Namma Metro ಸಿಹಿ ಸುದ್ದಿ: 2 ನಿಲ್ದಾಣಗಳಲ್ಲಿ ಈ ಮೂಲ ಸೌಕರ್ಯಗಳು ಪ್ರಯಾಣಿಕರಿಗೆ ಮುಕ್ತ
ಬೆಂಗಳೂರು, ಜನವರಿ 21: ದಿನೇ ದಿನೆ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ದೈನಂದಿನ ಪ್ರಮಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಯಾರೆಲ್ಲ ವಿಧಾನಸೌಧ ಮತ್ತು ಕಬ್ಬನ್ ಉದ್ಯಾನ ಕಡೆಗೆ ಓಡಾಡುತ್ತಿರೋ ಅಂತಹ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೂಲ ಸೌಕರ್ಯವನ್ನು ಲೋಕಾರ್ಪಣೆ ಮಾಡಿದೆ. ಸಾರ್ವಜನಿಕ ಬಳಕೆಗೆ ತೆರೆಯಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅತ್ಯಧಿಕ ಜನರು ಹತ್ತುವ ಮತ್ತು ಓಡಾಡುವ ಮೆಟ್ರೋ ನಿಲ್ದಾಣಗಳಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವು ಒಂದು. ಈ ನಿಲ್ದಾಣದ ಜಿ-ಪ್ರವೇಶ ದ್ವಾರವನ್ನು ತೆರೆಯಲಾಗಿದೆ. ನಿಲ್ದಾಣದಿಂದ ಆದಾಯ ತೆರಿಗೆ ಇಲಾಖೆಯ ಕಡೆಗಿನ ನಿಲ್ದಾಣದ ಜಿ.ಬಾಗಿಲನ್ನು ತೆರೆಯಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಜನವರಿ 13ರಿಂದಲೇ ಈ ಬಾಗಿಲು ತೆರೆಯಲಾಗಿದೆ. ನಿತ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಮೊದಲೇ ನಿರ್ಮಾಣವಾಗಿದ್ದ ಸುವ್ಯವಸ್ಥೆ ಪ್ರವೇಶ-ನಿರ್ಗಮನ ದ್ವಾರವನ್ನು ಜನ ಬಳಕೆಗೆ ತೆರೆಯಲಾಗಿದೆ ಎಂದು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿರಿಯ ನಾಗರಿಕರಿಗೆ ಓಟಾಟಕ್ಕೆ ಸಹಾಯ
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವು ಚಲಘಟ್ಟ-ವೈಟ್‌ಪಿಲ್ಡ್ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗದಲ್ಲಿ ಬರುತ್ತದೆ. ಈ ಆರ್‌ವಿ.ರಸ್ತೆ ನಿಲ್ದಾಣವು ಹಸಿರು ಮೆಟ್ರೋ ಮಾರ್ಗದ ವ್ಯಾಪ್ತಿಯಲ್ಲಿದೆ. ಈ ಬಾಗದ ಪ್ರಯಾಣಿಕರಿಗೆ ಈ ಮೂಲಸೌಕರ್ಯಗಳು ಅನುಕೂಲವಾಗುತ್ತವೆ. ಎಸ್ಕಿಲೇಟರ್ ಅನಾರೋಗ್ಯ ಪೀಡಿತರಿಗೆ, ಹೆಣ್ಣುಮಕ್ಕಳಿಗೆ, ಹಿರಿಯ ನಾಗರಿಕರಿಗೆ ಓಡಾಡಲು ಸಹಾಯವಾಗಲಿದೆ.
ಈ ಹಿಂದೆ ನಮ್ಮ ಮೆಟ್ರೋ ಮೊದಲು ಇಂಟರ್‌ಚೇಂಜ್ ನಿಲ್ದಾಣದವಾದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಮುಖ ದ್ವಾರ ತೆರೆಯಲಾಗಿದೆ. ನಿತ್ಯ ಲಕ್ಷಾಂತರ ಮಂದಿ ಓಡಾಡುವ ಪ್ರಯಾಣಿಕರಿಗೆ ಈ ನಿಲ್ದಾಣದಲ್ಲಿ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗ ರೈಲು ಏರಲು ಮಾರ್ಗ ಬದಲಾವಣೆ ಮಾಡುತ್ತಾರೆ. ಹೀಗಾಗಿ ಇಲ್ಲಿ ಹೆಚ್ಚು ದಟ್ಟಣೆ ಕಂಡು ಬರುತ್ತದೆ.

ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಮೆಟ್ರೋ ಅಧಿಕಾರಿಗಳು ಹೆಚ್ಚುವರಿ ನಿರ್ಗಮನ ದ್ವಾರ ತೆರೆದಿದ್ದರು. ಅಲ್ಲದೇ ಎಸ್ಕಿಲೇಟರ್ ಸಹ ತೆರೆಯಲಾಯಿತು. ಇನ್ನೂ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಜಿಗಿಯು ಪ್ರಕರಣ ಪದೇ ಪದೆ ಘಟಿಸಿದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಬ್ಯಾರಿಕೇಡ್ ರೀತಿಯ ವ್ಯವಸ್ಥೆ ಅಳವಡಿಸಲಾಗಿದೆ.
ಈ ಬ್ಯಾರಿಕೇಡ್ ಪ್ಲಾಟ್‌ಫಾಮ್ ಸ್ಕ್ರೀನ್ ಡೋರ್ ಸಿಸ್ಟಮ್ (ಪಿಎಸ್‌ಡಿ) ಬದಲಾಗಿ ಅಳವಡಿಕೆ ಮಾಡಲಾಗಿದೆ. ಹಳಿಗೆ ಜಿಗಿಯುವ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮೆಟ್ರೋ ಜಾಲದಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳವಡಿಕೆಗೆ ಅಧಿಕಾರಿಗಳು ಚಿಂತನೆ ನಡೆಸಲಾಗಿದೆ.












Click it and Unblock the Notifications