Bengaluru Metro: ನಮ್ಮ ಮೆಟ್ರೋ ಈ ನಿಲ್ದಾಣದಲ್ಲಿ 'ಬ್ಯಾರಿಕೇಡ್' ಅಳವಡಿಸಿದ್ದು ಯಾಕೆ?

ಬೆಂಗಳೂರು, ಫೆಬ್ರವರಿ 07: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ವ್ಯವಸ್ಥೆ ಅಳವಡಿಕೆ ಮಾಡುವಂತೆ ಒತ್ತಾಯಿಸಲಾಗಿತ್ತು. ಅದರ ಬೆನ್ನಲ್ಲೆ ಇಂತದ್ದೇ ವ್ಯವಸ್ಥೆಯೊಂದು ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜಾರಿಗೆ ಬಂದಿದೆ.

ನಮ್ಮ ಮೆಟ್ರೋ ಹಳಿಗಳ ಮೇಲೆ ಇತ್ತೀಚೆಗೆ ಪ್ರಯಾಣಿಕರು ಜಿಗಿದ ಘಟನೆಗಳು ಮೇಲಿಂದ ಮೇಲೆ ಮರುಕಳಿಸಿದ್ದವು. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಪ್ರಯಾಣಿಕರ ಸುರಕ್ಷತೆ ಆದ್ಯತೆ ನೀಡುವಂತೆ, ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆ ಅಳವಡಿಕೆ ಮಾಡುವಂತೆ ಜನರು ಮನವಿ ಮಾಡಿದ್ದರು.

Namma Metro: BMRCL Installation Barricade in Majestic Metro station for Passengers Safety

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಬಿಎಂಆರ್‌ಸಿಎಲ್ ವಿವಿಧ ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಜಾರಿಗೆ ತರುವುದಾಗಿ ತಿಳಿಸಿತ್ತು. ಅದರ ಮೊದಲ ಭಾಗವಾಗಿ ಸದ್ಯಕ್ಕೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.

65 ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆಗೆ ಪ್ಲಾನ್

ಪಿಎಸ್‌ಡಿ ವ್ಯವಸ್ಥೆ ನಗರದ ಸುಮಾರು 65 ನಿಲ್ದಾಣಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಅದಕ್ಕೆ ಸಮಯ ಹಿಡಿಯಲಿದ್ದು, ಅಷ್ಟರಲ್ಲಾಗಲೇ ನಿತ್ಯ ಲಕ್ಷಾಂತರ ಜನರು ಓಡಾಡುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್ ಅಳಡಿಸಲಾಗಿದೆ.

ಪಿಎಸ್‌ಡಿ ವ್ಯವಸ್ಥೆ ಎಂದರೆ, ಮೆಟ್ರೋ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲು ಬರುವವರೆಗೂ ಹಳಿಗೆ ಅಡ್ಡಲಾಗಿ ಸ್ಕ್ರೀನ್ ಡೋರ್ ರೀತಿಯ ವ್ಯವಸ್ಥೆ ಇರುತ್ತದೆ. ರೈಲು ಬಂದ ನಂತರ ಡೋರ್ ತೆರೆದುಕೊಂಡು ರೈಲು ಹತ್ತಲು ಪ್ರಯಾಣಿಕರಿಗೆ ಸಹಾಯ ಮಾಡುವ ವ್ಯವಸ್ಥೆ ಆಗಿದೆ.

Namma Metro: BMRCL Installation Barricade in Majestic Metro station for Passengers Safety

ಪಿಎಸ್‌ಡಿ ವ್ಯವಸ್ಥೆಗೆ ಗುತ್ತಿಗೆ ಹಸ್ತಾಂತರ ಶೀಘ್ರ

ಈ ವ್ಯವಸ್ಥೆಯನ್ನು ಮೆಟ್ರೋ ಹಂತ ಎರಡರ ಮಾರ್ಗಗಳಾದ ನೀಲಿ ಮತ್ತು ಗುಲಾಬಿ ಭೂಗತ ಕಾರಿಡಾರ್‌ಗಳಲ್ಲಿ ಸೇರಿದಂತೆ ಒಟ್ಟು ಸುಮಾರು 65 ನಿಲ್ದಾಣಗಳಲ್ಲಿ ತರಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಅದಕ್ಕಾಗಿ ಬಿಡ್ ಕರೆದಿದೆ. ಶೀಘ್ರವೇ ಈ ಕುರಿತು ಟೆಂಡರ್ ನೀಡುವ ಸಾಧ್ಯತೆಗಳು ಇವೆ.

ಸದ್ಯ ಮೆಜೆಸ್ಟಿಕ್ ನಿಲ್ದಾಣವು ನೇರಳೆ ಮತ್ತು ಹಸಿರ ಮಾರ್ಗ ಬದಲಾವಣೆಯ ಜಂಕ್ಷನ್ ಆಗಿದೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಇಲ್ಲಿಂದ ಓಡಾಡುತ್ತಾರೆ. ಹೀಗಾಗಿ ಪ್ರಯಾಣಿಕರ ಹಿತದೃಷ್ಟಿ ಮತ್ತು ಅಪಾಯಕಾರಿ ಘಟನೆಗಳು ನಡೆಯದಂತೆ ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿದೆ.

ಇದು ಪ್ರಯಾಣಿಕರು, ಮಕ್ಕಳು ಹಳಿಯತ್ತ ಹೋಗುವುದನ್ನು ತಡೆಯುತ್ತದೆ. ಅಲ್ಲದೇ ಮೆಟ್ರೋ ಸಿಬ್ಬಂದಿ ಅಗತ್ಯ ಎಚ್ಚರಿಕೆ ವಹಿಸಲು ಈ ಬ್ಯಾರಿಕೇಡ್ ಸಹಕಾರಿ ಎನ್ನಲಾಗಿದೆ.

ಮೆಜೆಸ್ಟಿಕ್‌ನಲ್ಲಿ ಅಳವಡಿಕೆಯಾದ ಈ ಬ್ಯಾರಿಕೇಡ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ಪಿಎಸ್‌ಡಿ ವ್ಯವಸ್ಥೆಗೆ ಬದಲಾಗಲಿದೆ. ಈ ವ್ಯವಸ್ಥೆಯನ್ನು ಶೀಘ್ರವೇ ಉದ್ದೇಶಿ ಮೆಟ್ರೋ ನಿಲ್ದಾಣಗಳಿಗೆ ವಿಸ್ತರಣೆಯೂ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+