ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ.

ಬೆಂಗಳೂರು, ಜನವರಿ 23 : ನಮ್ಮ ಮೆಟ್ರೋ ಲಾಲ್ ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಹೊಸ ಕೊಡುಗೆಯನ್ನು ಘೋಷಣೆ ಮಾಡಿದೆ. ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್‌ ಬಾಗ್‌ಗೆ 30 ರೂ.ನಲ್ಲಿ ಪ್ರಯಾಣಿಸಬಹುದಾಗಿದೆ.

ಗಣರಾಜ್ಯೋತ್ಸವ ದಿನದ ಪ್ರಯುಕ್ತ ವಿಶೇಷ ಕೊಡುಗೆಯನ್ನು ನೀಡಿದೆ. ಜನವರಿ 25, 26 ಮತ್ತು 27ರಂದು ಈ ವಿಶೇಷ ಕೊಡುಗೆ ಜಾರಿಯಲ್ಲಿರುತ್ತದೆ. ನಗರದ ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್ ನಿಲ್ದಾಣಕ್ಕೆ 30 ರೂ. ನಿಗದಿ ಮಾಡಲಾಗಿದೆ.

namma metro

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಆದ್ದರಿಂದ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. 30 ರೂ. ಟಿಕೆಟ್ ಪಡೆದು ಬರುವ ಜನರು ಅದೇ ಟಿಕೆಟ್‌ನಲ್ಲಿ ವಾಪಸ್ ಆಗಬಹುದಾಗಿದೆ.

ಈ ವಿಶೇಷ ಕೊಡುಗೆಯನ್ನು ಜಾರಿಗೆ ತರಲು ಮೂರು ದಿನಗಳ ಕಾಲ ನಮ್ಮ ಮೆಟ್ರೋ ಪೇಪರ್ ಟಿಕೆಟ್ ವ್ಯವಸ್ಥೆಯನ್ನು ಮಾಡಿದೆ. ಈ ಯೋಜನೆಯಡಿ ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಪ್ರಯಾಣಿಸಬಹುದಾಗಿದೆ.

ಮಹಾತ್ಮಾಗಾಂಧಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ಮಹಾತ್ಮಗಾಂಧಿ ಅವರ ನೆನಪಿನಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಜನವರಿ 18ರಂದು ಪ್ರದರ್ಶನ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+