Namma Metro: ಜುಲೈನಲ್ಲಿ ದಾಖಲೆಯ 6.11 ಲಕ್ಷ ಪ್ರಯಾಣಿಕರ ಸಂಚಾರ, ಆಗಸ್ಟ್ ಬಳಿಕ ಇನ್ನೂ ಹೆಚ್ಚಳ, ಏಕೆ? ಕಾರಣ ತಿಳಿಯಿರಿ

ಬೆಂಗಳೂರು, ಆಗಸ್ಟ್ 08: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಜಾಲ ವಿಸ್ತರಿಸುತ್ತಿದೆ. ಇತ್ತ ಹಾಲಿ 70 ಕಿಲೋ ಮೀಟರ್ ಮೆಟ್ರೋ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಜುಲೈನಲ್ಲಿ ದಾಖಲೆಯ ಮಟ್ಟದಲ್ಲಿ ಅಂದರೆ 6.11 ಲಕ್ಷ ಜನರು ನಿತ್ಯ ಸಂಚಾರ ಮಾಡಿದ್ದಾರೆ. ಐಟಿ ಕಾರಿಡಾರ್ ಗೆ ಸಂಪರ್ಕ ಸಾಧಿಸಿರುವ ನೇರಳೆ ಮಾರ್ಗದಲ್ಲಿ ಬಾಕಿ 3.9 ಕಿಲೋ ಮೀಟರ್ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಕಳೆದ ನಾಲ್ಕು ತಿಂಗಳಲ್ಲಿ ಬೆಂಗಳೂರು ನಮ್ಮ ಮೆಟ್ರೋದ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗಿದೆ. ಜುಲೈನಲ್ಲಿ ದಾಖಲೆಯ 6.11 ಲಕ್ಷವನ್ನು ತಲುಪಿದೆ. ಈ ಹಿಂದಿನ ಜುಲೈ ತಿಂಗಳ 17 ದಿನಗಳಲ್ಲಿ ನಿತ್ಯ 6.2 ಲಕ್ಷಕ್ಕೂ ಹೆಚ್ಚು ಜನರು ಮೆಟ್ರೋ ಬಳಸಿದ್ದಾರೆ. ಜನವರಿ ತಿಂಗಳಿಗಿಂತ ಜುಲೈನಲ್ಲಿ ಶೇ. 16 ಪ್ರತಿಶತದಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಡಿಎಚ್ ವರದಿ ಮಾಡಿದೆ.

ಪ್ರತಿ ಮಾಸಿಕದಲ್ಲೂ ಸಹ ಅದರ ಹಿಂದಿನ ತಿಂಗಳಿಗಿಂತ ಮೆಟ್ರೋ ಬಳಕೆದಾರರು (Metro Ridership) ಸರಾಸರಿ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಇದನ್ನು ನಾವು ಕಳೆದ ಏಪ್ರಿಲ್‌ನಿಂದ ಜುಲೈ ತನಕ ದೊರೆ ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ.

namma-metro-daily-ridership-rise

ದಕ್ಷ ಸೇವೆಯಿಂದ ಪ್ರಯಾಣಿಕರ ಏರಿಕೆ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಹೆಚ್ಚಿದ ಪ್ರಯಾಣಿಕರ ಸಂಖ್ಯೆಯು ದಕ್ಷ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಈ ಕಾರಣಕ್ಕೆ ಶಕ್ತಿ ಯೋಜನೆ ಜಾರಿ ಹೊರತಾಗಿ ಹೆಚ್ಚು ಪ್ರಯಾಣಿಕರು ಮೆಟ್ರೋ ಸಾರಿಗೆ ಬಳಸುತ್ತಿದ್ದಾರೆ ಎಂಬುದಕ್ಕೆ ಈ ಅಂಕಿ ಸಂಖ್ಯೆಗಳು ಸಾಕ್ಷಿಯಾಗಿದೆ. ಸಾರಿಗೆ ವಿಚಾರದಲ್ಲಿ ಮೆಟ್ರೋ ಜನಪ್ರಿಯಗೊಳ್ಳುತ್ತಿದೆ ಎಂದು ವಿಮರ್ಶಿಸಲಾಗುತ್ತಿದೆ.

ಆಗಸ್ಟ್ ಬಳಿಕ ನಿತ್ಯ 7.5 ಲಕ್ಷ ಜನರ ಓಡಾಟ?

ಇದೇ ಆಗಸ್ಟ್ ತಿಂಗಳಾಂತ್ಯಕ್ಕೆ ವೇಳೆಗೆ 2.1 ಕಿಲೋ ಮೀಟರ್ ಉದ್ದದ ಕೆಆರ್ ಪುರ-ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ-ಚೆಲಘಟ್ಟ (1.9 ಕಿ.ಮೀ) ಮಾರ್ಗಗಳು ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಆಗಸ್ಟ್ ನಂತರ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷ ತಲುಪುವ ನಿರೀಕ್ಷೆ ಇದೆ ಎಂದು BMRCL ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ನಮ್ಮ ಮೆಟ್ರೋ ಅಧಿಕಾರಿಗಳು ಈ ಸಂಪರ್ಕ ಕೊಂಡಿ ಮಾರ್ಗಗಳಲ್ಲಿ ಪ್ರಾಯೋಗಿಕ ಸಂಚಾರ ಕಾರ್ಯ ಆರಂಭಿಸಿದ್ದಾರೆ.

ನೇರಳೆ ಮಾರ್ಗವಾದ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ನಿತ್ಯ 35,000 ಜನ ಪ್ರಯಾಣ ಮಾಡುತ್ತಾರೆ. ಇನ್ನೂ 70 ಕಿಮಿ ಮೆಟ್ರೋ ಜಾಲದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಆರು ಲಕ್ಷಕ್ಕೂ ಹೆಚ್ಚಿದೆ ಎಂಬುದರಲ್ಲಿ ಸಂಶವಿಲ್ಲ. ನಮ್ಮ ಮೆಟ್ರೋ ಕಳೆದ 12 ವರ್ಷಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದು ಅಧಿಕಾರುಗಳು ತಿಳಿಸಿದರು.

namma-metro-daily-ridership-rise

ಶಕ್ತಿ ಯೋಜನೆ ಬಳಿಕವು ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ 'ಶಕ್ತಿ ಯೋಜನೆ' ಅನುಷ್ಠಾನ ಬಳಿಕವು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಿದೆ. BMRCL ತನ್ನ ಕಾರ್ಯಾಚರಣೆ ಮರು ಪರಿಶೀಲಿಸಿದರೆ ನಮ್ಮ ಮೆಟ್ರೋ ಪ್ರತಿನಿತ್ಯ 10.5 ಲಕ್ಷ ಜನರಿಗೆ ಸಮರ್ಥವಾಗಿ ಸೇವೆ ನೀಡಬಲ್ಲದು ಎಂದು ಕ್ಯಾಟಲಿಟಿಕ್ ಥಿಂಕ್ ಟ್ಯಾಂಕ್ ಫೋರಂ ನಡೆಸುತ್ತಿರುವ ಸಮೂಹ ಕ್ಷಿಪ್ರ ಸಾರಿಗೆಯ ಪರಿಣಿತ ಪ್ರಶಾಂತ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪೀಕ್ ಹವರ್‌ನಲ್ಲಿ ಹೆಚ್ಚು ಸಂಚಾರ

ಸದ್ಯ ಮೆಟ್ರೋ ಹೆಚ್ಚು ಜನ ಓಡಾಡುವ ಸಮಯದಲ್ಲಿ (ಪೀಕ್ ಹವರ್) ಮತ್ತು ಕಡಿಮೆ ಜನರು ಓಡಾಡುವ ಸಮಯದಲ್ಲಿ (ನಾನ್ ಪೀಕ್ ಹವರ್) ಪ್ರಯಾಣಿಕರ ಸಂಚಾರದಲ್ಲಿ ವ್ಯತ್ಯವಾಸಗಳಿವೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚು ಜನರು ಮೆಟ್ರೋ ಬಳಸುತ್ತಾರೆ.

ಮೆಟ್ರೋ ಸಮಯ ವಿಸ್ತರಣೆ, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಎಲ್ಲ ಪ್ರವೇಶ/ನಿರ್ಗಮನ ಬಿಂದುಗಳನ್ನು ತೆರೆಯಬೇಕು ಮತ್ತು ನಗರದ ಜನನಿಬಿಡ ಜಂಕ್ಷನ್‌ಗಳಲ್ಲಿ ಪ್ರಯಾಣಿಕರು ಮತ್ತು ಸ್ಕೈವಾಕ್‌ಗಳ ಮೂಲಕ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸಬೇಕು. ಹೀಗಾದರೆ ಇನ್ನಷ್ಟು ಜನರು ಮೆಟ್ರೋ ಬಳಸುತ್ತಾರೆ ಎಂದರು.

BMRCL ಸದ್ಯಕ್ಕೆ ಸಮಯ ವಿಸ್ತರಣೆಯ ಯೋಚನೆ ಹೊಂದಿಲ್ಲ ಎನ್ನಲಾಗಿದೆ. ಬೇಡಿಕೆ ಇರುವಾಗ ಅಂದರೆ ಪೀಕ್ ಹವರ್‌ಗಳಲ್ಲಿ ಉತ್ತಮ ಕಾರ್ಯಕ್ಷಮತೆ ಜತೆ ಸೇವೆ ನೀಡಲಾಗುತ್ತಿದೆ. ಇನ್ನೂ ಮೆಟ್ರೋ ಬೇಡಿಕೆ ಇಲ್ಲದಿರುವಾಗ ನಾನ್ ಪೀಕ್ ಹವರ್‌ನಲ್ಲಿ ಇನ್ನೇನು ಮಾಡಲು ಸಾಧ್ಯ ಎಂದು ಮತ್ತೊಬ್ಬ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+