ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: 11 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ

|
Google Oneindia Kannada News

Recommended Video

11 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ ಮಾಡಿದ ನಮ್ಮ ಮೆಟ್ರೋ | Oneindia Kannada

ಬೆಂಗಳೂರು, ಏಪ್ರಿಲ್ 04: ನಮ್ಮ ಮೆಟ್ರೋದಲ್ಲಿ ನಗದುರಹಿತ ಪ್ರಯಾಣ ಹೆಚ್ಚಾಗುತ್ತಿದೆ. ಪ್ರಯಾಣಿಕರು ಟೋಕನ್ ಕೊಳ್ಳುವ ಬದಲು ಸ್ಮಾರ್ಟ್ ಕಾರ್ಡ್ ಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಬೆಂಗಳೂರಿನ ಒಟ್ಟು 10.93 ಲಕ್ಷ ಜನರು ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದು, ಇದರಲ್ಲಿ ಪ್ರತಿನಿತ್ಯ 3ಲಕ್ಷ ಜನ ಸ್ಮಾರ್ಟ್ ಕಾರ್ಡ್ ಬಳಸಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ನೋಟು ಅಮಾನ್ಯೀಕರಣ ಬಳಿಕ ದೇಶದಲ್ಲಿ ನಗದು ರಹಿತ ವಹಿವಾಟು ಹೆಚ್ಚಾಗುತ್ತಿದೆ.

ನಮ್ಮ ಮೆಟ್ರೋ: ಟಾಪ್ ಅಪ್ ಕಾರ್ಡ್ ಗರಿಷ್ಟ ಮಿತಿ ಹೆಚ್ಚಳನಮ್ಮ ಮೆಟ್ರೋ: ಟಾಪ್ ಅಪ್ ಕಾರ್ಡ್ ಗರಿಷ್ಟ ಮಿತಿ ಹೆಚ್ಚಳ

ನಮ್ಮ ಮೆಟ್ರೋ ಆರಂಭವಾದ ವರ್ಷ 2012ರಲ್ಲಿ ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವೆ ಕೇವಲ 6ಕಿ.ಮೀ ಮೆಟ್ರೋ ಸಂಚಾರವಿತ್ತು. ಅಂದು ಸ್ಮಾರ್ಟ್ ಕಾರ್ಡ್ ಪ್ರಯಾಣಿಕರ ಸಂಖ್ಯೆ ಕೇವಲ 17,775, ಮೊದಲನೇ ಹಂತ(43ಕಿ.ಮೀ) 2017ರಲ್ಲಿ ಸಂಚಾರ ಮುಕ್ತವಾದ ಬಳಿಕ ಸ್ಮಾರ್ಟ್ ಕಾರ್ಡ್ ಹೊಂದಿರುವವರ ಸಂಖ್ಯೆ 10.93ಲಕ್ಷಕ್ಕೇರಿದೆ.

Namma Metro: 11 lakhs smart cards issued

183ಕೋಟಿ ರೂ. ರೀಚಾರ್ಜ್: ನಗದುರಹಿತ ಪ್ರಯಾಣಕ್ಕಾಗಿ ಬಿಎಂಆರ್ ಸಿಎಲ್ ಹೊರತಂದಿರುವ ಸ್ಮಾರ್ಟ್ ಕಾರ್ಡ್ ಪ್ರಯಾಣಿಕರನ್ನು ಸೆಳೆಯುವಲ್ಲಿ ಯಶ್ವಿಯಾಗಿದೆ.ಸ್ಮಾರ್ಟ್ ಕಾರ್ಡ್ ಪ್ರಯಾಣಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ಮಾರ್ಟ್ ಕಾರ್ಡ್ ಬಳಸಿ ಶೇ.15 ರಿಯಾಯಿತಿ ಸಿಗುತ್ತಿದ್ದು, ನಿತ್ಯ ಪ್ರಯಾಣಿಸುವವರು ಕಾರ್ಡ್ ಮೊರೆ ಹೋಗಿದ್ದಾರೆ.

ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!

ಸ್ಮಾರ್ಟ್ ಕಾರ್ಡ್ ಇದ್ದರೆ ಟಿಕೆಟ್ ಪಡೆಯಲು ಸರತಿಯಲ್ಲಿ ನಿಲ್ಲಬೇಕಿಲ್ಲ. ಇದು ಇನ್ನಷ್ಟು ಕಾರ್ಡ್ ಕೊಳ್ಳಲು ಪ್ರಯಾಣಿಕರನ್ನು ಪ್ರೇರೇಪಿಸುತ್ತದೆ.

ಠೇವಣಿ ಲಾಭ: ಪ್ರತಿ ಸಮಾರ್ಟ್ ಕಾರ್ಡ್ ತಯಾರಿಗೆ ನಿಗಮ 60.15 ರೂ. ಖರ್ಚು ಮಾಡುತ್ತದೆ. ಪ್ರಯಾಣಿಕರು ಕಾರ್ಡ್ ಗೆ ಮಾಡಿಸುವ ರಿಚಾರ್ಜ್ ಮೊತ್ತ ನಿಗಮಕ್ಕೆ ಉಳಿತಾಯ ಖಾತೆಯ ರೀತಿ ಕಾರ್ಯನಿರ್ವಹಿಸುತ್ತದೆ. 10ಲಕ್ಷ ಜನ ಮೆಟ್ರೋ ಖರೀದಿಸಿದ್ದರೂ, ನಿತ್ಯ ಬಳಸುವವರ ಸಂಖ್ಯೆ 3ಲಕ್ದವರೆಗಿರಬಹುದು.

ಓರ್ವ ಪ್ರಯಾಣಿಕ ಕನಿಷ್ಠ 100ರಿಂದ 500ರೂ ವರೆಗೆ ರೀಚಾರ್ಜ್ ಮಾಡಿಸುತ್ತಾನೆ. ಆದರೆ, ವಾರಕ್ಕೊಮ್ಮೆಯೋ ಅಥವಾ ತಿಂಗಳಿಗೊಮ್ಮೆಯೋ ಮೆಟ್ರೋ ಬಳಸುತ್ತಾನೆ. ಇಂತಹ ಲಕ್ಷಾಂತರ ಪ್ರಯಾಣಿಕರು ಮಾಡಿಸಿರುವ ರೀಚಾರ್ಜ್ ಮೊತ್ತ ನಿಗಮಕ್ಕೆ ಲಾಭದಾಯಕವಾಗಿದೆ.

English summary
BMRCL issued more than 11lakh smart cards for metro passengers. this leads to cashless time in Metro coaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X