Namma Bengaluru: ನಮ್ಮ ಬೆಂಗಳೂರನ್ನ ದ್ವೇಷಿಸುವಂತೆ ಮಾಡಬೇಡಿ: ಸೋಷಿಯಲ್ ಮೀಡಿಯಾ ಚರ್ಚೆ
ಬೆಂಗಳೂರು: ಬೆಂಗಳೂರು ಒಂದೊಲ್ಲೊಂದು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಲೇ ಇರುತ್ತವೆ. ಅದರಲ್ಲೂ ಕಳೆದ ಒಂದು ವರ್ಷಗಳಿಂದಲೂ ಬೆಂಗಳೂರಿನ ರಸ್ತೆಗುಂಡಿ ಹಾಗೂ ಬೆಂಗಳೂರು ಟ್ರಾಫಿಕ್ ಜಾಮ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಬೆಂಗಳೂರಿನ ಈ ಸಮಸ್ಯೆಗಳ ಬಗ್ಗೆ ಇಷ್ಟು ದಿನ ತಲೆಕೆಡಿಸಿಕೊಂಡಿದ್ದು ಸಾಕು ಇನ್ಮುಂದೆ ಏನಿದ್ದರೂ ನೇರವಾಗಿ ರೋಡ್‌ಗೆ ಇಳಿದು ಪ್ರತಿಭಟನೆ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಹಲವರು ನಾವೂ ರೆಡಿ ಎಂದಿದ್ದಾರೆ.
ಬೆಂಗಳೂರಿನ ನಿವಾಸಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಮೂಲಸೌಕರ್ಯ ಸಮಸ್ಯೆಯ ಬಗ್ಗೆ ಮಾಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾ ರೆಡಿಟ್‌ನಲ್ಲಿ ಕಳಪೆ ರಸ್ತೆಗಳು, ಸುದೀರ್ಘ ಟ್ರಾಫಿಕ್ ಜಾಮ್ ಸಮಸ್ಯೆ ಹಾಗೂ ಬೆಂಗಳೂರಿನಲ್ಲಿ ಜೀವನ ಮಟ್ಟ ಕುಸಿಯುತ್ತಿರುವ ಬಗ್ಗೆ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು ನನ್ನ ನಗರ, ನಾನು ಅದನ್ನು ಪ್ರೀತಿಸುತ್ತೇನೆ. ಆದರೆ ಇಲ್ಲಿನ ಸಮಸ್ಯೆಗಳನ್ನು ನಾನು ಇನ್ಮುಂದೆ ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿರುವ ಪೋಸ್ಟ್ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರವು ಆದ್ಯತೆಯ ಮೇಲೆ ಈ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಸರಿಪಡಿಸಬೇಕು ಎನ್ನುವ ಆಗ್ರಹಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪ್ರಿಯ ಬೆಂಗಳೂರು ಸರ್ಕಾರವೇ, ದಯವಿಟ್ಟು ಈ ನಗರವನ್ನು ದ್ವೇಷಿಸುವಂತೆ ಮಾಡಬೇಡಿ. ನಾನು ನನ್ನ ಜೀವನದುದ್ದಕ್ಕೂ ಇಲ್ಲಿ ವಾಸಿಸುತ್ತಿದ್ದೇನೆ.
ಬೆಂಗಳೂರಿನ ಪ್ರತಿಯೊಂದು ಅಂಶವನ್ನೂ ನಾನು ಪ್ರೀತಿಸುತ್ತೇನೆ. ನಾನು ಬೇರೆ ಯಾವುದೇ ನಗರದಲ್ಲಿ ವಾಸಿಸಿಲ್ಲ, ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೆಂಗಳೂರು ನನ್ನ ನಗರ. ಆದರೆ ಕಳೆದ ಕೆಲವು ವರ್ಷಗಳಿಂದ, ಎಲ್ಲವೂ ಹದಗೆಟ್ಟಿದೆ. ಸಂಚಾರ, ಗಾಳಿ, ನೀರು ಮತ್ತು ಮುಖ್ಯವಾಗಿ ರಸ್ತೆಗಳನ್ನು ಸರಿಪಡಿಸುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ವಾರಕ್ಕೆ ಕನಿಷ್ಠ ಎರಡು ಬಾರಿ ಸಿಲ್ಕ್ ಬೋರ್ಡ್‌ನಿಂದ ಮಹದೇವಪುರದವರೆಗಿನ ORR / ಬೆಂಗಳೂರು ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಪ್ರಯಾಣಿಸುತ್ತೇನೆ ಮತ್ತು ನನಗೆ ಇನ್ಮುಂದೆ ಸಾಧ್ಯವಿಲ್ಲ. ಟ್ರಾಫಿಕ್ ಜಾಮ್ ಸಮಸ್ಯೆ ತುಂಬಾ ಭಯಾನಕವಾಗಿದೆ. ನಾನು ಎಲ್ಲವನ್ನೂ ಪ್ರಯತ್ನಿಸಿದೆ: ಆಫೀಸ್ ಕ್ಯಾಬ್, ಬಸ್, ಕಾರು ಮತ್ತು ಬೈಕ್. ಪ್ರತಿಯೊಂದಕ್ಕೂ ಅದರ ಸಾಧಕ-ಬಾಧಕಗಳಿವೆ, ಆದರೆ ಒಟ್ಟಾರೆಯಾಗಿ, ಪ್ರತಿಯೊಂದು ಸಾರಿಗೆಯೂ ಈಗ ಒಂದೇ ಸಮಸ್ಯೆ ಎದುರಾಗಿದೆ. ಕೆಟ್ಟ ರಸ್ತೆಗಳು, ಭಯಾನಕ ಚಾಲಕರು ಮತ್ತು ಬಂಪರ್-ಟು-ಬಂಪರ್ ಟ್ರಾಫಿಕ್ ಜಾಮ್ ಸಮಸ್ಯೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕೆಟ್ಟ ರಸ್ತೆಗಳು ನಿಜಕ್ಕೂ ಅಪಾಯಕಾರಿಯಾದ ವಿಚಿತ್ರ ರಸ್ತೆಗಳಿವೆ. ನಾನು ಬೈಕ್‌ನಲ್ಲಿ ಪ್ರಯಾಣಿಸುವಾಗ, ನನ್ನ ಬೈಕ್ ಚಾಲನೆ ಸಾಹಸವೇ ಆಗುತ್ತಿದೆ. ದಯವಿಟ್ಟು ಬಸ್ ಪಥ ಯೋಜನೆಯನ್ನು ಮತ್ತೆ ಜಾರಿ ಮಾಡಿ. ಪ್ರತಿದಿನ ಹೆಚ್ಚಿನ ಸಂಚಾರ ಟ್ರಾಫಿಕ್ ಪೊಲೀಸರ ಅವಶ್ಯಕತೆ ಇದೆ.
ಅದು ಕೇವಲ ಪೀಕ್ ಸಮಯದಲ್ಲಿ ಮಾತ್ರವಲ್ಲ. (ಸಿಲ್ಕ್ ಬೋರ್ಡ್ ಕಡೆಗೆ) ಮಹದೇವಪುರ ಸೇತುವೆ, ಮಾರತಹಳ್ಳಿ ಸೇತುವೆ, ಇಕೋಸ್ಪೇಸ್ ಮತ್ತು ಸರ್ಜಾಪುರ ರಸ್ತೆಯ ನಂತರ HSR ಕಡೆಗೆ ಇರುವ ಪ್ರದೇಶದಂತಹ ಪ್ರತಿಯೊಂದು ಪಾಯಿಂಟ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಈ ಸಮಸ್ಯೆಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications