Namma Metro Alert: ಪ್ರಯಾಣಿಕರೇ ಗಮನಿಸಿ, ಆಗಸ್ಟ್ 15ರಂದು ಈ ಮೆಟ್ರೋ ನಿಲ್ದಾಣಕ್ಕೆ ತಾತ್ಕಾಲಿಕ ನಿರ್ಬಂಧ

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿರುವ ಬೆಂಗಳೂರಿನ ನಾಗರಿಕರು, ಅದರಲ್ಲೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಲಾಗಿದೆ. ಸರ್ಕಾರದಿಂದ ಶನಿವಾರ (ಆ.15) ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ' ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ ಜನದಟ್ಟಣೆ ಉಂಟಾಗುವ ಕಾರಣಕ್ಕೆ ಪ್ರಯಾಣಿಕರ ಹಿತದೃಷ್ಟಿಯಿಂದ ವಿಧಾನಸೌಧ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ' ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಎಲ್ಲ ಭಾಷಿಗ ಬೆಂಗಳೂರಿನ ನಾಗರಿಕರು, ಮಕ್ಕಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರ ಸೂಚನೆಯಂತೆ ಸಾರ್ವಜನಿಕರ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ. ಈ ಸಂಬಂಧ 15 ಆಗಸ್ಟ್ 2026 ರಂದು ಡಾ. ಬಿ.ಆರ್. ಅಂಬೇಡ್ಕರ್ - ವಿಧಾನಸೌಧ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ.

Namma Metro Alert

ಬೆಳಗ್ಗೆಯಿಂದ ರಾತ್ರಿವರೆಗೆ ನಿಲ್ದಾಣ ನಿರ್ಬಂಧ

ಅಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ವಿಧಾನಸೌಧ ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಮೆಟ್ರೋ ರೈಲುಗಳು ಪ್ರಸ್ತುತ ನಿಲ್ದಾಣದಲ್ಲಿ ನಿಲುಗಡೆಯಾಗುವುದಿಲ್ಲ. ಇಲ್ಲಿಗೆ ಇಳಿಯುವವರು ಅಥವಾ ಇಲ್ಲಿಂದ ಮೆಟ್ರೋ ಹತ್ತಲು ಪ್ಲ್ಯಾನ್ ಮಾಡಿಕೊಳ್ಳುವ ಪ್ರಯಾಣಿಕರು ಗಮನಿಸಿ ವಿಧಾನಸೌಧ ನಿಲ್ದಾಣದ ಮುಂದಿನ ಅಥವಾ ಹಿಂದಿನ ನಿಲ್ದಾಣದಲ್ಲಿ ಇಳಿಯಬಹುದು, ಮೆಟ್ರೋ ಹತ್ತಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಮೆಟ್ರೋ ರೈಲುಗಳ ಸೇವೆ

ರಾತ್ರಿ 9:30 ಗಂಟೆಯಿಂದ, ಕಾರ್ಯಕ್ರಮದ ಬಳಿಕ ಪ್ರಯಾಣಿಕರು ತೆರಳಲು ಅನುಕೂಲವಾಗುವಂತೆ ನಿಲ್ದಾಣದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ನಿಲ್ದಾಣದಿಂದ ಹೊರಬರುವುದಕ್ಕೆ ರಾತ್ರಿ 10:00 ಗಂಟೆಯವರೆಗೆ ಸೀಮಿತವಾಗಿರಲಿದೆ. ಕಾರ್ಯಕ್ರಮದ ನಂತರ ಹೆಚ್ಚುವರಿ ಪ್ರಯಾಣಿಕರ ಸಂಚಾರವನ್ನು ನಿರ್ವಹಿಸಲು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಮೆಟ್ರೋ ರೈಲು ಸೇವೆಗಳನ್ನು ಒದಗಿಸಲಾಗುತ್ತದೆ.

ಮೆಟ್ರೋ ನಿಲ್ದಾಣಕ್ಕೆ ಪ್ರವೇಶ, ನಿರ್ಗಮನ ನಿರ್ಬಂಧಿತ ಸಮಯದಲ್ಲಿ ಪ್ರಯಾಣಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ಸರ್ ಎಂ. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜ ಮೆಟ್ರೋ ನಿಲ್ದಾಣವನ್ನು ಬಳಸಬಹುದು.

ಪ್ರಯಾಣಿಕರು ಈ ತಾತ್ಕಾಲಿಕ ವ್ಯವಸ್ಥೆಗಳನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬೇಕು. ಪ್ರಯಾಣಿಕರ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಬೆಂಗಳೂರು ಮೆಟ್ರೋ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಏನಿದು ಫ್ರೀಡಂ ಹಬ್ಬ?

ಜಿಬಿಎ ಸಹಕಾರದಲ್ಲಿ ರಾಜ್ಯ ಸರ್ಕಾರ ಈ ಬಾರಿ ಸ್ವಾತಂತ್ರ ದಿನಾಚರಣೆಯನ್ನು ನಾಗರಿಕರು ಆಚರಿಸಬೇಕೆಂಬ ಕಾರಣಕ್ಕೆ ವಿವಿಧ ಭಾಷಿಗರ ಸಂಸ್ಕೃತಿ, ಕಲೆ, ಸಾಂಪ್ರದಾಯ, ಆಚಾರ, ವಿಚಾರ, ಪದ್ಧತಿಗಳ ಪ್ರದರ್ಶನ, ಮೆರವಣಿಗೆ ಇಟ್ಟುಕೊಂಡಿದೆ. ಇದರಲ್ಲಿ ಉತ್ತರ ಕರ್ನಾಟಕ, ಕರಾವಳಿ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲ ಭಾಗದ ಜನರು ಪಾಲ್ಗೊಳ್ಳಬೇಕು. ಮುಖ್ಯವಾಗಿ ಇದು ಬೆಂಗಳೂರಿನಲ್ಲಿ ವಾಸಿಸುವ ಎಲ್ಲ ಭಾಷಿಗರ ಆಚರಣೆಯಾಗಬೇಕು ಎಂದು ಸರ್ಕಾರ ಹೇಳಿದೆ. ಈ ಕಾರಣಕ್ಕೆ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳುವಂತೆ ಬೆಂಗಳೂರು ನಗರಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕರೆ ನೀಡಿದ್ದರು.

ಜೊತೆಗೆ ಮಕ್ಕಳಿಗೆ ವಿಧಾನಸೌಧ ಪ್ರವೇಶಕ್ಕೆ ಅವಕಾಶ ಇದೆ. ಮಕ್ಕಳೊಂದಿಗೆ ಬರುವ ಪೋಷಕರಿಗೆ ಪ್ರವೇಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+