ಹೊಸ ವರ್ಷದ ಗಿಫ್ಟ್: ಹಸಿರು ಮಾರ್ಗಕ್ಕೂ 6 ಬೋಗಿಗಳ ಮೆಟ್ರೋ ರೈಲು
ಬೆಂಗಳೂರು, ಡಿಸೆಂಬರ್ 29: ಪ್ರಯಾಣಿಕರಿಗೆ ಸಿಹಿಸುದ್ದಿ, ಆರು ಬೋಗಿಗಳ ಮೆಟ್ರೋ ರೈಲು ಇನ್ನುಮುಂದೆ ಹಸಿರು ಮಾರ್ಗ(ಯಲಚೇನಹಳ್ಳಿ-ನಾಗಸಂದ್ರ)ದ ನಡುವೆಯೂ ಸಂಚರಿಸಲಿದೆ.
ಹೌದು ಇಷ್ಟು ದಿನ ಆರು ಬೋಗಿಗಳ ಮೂರು ರೈಲುಗಳು ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿತ್ತು, ಇನ್ನುಮುಂದೆ ನಾಲ್ಕನೇ ರೈಲು ಹಸಿರು ಮಾರ್ಗದಲ್ಲಿ ಚಲಿಸಲಿದೆ.
ಈ ರೈಲನ್ನು ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಹಸಿರು ಮಾರ್ಗದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ. ಈ ರೈಲುಗಳನ್ನು ಮುಂದಿನ ಎರಡು ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.

ಹಸಿರು ಮಾರ್ಗದಲ್ಲಿ ಕೂಡ ಪೀಕ್ ಅವಧಿಯಲ್ಲಿ ಮಾತ್ರ ಆರು ಬೋಗಿಗಳ ಮೆಟ್ರೋ ಸಂಚರಿಸಲಿದೆ. ಹಸಿರು ಮಾರ್ಗ ಲಾಲ್‌ಬಾಗ್‌ಗೂ ಸಂಪರ್ಕ ನೀಡುತ್ತದೆ.
ಸಾಮಾನ್ಯವಾಗಿ ಭಾನುವಾರ ಹಾಗೂ ಶನಿವಾರ ಲಾಲ್‌ಬಾಗ್‌ಗೆ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ.
ಹಸಿರು ಮಾರ್ಗದಲ್ಲಿ ಮೊದಲ ಬಾರಿಗೆ ಮಹಿಳಾ ಬೋಗಿ ಮೀಸಲು ಸೌಲಭ್ಯ ದೊರೆಯಲಿದೆ. ಬೋಗಿಯ ಪ್ರವೇಶ ದ್ವಾರವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ
ನಾಯಂಡಹಳ್ಳಿ-ಬೈಯಪ್ಪನ ಹಳ್ಳಿ ಮಾರ್ಗದ ಟ್ರಿನಿಟಿ ವೃತ್ತದ ಬಳಿ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ರದ್ದುಪಡಿಸಲಾಗಿದೆ.
ಶುಕ್ರವಾರ ರಾತ್ರಿಯಿಂದ ಎಂಜಿ ರಸ್ತೆ ಹಾಗೂ ಇಂದಿರಾನಗರ ಮಧ್ಯೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಡಿಸೆಂಬರ್ 31ರಂದು ಎಂದಿನಂತೆ ಮೆಟ್ರೋ ಸಂಚರಿಸಲಿದೆ.












Click it and Unblock the Notifications