Namma Metro: ಹೆಬ್ಬಾಳ-ಸರ್ಜಾಪುರ ನ್ಯೂ ಲೈನ್ ಡಿಪೋ ನಿರ್ಮಾಣದ ಅಪ್ಡೇಟ್ಸ್
ಬೆಂಗಳೂರು, ಜನವರಿ 16: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೆಬ್ಬಾಳದಿಂದ ಸರ್ಜಾಪುರವರೆಗೆ ಹೊಸ ಮೆಟ್ರೋ ಮಾರ್ಗ ನಿರ್ಮಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಈ ಮಾರ್ಗದಲ್ಲಿ ಅಗತ್ಯವಾಗಿರುವ ಡಿಪೋ ನಿರ್ಮಾಣದ ಅಪ್ಡೇಟ್ ಮಾಹಿತಿ ದೊರೆದಿದೆ. ಸರ್ಜಾಪುರ ವೃತ್ತದ ಹಿಂದೆ 55 ಎಕರೆ ಖಾಸಗಿ ಭೂಮಿಯನ್ನು ಡಿಪೋ ನಿರ್ಮಿಸಲು ಗುರುತಿಸಲಾಗಿದೆ.
ಬೆಂಗಳೂರು ಮೆಟ್ರೋ ಹೆಬ್ಬಾಳ- ಸರ್ಜಾಪುರ ವರೆಗೆ ಒಟ್ಟು 36 ಕಿಲೋ ಮೀಟರ್ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸದ್ಯ ಭೂಸ್ವಾಧಿನ ಕಾರ್ಯಕ, ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ. ಇದರ ಭಾಗವಾಗಿ ಡಿಪೋ ನಿರ್ಮಿಸಲು, ಅಗತ್ಯವಾದ ಜಮೀನನ್ನು ಗುರುತಿಸಲಾಗಿದೆ ಎಂದು 'ಡಿಎಚ್' ವರದಿ ಮಾಡಿದೆ.

ಡಿಪೋ ನಿರ್ಮಿಸಲು ಗುರುತಿಸಿದ ವಿಶಾಲ ಭೂಮಿಯಲ್ಲಿ ಸಿಬ್ಬಂದಿ ವಸತಿಗೆ 6.65 ಎಕರೆ ಮುಕ್ತ ಭೂಮಿ ಮೀಸಲಾಡಗುತ್ತಿದೆ. ಇಲ್ಲಿನ ಕಾರ್ಯನಿರ್ವಹಣೆ ಇದು ಅವಶ್ಯವಾಗಿದೆ. ಸದ್ಯ ಈ ಭೂಮಿ ಖರೀದಿಗೆ ಸರ್ಕಾರ ಅಂದಾಜು 1,224 ಕೋಟಿ ರೂಪಾಯಿ ವ್ಯಯಿಸಬೇಕಿದೆ. ಇದರಲ್ಲಿ ವಿಶೇಷತೆ ಏನೆಂದರೆ ಈ ಭೂಮಿಯು ಹೆಬ್ಬಾಳ ಸುತ್ತಮುತ್ತಲಿನ ಭಾಗದಲ್ಲಿ ಬರಲಿದೆ. ಮೇಲಾದಿ ಇದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೇರಿ ಆಸ್ತಿಯಾಗಿದೆ.
ಈ ಹಿಂದೆ ಕೆಲವು ಭಾರಿ ಇದನ್ನು ಹಸ್ತಾಂತರಿಸುವಂತೆ ಬಿಎಂಆರ್‌ಸಿಎಲ್ ಕೇಳಿದೆ. ಅಲ್ಲದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಹ ಸಿಎಂ ಸಿದ್ದರಾಮಯ್ಯ ನೇತೃತ್ವದ ಹಾಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದರು. ಕೂಡಲೇ ಭೂಮಿ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಈ ಹೆಬ್ಬಾಳ ಭಾಗದಲ್ಲಿಕೇವಲ ಮೆಟ್ರೋ ಡಿಪೋ ಮಾತ್ರವೇ ನಿರ್ಮಾಣವಾಗುವುದಿಲ್ಲ. ಈ ಪ್ರದೇಶ ಭವಿಷ್ಯದ ಸಾರಿಗೆ ಹಬ್ ಆಗಿ ಗುರುತಿಸಿಕೊಳ್ಳಲಿದೆ. ಬಿಎಂಟಿಸಿ, ಉಪ ನಗರ ರೈಲು ಸೇರಿದಂತೆ ಮೆಟ್ರೋ ರೈಲುಗಳು ಇದೇ ಪ್ರದೇಶದಿಂದ ಹಾದು ಹೋಗಲಿದೆ. ಹೀಗಾಗಿ ಇಲ್ಲಿ ಎರಡು ಮೆಟ್ರೋ ಲೈನ್‌ಗಳು ಇಂಟರ್‌ಚೇಂಜ್ ಆಗುವ ನಿರೀಕ್ಷೆಗಳು ಇವೆ. ಬಿಎಂಟಿಸಿ ನಿಲ್ದಾಣಗಳು ಈ ವ್ಯಾಪ್ತಿಯಲ್ಲಿ ತಲೆ ಎಲತ್ತಲಿದೆ.
ಬಿಎಂಆರ್‌ಸಿಎಲ್ ಕೆಐಎಡಿಬಿ ವ್ಯಾಪ್ತಿಯ 45 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದೆ. ಬಿಎಂಆರ್‌ಸಿಎಲ್‌ಗೆ ಸರ್ಕಾರ ಈ ಜಾಗದ ಸಲುವಾಗಿ ತಾವು ಮಾಲೀಕರಿಗೆ 12 ರೂಪಾಯಿ ಪಾವತಿಸುವಂತೆ ತಿಳಿಸಿದೆ. ಆದರೆ ಇದು ತಮ್ಮ ಸುಪರ್ದಿಗೆ ಬಾರದ, ಕೆಐಎಡಿಬಿ ವಶದಲ್ಲಿರುವಾಗ ಹಣ ಪಾವತಿಸಿದರೆ ತೊಂದರೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಹಣ ಪಾವತಿಗೆ ನಮ್ಮ ಮೆಟ್ರೋ ಮುಂದಾಗಿಲ್ಲ ಎನ್ನಲಾಗಿದೆ.
ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಭೂಮಿ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಖಾಸಗಿ ಏಜೆನ್ಸಿಗೆ ನೇರವಾಗಿ ಹಣ ಪಾವತಿಗೆ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಸಚಿವರು ಮೌಖಿಕವಾಗಿ ಸೂಚನೆ ನೀಡಿದ್ದರು. ಅಷ್ಟು ಬಿಟ್ಟರೆ ಯಾವ ಸಂಸ್ಥೆಯವರು ಇದರ ಮುಂದಿನ ಹಂತ ಪ್ರಕ್ರಿಯೆಯನ್ನು ಮುಂದುವರೆಸುವ ಮನಸ್ಸು ಮಾಡಿಲ್ಲ.
28,405 ಕೋಟಿ ರೂ. ವೆಚ್ಚ ಮೆಟ್ರೋ ಕಾಮಗಾರಿ
ಒಟ್ಟು 36 ಕಿಮೀ ಹೆಬ್ಬಾಳ-ಸರ್ಜಾಪುರ ಮೆಟ್ರೋ ಯೋಜನೆ ಹಂತ III-ಬಿ ಗೆ ಬರೋಬ್ಬರಿ 28,405 ಕೋಟಿ ರೂ. ವೆಚ್ಚವಾಗಗಬಹುದು. ಭೂಮಿ ಸ್ವಾಧೀನಕ್ಕೆ 8,000 ಕೋಟಿ ರೂ.ಆಗಬಹುದೆಎಂದು ಅಂದಾಜಿಸಲಾಗಿದೆ. ಒಟ್ಟು 161.65 ಎಕರೆ ಭೂಮಿ ಬೇಕಾಗಿದೆ. ರಾಜ್ಯ ಸರ್ಕಾರ ಅನುಮೋದನೆ ನೀಡಿದೆ, ಕೆಂದ್ರ ಸರ್ಕಾರ ಅನುಮತಿ ನೀಡುವ ಪೂರ್ವದಲ್ಲಿ ಜಾಗ, ಗುರುತಿಸಿ ಪ್ರಾಥಮಿಕ ಕಾರ್ಯಗಳನ್ನು ಮೆಟ್ರೋ ಅಧಿಕಾರಿಗಳು ಆರಂಭಿಸಿದ್ದಾರೆ..












Click it and Unblock the Notifications