Double-Decker Flyover: ಬೆಂಗಳೂರು ಮೆಟ್ರೋ ಮೊದಲ 'ಡಬಲ್ ಡೆಕ್ಕರ್ ಫ್ಲೈಓವರ್' ಸಂಚಾರಕ್ಕೆ ರೆಡಿ: ದಿನಾಂಕ ಫಿಕ್ಸ್
ಬೆಂಗಳೂರು, ಜೂನ್ 13: ಬೆಂಗಳೂರು ನಮ್ಮ ಮೆಟ್ರೋ ಅನೇಕ ಕಡೆಗಳಲ್ಲಿ ಸುರಂಗ ಹಾಗೂ ಮೇಲ್ಸೇತುವೆ ಮಾರ್ಗ ನಿರ್ಮಿಸುತ್ತಿದೆ. ಈ ಪೈಕಿ ಬೆಂಗಳೂರಿನ ಮೊದಲ ಮೆಟ್ರೋ ಡಬಲ್ ಡೆಕ್ಕರ್ ಮೇಲ್ಸೇತುವೆ ಪೂರ್ಣಗೊಂಡಿದೆ. ಇನ್ನೇನು ಸಂಚಾರಕ್ಕೆ ಸಿದ್ಧವಾಗಿದ್ದು, ದಿನಾಂಕ ಸಹ ಫಿಕ್ಸ್ ಆಗಿದೆ.
ಬೆಂಗಳೂರು ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) ವರೆಗೆ ಆರ್‌ವಿ ರಸ್ತೆ-ಬೊಮ್ಮಸಂದ್ರ (ಮೆಟ್ರೋ ಹಳದಿ ರೇಖೆ) 3.3 ಕಿಮೀ ಉದ್ದದ ರಸ್ತೆ ಮೇಲ್ಸೇತುವೆ ಪೂರ್ಣಗೊಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಅಂತಿಮ ಪರಿಶೀಲನೆ ನಡೆಸಲಿದ್ದಾರೆ ಎಂದು BMRCL ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಇದು ಬೆಂಗಳೂರಿನ ಮೊದಲ ಢಬಲ್ ಡೆಕ್ಕರ್ ಫ್ಲೈಓವರ್ ಆಗಿದೆ. ರಸ್ತೆಯಲ್ಲಿ ನಿರ್ಮಿಸಲಾದ ಬೃಹತ್ ಕಂಬಗಳ ಮಧ್ಯ ಭಾಗದಲ್ಲಿರುವ ಫ್ಲೈಓವರ್‌ನ ಕೆಳಗಿನ ಡೆಕ್ ಮೇಲೆ ವಾಹನಗಳು ಸಂಚರಿಸುತ್ತವೆ. ಮತ್ತೊಂದು ಡೆಕ್ ನಮ್ಮ ಮೆಟ್ರೋ ರೈಲು ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ.
ಜೂನ್ 15 ರಿಂದ ಸಂಚಾರಕ್ಕೆ ಮುಕ್ತ
ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಅಂತಿಮ ಪರಿಶೀಲನೆ ನಡೆಸಲಿದ್ದಾರೆ. ಜೂನ್ 15 ರಂದು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಒಂದು ಬದಿಯಲ್ಲಿ ಮಾತ್ರ ಮೇಲ್ಸೇತುವೆಯ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.
BMRCL ಸೆಂಟ್ರಲ್ ಸಿಲ್ಕ್ ಬೊರ್ಡ್ ಜಂಕ್ಷನ್‌ನಲ್ಲಿ A,B,C,D ಮತ್ತುE ಎಂಬ ಐದು ಇಳಿಜಾರು ಲೂಪ್‌ಗಳು ಹಾಗೂ ಡೌನ್ ರ್ಯಾಂಪ್‌ಗಳನ್ನು ನಿರ್ಮಿಸಿದೆ. ಇದರಲ್ಲಿ A,B,C ಇಳಿಜಾರು ಕೆಆರ್ ಪುರಂ ಮತ್ತು ಹೊಸೂರು ರಸ್ತೆಯ ರಾಗಿಗುಡ್ಡ ಮತ್ತು ಬಿಟಿಎಂ ಲೇಔಟ್ ಕಡೆಯಿಂದ ಬರುವವರ ಸಂಚಾರಕ್ಕೆ ಅನುವು ಮಾಡಿಕೊಡುತ್ತವೆ.

ಡೌನ್ ರ್ಯಾಂಪ್ ಕೆಲಸ ಬಾಕಿ
ಇನ್ನೂ D ಮತ್ತುE ಡೌನ್ ರ್ಯಾಂಪ್‌ಗಳು ಕೆಆರ್ ಪುರಂ ಕಡೆಯಿಂದ ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ಭಾಗಕ್ಕೆ ಇಲ್ಲಿಂದ ಸಂಪರ್ಕ ಕಲ್ಪಿಸುತ್ತಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
A,B,C ರಾಂಪ್ ಗಳ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಈ ತಿಂಗಳು ಸಂಚಾರ ಆರಂಭವಾಗಲಿದೆ. ಳು ತೆರೆಯುವ ನಿರೀಕ್ಷೆಯಿದೆ. D ಮತ್ತುE ಡೌನ್ ರ್ಯಾಂಪ್‌ಗಳಲ್ಲಿ 2025 ಜೂನ್ ವೇಳಗೆ ಸಂಚಾರ ಆರಂಭವಾಗಬಹುದು ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಮಾಹಿತಿ ನೀಡಿದ್ದಾರೆ.
ಇಂದು ಬುಧವಾರ (ಜೂನ್ 13) ನಮ್ಮ ಮೆಟ್ರೋ ಹಳದಿ ರೇಖೆಯಲ್ಲಿ ಚಾಲಕ ರಹಿತ ಮೆಟ್ರೋಗಳ ಸಂಚಾರವನ್ನು ಮಾಡಲಾಗಿದೆ. ಆರ್‌ವಿ ರಸ್ತೆ - ಬೊಮ್ಮಸಂದ್ರ ವರೆಗಿನ ಮೆಟ್ರೋ ಮಾರ್ಗದಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಜೂನ್ 7 ರಂದು ನಿಗದಿಯಾಗಿದ್ದ ಈ ಪ್ರಾಯೋಗಿಕ ಸಂಚಾರವನ್ನು ತಾಂತ್ರಿಕ ಕಾರಣಗಳಿಂದ ಇಂದು ನಡೆಸಲಾಗಿದೆ.
ಸದ್ಯ ಒಂದು ಹಂತದ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಪರೀಕ್ಷೆ ವೇಳೆ ತಾಂತ್ರಿಕ ಲೋಪದೋಷಗಳನ್ನು ಪರಿಶೀಲಿಸಲಾಗಿದೆ. ಕೆಲವು ಪರೀಕ್ಷೆಗಳು ನಡೆಯಬೇಕಿದೆ. ಅಲ್ಲದೇ ಪರೀಕ್ಷೆ ಪೂರ್ಣವಾಗುವವರೆಗೂ ಮೆಟ್ರೋ ಬೋಗಿ ತಯಾರಿಸಿದ ಕಂಪನಿಯ ಸಿಬ್ಬಂದಿ, ಅಧಿಕಾರಿಗಳು ಬೆಂಗಳೂರಿನಲ್ಲಿರಲಿದ್ದಾರೆ. ಬೆಂಗಳೂರಿಗೆ ಇದು ಹಳದಿ ರೇಖೆಯಲ್ಲಿ ಓಡುತ್ತಿರುವ ಈ ರೈಲುಗಳು ಮೊದಲ ಚಾಲಕ ರಹಿತ ಮೆಟ್ರೋ ರೈಲುಗಳಾಗಿವೆ.












Click it and Unblock the Notifications