Gode Bengaluru: ನಮ್ಮ ಮೆಟ್ರೋ ಸೇರಿ 10 ಗೋಡೆಗಳ ಮೇಲೆ ಬಣ್ಣಗಳ ಚಿತ್ತಾರ, ಜೀವನ ಚಿತ್ರಣ ಸಾರುವ ಚಿತ್ರಗಳು
ಬೆಂಗಳೂರು, ಜನವರಿ 23: ಬೆಂಗಳೂರು ಜನರ ಜೀವನಾಡಿ ಆಗಿರುವ, ಅತ್ತುತ್ತಮ ಸಾರಿಗೆ ನೀಡುತ್ತಿರುವ ನಮ್ಮ ಮೆಟ್ರೋ ಗೋಡೆಗಳು, ಪಿಲ್ಲರ್ಗಳನ್ನು ಬಣ್ಣಗಳಿಂದ ಸುಂದರಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಜನರಿಗೆ ಹಲವು ವಿಷಯಗಳ ಮೇಲೆ ಜಾಗೃತಿ ಮೂಡಿಸುವ ಜೊತೆಗೆ ನಾಡಿನ ಕಲೆ, ಸಂಸ್ಕೃತಿ ಪಸರಿಸುವ ಕೆಲವು ಕಲಾವಿದರಿಂದ ಆಗಿದೆ. ಸದ್ಯ ನಗರದ ವಿವಿಧ 10 ಗೋಡೆಗಳ ಮೇಲೆ ಸುಪ್ರಸಿದ್ಧ ಕಲಾವಿದರು ಚಿತ್ತಾರ ಮೂಡಿಸಿದ್ದು, ಆಕರ್ಷಿಣೀಯವಾಗಿವೆ.
ಬೆಂಗಳೂರಿನ ನಮ್ಮ ಮೆಟ್ರೋ ಸೇರಿದಂತೆ ನಗರ ಪ್ರಮುಖ ಗೋಡೆಗಳ ಮೇಲೆ ಕಲಾವಿದರ ಕೈಚಳ ಕಾಣಬಹುದಾಗಿದೆ. ಇವು ಚಿತ್ರಗಳು ಮಾತ್ರವಲ್ಲದೇ ಅನೇಕ ಕಥೆಗಳನ್ನು ಹೇಳುತ್ತಿವೆ. ಜನರ ಜೀವನದ ಪ್ರತಿಬಿಂಬವು ಆಗಿದ್ದು, ಕೆಲ ಚಿತ್ರಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ.

'ಗೋಡೆ ಬೆಂಗಳೂರು' ಉಪಕ್ರಮ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಹಯೋಗದೊಂದಿಗೆ ನಗರದ ಪ್ರಮುಖ 10 ಗೋಡೆಗಳ ಮೇಲೆ ಚಿತ್ರ ಬಿಡಿಸಲಾಗಿದೆ. ಇದಕ್ಕೆ 'ಗೋಡೆ ಬೆಂಗಳೂರು' ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಈ ಉಪಕ್ರಮ ಘೋಷಿಸಲಾಗಿತ್ತು. ಉದ್ದೇಶದಿಂದ ನಗರದ ಹತ್ತು ಗೋಡೆಗಳನ್ನು ಬಣ್ಣಗಳು ಮತ್ತು ಕುಂಚದಿಂದ ಸುಂದರಗೊಳಿಸುವ ಕಾರ್ಯ ಮುಗಿದಿದೆ. ಎಲ್ಲ ಗೋಡೆಗಳು ಸುಂದರವಾಗಿ ಕಂಗೊಳಿಸುತ್ತಿವೆ. ಸಾರ್ವಜನಿಕರನ್ನ ತನ್ನತ್ತ ನೋಡುವಂತೆ ಮಾಡಿದೆ.
ಚಿತ್ರಗಳು ಹತ್ತು, ಸಂದೇಶಗಳು ಹಲವು: ಎಲ್ಲೆಲ್ಲಿ ಚಿತ್ರ ಬಿಡಿಸಲಾಗಿದೆ?
ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜ್ ಮೆಟ್ರೋ ಸ್ಟೇಷನ್‌ನ ಗೋಡೆಯ ಮೇಲೆ, 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ' ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಜನದಟ್ಟಣೆಯ ಬಗ್ಗೆ ಕಲಾವಿದರಾದ ಅನಿಲ್‌ಕುಮಾರ್ ಸುಂದರವಾಗಿ ಚಿತ್ರ ಬಿಡಿಸಿದ್ದಾರೆ.

ಇನ್ನೂ ಚರ್ಚ್‌ಸ್ಟ್ರೀಟ್ ನಲ್ಲಿರುವ ಗೋಡೆ ಒಂದರ ಮೇಲೆ, 'ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಕಳೆಯಿರಿ' ಎಂಬ ಸಂದೇಶ ಸಾರುವ ಚಿತ್ರವನ್ನು ಮನಸೋರೆಗೊಳ್ಳುವಂತೆ ಕಲಾವಿದರಾದ ಅನ್ಪು ವರ್ಕಿ ಅವರು ಈ ಚಿತ್ರ ಬಿಡಿಸಿ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.
ಇನ್ನು, ಬೆಂಗಳೂರಿನ ವಲಸೆ ಬರುವ ಸಾವಿರಾರು ಜನ ಇಲ್ಲಿ ಬದುಕಲು ನಡೆಸುವ ಜಿದ್ದಾಜಿದ್ದಿನ ಕಷ್ಟವನ್ನು ವಿವರಿಸುವಂತೆ ಒಬ್ಬ ವ್ಯಕ್ತಿ ಸಿಲೆಂಡರ್ ಮೇಲೆ ಮಲಗಿರುವ ಚಿತ್ರದ ಮೂಲಕ ಹೇಳಲಾಗಿದೆ.
ಜೆ.ಪಿ.ನಗರದ ಮೆಟ್ರೋ ನಿಲ್ದಾಣದಲಿ ವಿಂಡೋಸ್ ಟು ದಿ ಸೋಲ್ ಶೀರ್ಷಿಕೆಯಲ್ಲಿ ಚಿತ್ರ ಬಿಡಿಸಲಾಗಿದೆ. ಮಹಿಳೆಯೊಬ್ಬರ ಕಣ್ಣುಗಳ ಚಿತ್ರ ಇದಾಗಿದೆ. ಜಯನಗರ ಮೆಟ್ರೋ ನಿಲ್ದಾಣದ ಗೋಡೆ ಮೇಲೆ ಈ ಹಿಂದೆ ಇದ್ದ ಬೆಂಗಳೂರಿನ ನೈಜತೆಯ ಬಗ್ಗೆ ಚಿತ್ರೀಕರಿಸಲಾಗಿದೆ.

ಹಸಿರು ಮಾರ್ಗದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಹಳೆಯ ವಿಂಟೇಜ್ ಪೋಸ್ಟರ್‌ಗಳು ಮತ್ತು ಮ್ಯಾಚ್‌ಬಾಕ್ಸ್ ಚಿತ್ರಗಳಿಂದ ಪ್ರೇರಿತವಾದ ಕಲಾಕೃತಿಗಳು ಬಣ್ಣದಲ್ಲಿ ಅರಳಿವೆ. ಸೈನ್ಸ್ ಗ್ಯಾಲರಿ ರಸ್ತೆಯ ಗೋಡೆಗಳ ಮೇಲೆ ರಂಗೋಲಿ ಚಿತ್ತಾರ, ಯಶವಂತಪುರ ಮೆಟ್ರೋಸ್ಟೇಷನ್‌ನಲ್ಲಿ ದೇಹದ ಭಾಗಗಳ ಕುರಿತು ವಿವರಿಸುವ ಚಿತ್ರ ಇದಾಗಿದೆ.
ನೇರಳೆ ಮಾರ್ಗದ ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಳ್ಳೋಗಾಡಿ ತಳ್ಳುವ ಸಾಗುವ ಚಿತ್ರವು ಕಂಗೊಳಿಸುತ್ತಿದೆ. ಒಟ್ಟಾರೆ 10 ಗೋಡೆಗಳ ಮೇಲೆ ವಿವಿಧ ವಿಷಯಗಳನ್ನಾಧರಿಸಿ, ಬೃಹತ್ ಗಾತ್ರದಲ್ಲಿ ಕಲಾವಿದರ ಚಿತ್ರ ಬಿಡಿಸಿದ್ದಾರೆ. ಈ ಚಿತ್ರಗಳು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ವಿವಿಧ ವರ್ಗದ ಜನರು ದೈನಂದಿನ ಕಾರ್ಯಚುವಟಿಕೆಗೆ, ಬದುಕು, ನೆಮ್ಮದಿ, ವೃತ್ತಿ, ಟ್ರಾಫಿಕ್ ಹೀಗೆ ಹಲವು ವಿಷಯಗಳನ್ನು ಗೋಡೆ ಚಿತ್ರಗಳ ಮೂಲಕ ತಿಳಿಸಲಾಗಿದೆ.












Click it and Unblock the Notifications