ಬೆಂಗಳೂರು : ಆಗಸದಲ್ಲಿ ಅಚ್ಚರಿಯ ವಿದ್ಯಮಾನ: ಹೊಳೆಯುವ ಬಾಗಿಲನಂತಹ ರಚನೆ ಕಂಡು ಅಚ್ಚರಿಗೊಂಡ ಜನ
ಬೆಂಗಳೂರಿನ ಆಗಸದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ, ಆಕಾಶದಲ್ಲಿ ನಿಗೂಢವಾಗಿ ಹೊಳೆಯುತ್ತಿರುವ ಬಾಗಿಲಿನ ಆಕಾರದ ನೆರಳು ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ನಗರದ ಹೆಬ್ಬಾಳದ ನಿವಾಸಿಯೊಬ್ಬರು ಇದರ ವಿಡಿಯೋ ಮಾಡಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರರಾದ ವಸೀಂ ಎನ್ನುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಅವರ ಪ್ರಕಾರ ಹೆಬ್ಬಾಳ ಫ್ಲೈ ಓವರ್ ಬಳಿ ಈ ನೆರಳು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಟ್ವಿಟರ್ ನಲ್ಲಿ ಈ ವಿಡಿಯೋ ಸದಸ್ಯ ಭಾರಿ ವೈರಲ್ ಆಗಿದ್ದು ದೇಶಾದ್ಯಂತ ನೆಟ್ಟಿಗರ ಗಮನ ಸೆಳೆದಿದೆ. ಹಲವರು ಹಲವು ರೀತಿಯಲ್ಲಿ ಈ ವಿಸ್ಮಯದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಸ್ವರ್ಗದ ಬಾಗಿಲು (Door To Heaven) ಎಂದು ಕೂಡ ಕರೆದಿದ್ದಾರೆ.
ಇನ್ನು ಕೆಲವರು ಮಳೆಯಾಗುತ್ತಿರುವ ಕಾರಣ ಮೋಡ ಕೆಳಗೆ ಇಳಿದಾಗ ಈ ರೀತಿಯಾಗಿರಬಹುದು ಎಂದು ಹೇಳಿದ್ದಾರೆ. ಇನ್ನೂ ಹಲವರು ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ ಫಿಲಿಪೈನ್ಸ್‌ನಲ್ಲಿ ಕೂಡ ಈ ರೀತಿ ಆಗಿತ್ತು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ರಹಸ್ಯದ ಬಾಗಿಲು ಎಂದು ಹೇಳಿದ್ದಾರೆ.
A mysterious shadow (object?) was seen in Bengaluru skies last night near Hebbal flyover. Did anyone else see? What could this possibly be? A shadow of a building? If it is, then what could possibly be the science behind it?
— Waseem ವಸೀಮ್ وسیم (@WazBLR) July 23, 2023
Credits: @SengarAditi pic.twitter.com/8YOIzvIsPv
ಬ್ರೋಕನ್ ಸ್ಪೆಕ್ಟರ್ ವಿದ್ಯಮಾನ?
ಈ ರೀತಿಯ ವಿಸ್ಮಯಕ್ಕೆ ಬ್ರೋಕನ್ ಸ್ಪೆಕ್ಟರ್ ಕಾರಣ ಎನ್ನಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಲವು ಅಧ್ಯಯನಗಳು ಕೂಡ ನಡೆದಿವೆ. ಜರ್ಮನ್ ದೇಶದ ಪರ್ವತವೊಂದರಲ್ಲಿ ಈ ರೀತಿ ಮೊದಲು ಕಾಣಿಸಿಕೊಂಡ ಕಾರಣ ಇದಕ್ಕೆ ಬ್ರೋಕನ್ ಸ್ಪೆಕ್ಟರ್ ಎಂದು ಹೆಸರು ಇಡಲಾಗಿದೆ.
ಬೆಟ್ಟ, ಗುಡ್ಡಗಳ ಹಿಂದೆ ಕಡಿಮೆ ಸೂರ್ಯ ಇದ್ದಾಗ ಬ್ರೋಕನ್ ಸ್ಪೆಕ್ಟರ್ ಕಾಣಿಸಿಕೊಳ್ಳುತ್ತದೆ, ಸೂರ್ಯನ ಕಿರಣಗಳು ಪರ್ವತ ಅಥವಾ ಶಿಖರದಿಂದ ಮಂಜಿನ ಕಡೆ ಬಿದ್ದಾಗ, ಸಹಜವಾಗಿ ಸೂರ್ಯನ ವಿರುದ್ಧದ ಬಿಂದುವಿನಲ್ಲಿ ಈ ರೀತಿಯ ಆಕೃತಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ಚೀನಾದಲ್ಲಿ ಇದೇ ರೀತಿ ವಿದ್ಯಮಾನ
ಬೆಂಗಳೂರು ಮಾತ್ರವಲ್ಲದೆ ಚೀನಾದಲ್ಲಿ ಕೂಡ ಇದೇ ರೀತಿ ವಿದ್ಯಾಮನ ನಡೆದಿದೆ. ಶಾಂಡೋಂಗ್ ಎನ್ನುವಲ್ಲಿ ಆಗಸದಲ್ಲಿ ಈ ವಿಸ್ಮಯ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ. ಇದನ್ನು ನೋಡಿದ ಜನ ಅಚ್ಚರಿ ಜೊತೆ ಕೆಲ ಕಾಲ ಆತಂಕಗೊಂಡಿದ್ದಾರೆ.
ಪ್ರಕೃತಿ ಎನ್ನುವುದು ಎಂದಿಗೂ ವಿಸ್ಮಯಗಳ ಆಗರ, ಮನುಷ್ಯ ಎಷ್ಟೇ ಅಧ್ಯಯನ ಮಾಡಿದರೂ ಅರ್ಥವಾಗದಂತಹ ಅದೆಷ್ಟೋ ಸೋಜಿಗಗಳು ನಡೆಯುತ್ತಲೇ ಇರುತ್ತವೆ.












Click it and Unblock the Notifications