Namma Metro Line: ಬಿಟಿಎಂ ಮತ್ತು ಎಚ್‌ಎಸ್‌ಆರ್ ಬಡಾವಣೆ ಸಂಪರ್ಕಿಸಲು ಗರ್ಡರ್ ನಿರ್ಮಾಣ
ಬೆಂಗಳೂರು, ಜನವರಿ 25: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಯಾವಾಗ 'ಹಳದಿ ಮೆಟ್ರೋ' ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರ ಮಾಡುತ್ತೇವೆ ಎಂದು ಕಾಯುತ್ತಿದ್ದಾರೆ. ಇದೀಗ ಈ ಮಾರ್ಗದಲ್ಲಿ ನಿರ್ಮಾಣ ಮಾಡುತ್ತಿದೆ. ಇದು ನಗರದ ಎರಡು ಪ್ರಮುಖ ಬಡಾವಣೆಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಬೆಂಗಳೂರು ಮೆಟ್ರೋ ರೈಲು ನಿಗಮವೇ (BRMCL) ಅಧಿಕೃತ ಲೋಕಾರ್ಪಣೆ ಮಾಡಲಿದೆ.
ನಮ್ಮ ಮೆಟ್ರೋ ಆರ್‌ವಿ.ರಸ್ತೆಯಿಂದ-ಬೊಮ್ಮಸಂದ್ರವರೆಗೆ ಹಳದಿ ಮಾರ್ಗ ನಿರ್ಮಾಣಗೊಂಡಿದೆ. ಈ ಮೆಟ್ರೋ ಲೈನ್‌ಗೆ ಹೊಂದಿಕೊಂಡಂತೆ ಬಿಎಂಆರ್‌ಸಿಎಲ್ ಗರ್ಡರ್ ನಿರ್ಮಿಸಿದೆ. ಹಳದಿ ಲೈನ್ ನಿಂದ ಎಚ್‌ಎಸ್‌ಆರ್ ಲೇಔಟ್‌ನಿಂದ ಬಿಟಿಎಂ ಲೇಔಟ್‌ಗೆ ಸಂಪರ್ಕಿಸುವ ಫ್ಲೈಓವರ್ ಗೆ ಸಂಯೋಜಿಸಲು ಈ ಗರ್ಡರ್ ನಿರ್ಮಿಸಲಾಗಿದೆ.

ಮುಂದಿನ ದಿನಗಳಲ್ಲಿ ಈ ಗರ್ಡರ್ ಅನ್ನು ಫ್ಲೈಓವರ್ ಗೆ ಸಂಯೋಜಿಸುವ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಫ್ಲೈಓವರ್ ನಿಂದ ಈ ಭಾಗದಲ್ಲಿ ಉಂಟಾಗುವ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಬಿಎಂಆರ್‌ಸಿಎಲ್ ವಿಶ್ವಾಸ ವ್ಯಕ್ತಪಡಿಸಿದೆ.
ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಯಲ್ಲಿ ಗರ್ಡರ್ ನಿರ್ಮಾಣವು ಒಂದು ಮಹತ್ವದ ಯೋಜನೆಯಾಗಿದೆ. ಈ ಕುರಿತು @DevarajNadiger ಎಂಬುವವರು ಗರ್ಡರ್ ಸ್ಥಾಪಿಸಿದ್ದರ ಕುರಿತು ಫೋಟೋ ಹಂಚಿಕೊಂಡಿದ್ದಾರೆ. ಇದೇ ರೀತಿ ನೇರಳೆ ಮಾರ್ಗದಲ್ಲಿ ಕೆ.ಆರ್.ಪುರಂ ನಲ್ಲಿ ಫುಟ್ ಓವರ್ ಬಿಡ್ಜ್ ಅನ್ನು

ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಹೊಸ ಮೆಟ್ರೋ ರೈಲುಗಳು ಬರುತ್ತಿದ್ದಂತೆ ಕಾರ್ಯಾಚರಣೆ ಆರಂಭವಾಗಲಿದೆ. ಸದ್ಯ ಎರಡು ಡ್ರೈವರ್‌ಲೆಸ್ ರೈಲುಗಳು ಮಾತ್ರ ಇದ್ದು, ಸಿಗ್ನಲ್ ಟೆಸ್ಟ್, ಪ್ರಯಾಣಿಕರ ಸುರಕ್ಷತೆ, ಗುಣಮಟ್ಟ ಎಲ್ಲವು ಪರಿಶೀಲನೆ ಮುಗಿದಿದೆ. ಹೊಸ ಮೆಟ್ರೋ ರೈಲುಗಳು ಬರುತ್ತಿದ್ದಂತೆ ಕಾರ್ಯಾಚರಣೆ ಆರಂಭವಗಲಿದೆ. ಈ ಮಾರ್ಗಕ್ಕೆ ಟಿಟಾಗರ್ ರೈಲ್ ಸಿಸ್ಟಮ್ ಕಂಪನಿಯು ಕೋಚ್ ಪೂರೈಕೆ ಮಾಡುತ್ತಿದೆ.
ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಯಾವಾಗ?
ಇದೇ ಹಳದಿ ಮಾರ್ಗಕ್ಕಾಗಿ ಜನವರಿ 06ರಂದು ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿನ ಟಿಟಾಗರ್ ರೈಲು ತಯಾರಿಕೆ ಘಟಕದಿಂದ ಹಳದಿ ಮಾರ್ಗಕ್ಕೆ ಡ್ರವೈರ್‌ಲೆಸ್ ಹೊಸ ರೈಲು ಪೂರೈಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೇಂದ್ರ ಸಚಿವರು, ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಅಧಿಕಾರಿಗಳು, ಘಟಕದ ಮುಖ್ಯಸ್ಥರು ರೈಲನ್ನು ಬೆಂಗಳೂರಿಗೆ ರವಾನಿಸಿದ್ದಾರೆ. ಇನ್ನೊಂದು ವಾರದಲ್ಲಿ ಆ ರೈಲು ರಸ್ತೆ ಮಾರ್ಗ ಮೂಲಕ ಬೆಂಗಳೂರಿಗೆ ತಲುಪಲಿದೆ.
ಅರ್ಧಗಂಟೆಗೆ ಒಂದರಂತೆ ಈ ರೈಲುಗಳನ್ನು ಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳೂ ತಿಳಿಸಿವೆ. ಫೆಬ್ರವರಿ ಅಂತ್ಯಕ್ಕೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ಓಡಾಟ ಬಹುತೇಕ ಖಚಿತ ಎನ್ನಲಾಗುತ್ತಿದೆ. ರೈಲು ಬೆಂಗಳೂರಿಗೆ ಬಂದ ಬಳಿಕ ಈ ಬಗ್ಗೆ BMRCL ಅಧಿಕೃತ ಮಾಹಿತಿ ಪ್ರಕಟಿಸಲಿದೆ.












Click it and Unblock the Notifications