Namma Metro Kannada: ನಮ್ಮ ಮೆಟ್ರೋದಿಂದ ಅನ್ಯಭಾಷಿಕರಿಗೆ ಕನ್ನಡ ಪಾಠ!

Namma Metro Kannada: ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದಂದೇ ನಮ್ಮ ಮೆಟ್ರೋ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದೇ ಅನ್ಯಭಾಷಿಕರಿಗೂ ಕನ್ನಡ ಕಲಿಸುವುದು. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಅನ್ಯಭಾಷಿಕರ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಲ್ಲೇ ಇದೆ. ಅದರಲ್ಲೂ ಹಿಂದಿ ಭಾಷಿಕರ ನಡವಳಿಕೆ ಅಸಮಾಧಾನ ಹೆಚ್ಚುತ್ತಲ್ಲೇ ಇದೆ. ಇದೀಗ ನಮ್ಮ ಮೆಟ್ರೋ ಸಹ ಕನ್ನಡ ಕಲಿಸಲು ಮುಂದಾಗಿದೆ.

ಕನ್ನಡ ರಾಜ್ಯೋತ್ಸವದಂದೇ ಅನ್ಯಭಾಷಿಕರಿಗೆ ಕನ್ನಡ ಕಲಿಸಲು ನಮ್ಮ ಮೆಟ್ರೋ ಮುಂದಾಗಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ಅನ್ಯ ಭಾಷಿಕರಿಗೆ ಸರಳ ಕನ್ನಡ ವಾಕ್ಯಗಳ ಮೂಲಕ ಕನ್ನಡ ಕಲಿಸಲು ಮುಂದಾಗಿದೆ. ಸರಳ ಪದಗಳನ್ನು ವಿಡಿಯೋದ ಮೂಲಕ ಅನ್ಯಭಾಷಿಕರಿಗೆ ತಿಳಿಸಲಾಗುತ್ತಿದೆ.

Namma Metro Kannada Kannada lessons for non-native speakers from Namma Metro

Learn Kannada: ನಮ್ಮ ಮೆಟ್ರೋ ಸರಳ ಕನ್ನಡ ಪದಗಳ ಬಳಕೆಯ ಬಗ್ಗೆ ಅನ್ಯಭಾಷಿಕರಲ್ಲಿ ಜಾಗೃತಿ ಹಾಗೂ ಕಲಿಸುವ ಪ್ರಯತ್ನ ಶುರುಮಾಡಿದೆ. ಮೆಟ್ರೋದ ಈ ವಿನೂತನ ಕ್ರಮಕ್ಕೆ ಕನ್ನಡಿಗರು ಸಹ ಮೆಚ್ಚುಗೆ ಸೂಚಿಸಿದ್ದಾರೆ.

ಮೆಟ್ರೋ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ "ಕನ್ನಡವನ್ನು ಕಲಿಸೋದು ನಮ್ಮ ಜವಾಬ್ದಾರಿ ಮಾತ್ರ ಅಲ್ಲ, ನಿಮ್ಮದು ಕೂಡ. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು...

ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಹೇಳಲಾಗಿದೆ. ಮುಂದುವರಿದು ಕೆಲವು ಸರಳ ಕನ್ನಡ ವಾಕ್ಯಗಳನ್ನು ಹಾಗೂ ಮೆಟ್ರೋದಲ್ಲಿ ದಿನ ನಿತ್ಯವೂ ಬಳಸಬಹುದಾದ ಸಾಲುಗಳನ್ನು ಹಂಚಿಕೊಳ್ಳಲಾಗಿದೆ. ಈ ಸಾಲುಗಳನ್ನು ಪ್ರಯಾಣಿಕರೇ ಹೇಳಿದ್ದಾರೆ.

Namma Metro Kannada Kannada lessons for non-native speakers from Namma Metro

ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ನಿರೂಪಕಿ ಹೇಳಿದ್ದು. ಈ ರಾಜ್ಯೋತ್ಸವದಂದು ಅನ್ಯಭಾಷಿಕರಿಗೆ ಕೆಲವು ಸರಳ ಹಾಗೂ ಉಪಯೋಗಿ ಕನ್ನಡ ಪದಗಳನ್ನು ಹೇಳಿಕೊಡೋಣ ಎಂದಿದ್ದಾರೆ.

ಮುಂದುವರಿದು, ಯಾವ ಫ್ಲಾಟ್‌ ಫಾರ್ಮ್‌ಗೆ ಹೋಗಬೇಕು, ದಯವಿಟ್ಟು ಸ್ವಲ್ಪ ಜಾಗ ಬಿಡಿ, ಮೆಟ್ರೋ ಯಾವಾಗ ಬರುತ್ತೆ, ವಾಶ್‌ ರೂಮ್‌ ಎಲ್ಲಿದೆ, ನಾನು ಕನ್ನಡ ಕಲಿತಾ ಇದ್ದೀನಿ ಎನ್ನುವ ಸಾಲುಗಳನ್ನು ಕನ್ನಡಿಗರು ಹೇಳಿದ್ದಾರೆ. ಈ ಕನ್ನಡ ಸಾಲುಗಳನ್ನು ಇಂಗ್ಲಿಷ್‌ನಲ್ಲೂ ಪ್ರದರ್ಶಿಸಲಾಗಿದೆ. ಕೊನೆಯಲ್ಲಿ ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಎನ್ನುವ ಸಾಲುಗಳೊಂದಿಗೆ ಈ ವಿಡಿಯೋ ಅಂತ್ಯವಾಗಿದೆ.

ಇದು ಇದು ಬೇಕಿರೋದು, ಗೂಂಡಾಗಿರಿಯಲ್ಲಿ: ಮೆಟ್ರೋದ ಕನ್ನಡ ಕಲಿಸುವ ಪ್ರಯತ್ನಕ್ಕೆ ಕನ್ನಡಿಗರು ಮೆಚ್ಚುಗೆಯ ಸುರಿ ಮಳೆ ಸುರಿಸಿದ್ದಾರೆ. ಇದು ಇದು ಬೇಕಿರುವುದು ಗೂಂಡಾಗಿರಿಯಲ್ಲ ಎಂದಿದ್ದಾರೆ. ಇದು ಬೇಕು, ಕಿರುಕುಳ ಮತ್ತು ಗೂಂಡಾಗಿರಿ ಅಲ್ಲ. ತುಂಬಾ ಒಳ್ಳೆಯ ಉಪಕ್ರಮ. ಇದಕ್ಕೆ ನಾವೆಲ್ಲರೂ ಕೊಡುಗೆ ನೀಡಬಹುದು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಮೆಟ್ರೋದ ಒಳಗೆ ಸಹ ಈ ವಿಡಿಯೋ ಸಂದೇಶಗಳು ಹಂಚಿಕೊಳ್ಳುವ ವ್ಯವಸ್ಥೆ ಮಾಡಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋಗೆ ಎರಡು ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 23.8ಕೆ ವೀವ್ಸ್‌ ಆಗಿದೆ. ಮೆಟ್ರೋದಿಂದ ಒಳ್ಳೆಯ ಪ್ರಯತ್ನ ಮುಂದುವರಿಸಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+