Namma Metro: 3ನೇ ಹಂತದ ನಮ್ಮ ಮೆಟ್ರೋ ಯೋಜನೆ ವೆಚ್ಚದಲ್ಲಿ ₹300 ಕೋಟಿ ಕಡಿತ- ಅಂಕಿಅಂಶ, ಕಾರಣ, ಮಾರ್ಗ ತಿಳಿಯಿರಿ

ಬೆಂಗಳೂರು, ಜುಲೈ 10: ಬೆಂಗಳೂರು ಮೆಟ್ರೋದ ಹಂತ-3ರ ಕುರಿತು ಪರಿಷ್ಕೃತ ಯೋಜನಾ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿದೆ. ಈ ಯೋಜನಾ ವರದಿ (ಡಿಪಿಆರ್) ಪ್ರಕಾರ, ಬೆಂಗಳೂರು ಮೆಟ್ರೋದ ಹಂತ-3ಕ್ಕೆ ಈಗ 16,041 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಕನ್ಸಲ್ಟೆನ್ಸಿ ಸಂಸ್ಥೆ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ ಲಿಮಿಟೆಡ್ (RITES) ಪರಿಷ್ಕೃತ ಯೋಜನೆ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (BMRCL) ಸಲ್ಲಿಸಿತ್ತು. ಇದರಲ್ಲಿ ಯೋಜನಾ ವೆಚ್ಚವನ್ನು 287 ಕೋಟಿ ರೂಪಾಯಿಯಷ್ಟು ಕಡಿಮೆ ಮಾಡಿ ವರದಿ ನೀಡಿತ್ತು.

Namma Metro

ಈ ವರ್ಷ ಫೆಬ್ರುವರಿಯಲ್ಲಿ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರಕ್ಕೆ ಯೋಜನೆಯ ವಿವರಗಳನ್ನು ಕಳುಹಿಸಿತ್ತು. ವಿಧಾನಸಭೆ ಚುನಾವಣೆಗೂ ಮುನ್ನವೇ ಇದಕ್ಕೆ ಮಂಜೂರಾತಿ ಸಿಗಬೇಕಿತ್ತು ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.

ರಾಜ್ಯವು ಸಲ್ಲಿಸಿದ ಡಿಪಿಆರ್‌ಗೆ ಕೇಂದ್ರವು ಹಲವು ಸ್ಪಷ್ಟನೆಗಳನ್ನು ಕೇಳಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳಿರುವ ಕಾರಣ ವೆಚ್ಚವನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು. ಕಳೆದ ಎಂಟು ತಿಂಗಳಿಂದ RITES ಈ ಯೋಜನೆಯ ವರದಿಯನ್ನು ಸಿದ್ದಪಡಿಸಲು ಕೆಲಸ ಮಾಡಿದೆ. ಈಗ ಪರಿಷ್ಕೃತ ಆವೃತ್ತಿಯನ್ನು ಹೊರತಂದಿದೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಮಾರ್ಗ ಜೋಡಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಶಿಫಾರಸು ಮಾಡಿದಂತೆ ರೋಲಿಂಗ್ ಸ್ಟಾಕ್‌ಗೆ (ವಾರ್ಷಿಕವಾಗಿ ಶೇ 5) ನೀಡಲಾಗುತ್ತಿದ್ದ ಹೆಚ್ಚುವರಿ ವೆಚ್ಚವನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Namma Metro

ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ನವೆಂಬರ್ 18, 2022 ರಂದು ರೂ 16,328 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅನುಮೋದಿಸಿತ್ತು. ತಲಾ ಶೇ 20ರಷ್ಟು ಪಾಲನ್ನು ರಾಜ್ಯ ಮತ್ತು ಕೇಂದ್ರವು ಭರಿಸಬೇಕು ಎಂದು ಒಪ್ಪಂದವಾಗಿದೆ. ಉಳಿದ ಶೇ 60 ರಷ್ಟು ವೆಚ್ಚವನ್ನು ಬಾಹ್ಯ ಸಾಲಗಳ ಮೂಲಕ ಭರಿಸಬೇಕಿದೆ.

ಎರಡೂ ಸರಕಾರಗಳು ( ರಾಜ್ಯ ಹಾಗೂ ಕೇಂದ್ರ ) ತಲಾ 2,526 ಕೋಟಿ ರೂ ನೀಡಬೇಕಿದೆ.

ರೋಲಿಂಗ್ ಸ್ಟಾಕ್ ಹೆಚ್ಚಳದ ವೆಚ್ಚವನ್ನು ತೆಗೆದುಹಾಕುವುದರಿಂದ, ಕೇಂದ್ರದ ವೆಚ್ಚವು ಈಗ ಈ ಗಮನಾರ್ಹವಾದ ಕಡಿತವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

Namma Metro

ನಮ್ಮ ಮೆಟ್ರೋ ಹಂತ-3 44.65 ಕಿಮೀ ವಿಸ್ತೀರ್ಣವನ್ನು ಹೊಂದಿದೆ. 31 ಮೆಟ್ರೋ ನಿಲ್ದಾಣಗಳೊಂದಿಗೆ ಎರಡು ಎಲಿವೇಟೆಡ್ ಕಾರಿಡಾರ್‌ಗಳನ್ನು ಒಳಗೊಂಡಿರುತ್ತದೆ. ಹೊರ ವರ್ತುಲ ರಸ್ತೆಯ ಪಶ್ಚಿಮದಲ್ಲಿರುವ ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರವರೆಗೆ ಕಾರಿಡಾರ್ ಒಂದು ನಿರ್ಮಾಣವಾಗಲಿದೆ. ಇದು 22 ನಿಲ್ದಾಣಗಳೊಂದಿಗೆ 32.15 ಕಿ.ಮೀ ವಿಸ್ತೀರ್ಣ ಹೊಂದಿದೆ. ಇದು ಏರ್‌ಪೋರ್ಟ್ ಲೈನ್‌ಗೆ ಸಂಪರ್ಕ ಕಲ್ಪಿಸಲಿದೆ.

ಹೊಸಹಳ್ಳಿಯಿಂದ ಕಡಬಗೆರೆವರೆಗೆ ( ಮಾಗಡಿ ರಸ್ತೆ ) ಕಾರಿಡಾರ್ ಎರಡು ಇರಲಿದೆ. ಇದು 12.5 ಕಿ.ಮೀ ವಿಸ್ತೀರ್ಣ ಹೊಂದಿದೆ. ಒಂಬತ್ತು ನಿಲ್ದಾಣಗಳು ನಿರ್ಮಾಣವಾಗಲಿದೆ. ಐದು ನಿಲ್ದಾಣಗಳಲ್ಲಿ ಇತರ ಮೆಟ್ರೋ ಮಾರ್ಗಗಳೊಂದಿಗೆ ಛೇದಕಗಳು ಇರುತ್ತವೆ.

ಯೋಜನೆಗೆ 113 ಎಕರೆ ಜಮೀನು ಅಗತ್ಯವಿದ್ದು, ಇದರಲ್ಲಿ ಶೇ.85ರಷ್ಟು ಸರ್ಕಾರಿ ಭೂಮಿ ಇರಲಿದೆ. ಇದು 2028 ರ ಗಡುವನ್ನು ಹೊಂದಿತ್ತು. ಅಂದಾಜಿನ ಪ್ರಕಾರ, ಪ್ರತಿದಿನ 9.12 ಲಕ್ಷ ಪ್ರಯಾಣಿಕರನ್ನು ಸಾಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+