್ದಾರೆ.
ಅಲ್ಲದೆ ಮೆಟ್ರೋ ಹಸಿರು ಮಾರ್ಗದಲ್ಲಿ ಉಳಿದ ಮೂರು ಮೆಟ್ರೋ ನಿಲ್ದಾಣಗಳ ಉದ್ಘಾಟನೆ ಕೂಡ ವಿಳಂಬವಾಗಿದ್ದು, ಇದರಿಂದಲೂ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ. ಹಸಿರು ಮಾರ್ಗದಲ್ಲಿ, ವಿಶೇಷವಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಅಲ್ಲಿ ಪ್ರಯಾಣಿಕರು ಸುಮಾರು ಜನರು 500 ಮೀಟರ್‌ಗಿಂತಲೂ ಹೆಚ್ಚು ಉದ್ದದ ಕ್ಯೂ ನಿಲ್ಲುವ ಸ್ಥಿತಿ ಇದೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
ಪ್ರಸ್ತುತ ಮೆಟ್ರೋ ಸಂಸ್ಥೆಯು ಮೂಲಸೌಕರ್ಯ ಹೆಚ್ಚಿಸಲು ಹೆಣಗಾಡುತ್ತಿರುವ ಕಾರಣ, ಪ್ರಯಾಣಿಕರ ದಟ್ಟಣೆ ಹಾಗು ಕಾಯುವ ಸಮಯವನ್ನು ಹೆಚ್ಚಿಸಿದೆ. ಆದಷ್ಟು ಬೇಗನೆ ಈ ಮಾರ್ಗದ ಉಳಿದ ಮೂರು ನಿಲ್ದಾಣಗಳನ್ನು ಉದ್ಘಾಟನೆ ಮಾಡಿದರೆ, ಉಳಿದ ನಿಲ್ದಾಣಗಳ ಮೇಲಿನ ಒತ್ತಡ ಕೂಡ ಕಡಿಮೆಯಾಗಲಿದೆ. ಪ್ರತಿದಿನ ಎದುರಿಸುತ್ತಿರುವ ದಟ್ಟಣೆ ಸಮಸ್ಯೆ ಕೂಡ ತಗ್ಗಲಿದೆ ಎಂದು ಬಿಎಂಆರ್‌ಸಿಎಲ್‌ಗೆ (ಮೆಟ್ರೋ) ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications