Namma Metro: ಟಿಕೆಟ್ ದರ ಕಡಿಮೆಯಾಗದ ನಮ್ಮ ಮೆಟ್ರೋ ಮಾರ್ಗಗಳಿವು
ಬೆಂಗಳೂರು, ಫೆಬ್ರವರಿ 15: ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ನಮ್ಮ ಮೆಟ್ರೋ ಸಂಸ್ಥೆ ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ್ದು, ಬರೋಬ್ಬರಿ ಶೇಕಡಾ 46ರಷ್ಟು ಏರಿಕೆ ಮಾಡಿತ್ತು. ಮೆಟ್ರೋ ಟಿಕೆಟ್ ದರ ದುಪ್ಪಟ್ಟು ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ಆಕ್ರೋಶ ಹಾಗೂ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಸಂಸ್ಥೆ ಸದ್ಯ ಟಿಕೆಟ್ ದರ ಇಳಿಕೆ ಮಾಡಿದೆ.
ನಮ್ಮ ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್ ಸಂಸ್ಥೆ ಟಿಕೆಟ್ ದರ ಇಳಿಕೆ ಮಾಡಿದ್ದು, ನಿನ್ನೆಯಿಂದ ಹೊಸ ದರ ಜಾರಿ ಮಾಡಿದೆ. ದುಪ್ಪಟ್ಟು ದರ ಏರಿಕೆ ಮಾಡಲಾದ ಕೆಲವು ಮಾರ್ಗಗಳಿಗೆ ಹತ್ತು ರೂಪಾಯಿ ದರ ಇಳಿಕೆ ಮಾಡಲಾಗಿದೆ. ಆದರೆ ಇನ್ನೂ ಮಾರ್ಗಗಳ ಟಿಕೆಟ್ ಬೆಲೆಯನ್ನು ಬಿಎಂಆರ್‌ಸಿಎಲ್ ಸಂಸ್ಥೆ ಕಡಿಮೆ ಮಾಡಿಲ್ಲ. ಬದಲಿಗೆ ಎಷ್ಟು ದರ ಹೆಚ್ಚಳವಾಗಿದೆಯೋ, ಸದ್ಯ ಪರಿಷ್ಕೃತ ಟಿಕೆಟ್ ದರವೂ ಅಷ್ಟೇ ಇದೆ. ಟಿಕೆಟ್ ದರ ಕಡಿಮೆಯಾಗದ ನಮ್ಮ ಮೆಟ್ರೋ ಮಾರ್ಗಗಳ ವಿವರ ಈ ಕೆಳಗಿನಂತಿದೆ.

* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣಕ್ಕೆ 60 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಸೀತಾರಾಮನಪಾಳ್ಯ ಮೆಟ್ರೋ ನಿಲ್ದಾಣಕ್ಕೆ 60 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣಕ್ಕೆ 60 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣಕ್ಕೆ 50 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣಕ್ಕೆ 60 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಕೆಂಗೇರಿ ಮೆಟ್ರೋ ನಿಲ್ದಾಣಕ್ಕೆ 60 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ. ನಮ್ಮ ಮೆಟ್ರೋ ಈ ಮಾರ್ಗಗಳಲ್ಲಿ ಟಿಕೆಟ್ ದರ ಎಷ್ಟು ಹೆಚ್ಚಳವಾಗಿದೆಯೋ, ಸದ್ಯ ಪರಿಷ್ಕೃತ ಟಿಕೆಟ್ ದರವೂ ಅಷ್ಟೇ ಇದೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್ ದರ ಇಳಿಕೆ ಮಾಡದ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications