• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುತ್ತೂಟ್ ದರೋಡೆ: 24 ಗಂಟೆಯಲ್ಲಿ 7 ಮಂದಿ ಸೆರೆ, 10 ಕೋಟಿ ವಶ

|

ಹೊಸೂರು, ಜನವರಿ 24: ಮುತ್ತೂಟ್ ಫೈನಾನ್ಸ್ ಬಾಗಲೂರು- ಹೊಸೂರು ರಸ್ತೆ ಶಾಖೆಯಲ್ಲಿ ದರೋಡೆ ನಡೆದ 24 ಗಂಟೆಗಳಲ್ಲಿ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, 10 ಕೋಟಿ ರು ಮೌಲ್ಯದ ಚಿನ್ನಾಭರಣ ವಾಪಸ್ ಸಿಕ್ಕಿದೆ.ತೆಲಂಗಾಣ, ತಮಿಳುನಾಡು, ಕರ್ನಾಟಕ ಪೊಲೀಸರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮುತ್ತೂಟ್ ಫೈನಾನ್ಸ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಬಾಗಲೂರು- ಹೊಸೂರು ರಸ್ತೆ ಶಾಖೆಯಲ್ಲಿ ಜನವರಿ 22ರಂದು ಸಶಸ್ತ್ರ ದರೋಡೆಕೋರರು ಸುಮಾರು 10 ಕೋಟಿ ರೂಪಾಯಿ ಮೌಲ್ಯದ 23 ಕೆ.ಜಿ. ಚಿನ್ನವನ್ನು ದರೋಡೆ ಮಾಡಿದ್ದರು. ಈ ಘಟನೆಯಲ್ಲಿ ಆರೋಪಿಗಳಾಗಿದ್ದ ಎಲ್ಲ ಏಳು ಮಂದಿಯನ್ನು ಘಟನೆ ನಡೆದ 24 ಗಂಟೆಗಳ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ. ದರೋಡೆ ಮಾಡಿದ್ದ ಎಲ್ಲ ಚಿಲ್ಲವನ್ನು 2021ರ ಜನವರಿ 23ರಂದು ಬೆಳಿಗ್ಗೆ ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ.

ಮುತ್ತೂಟ್ ಫೈನಾನ್ಸ್ ದರೋಡೆ, ಗನ್ ತೋರಿಸಿ 7 ಕೋಟಿ ರೂ. ಜೊತೆ ಎಸ್ಕೇಪ್..!ಮುತ್ತೂಟ್ ಫೈನಾನ್ಸ್ ದರೋಡೆ, ಗನ್ ತೋರಿಸಿ 7 ಕೋಟಿ ರೂ. ಜೊತೆ ಎಸ್ಕೇಪ್..!

ತೆಲಂಗಾಣ, ತಮಿಳುನಾಡು, ಕರ್ನಾಟಕ ಪೊಲೀಸರು ಈ ಪ್ರಕರಣದಲ್ಲಿ ಕ್ಷಿಪ್ರ ತನಿಖೆ ಮತ್ತು ಕಾರ್ಯಾಚರಣೆ ನಡೆಸಿ, ಸಕಾಲಿಕ ಕ್ರಮದಿಂದಾಗಿ ದರೋಡೆಕೋರರನ್ನು ಬಂಧಿಸಿದ್ದಾರೆ ಹಾಗೂ ದರೋಡೆ ಮಾಡಲಾದ ಚಿನ್ನವನ್ನು ಸಂಪೂರ್ಣವಾಗಿ ವಶಪಡಿಸಿಕೊಂದಿದ್ದಾರೆ. ವಶಪಡಿಸಿಕೊಂಡ ಎಲ್ಲ ಚಿನ್ನವನ್ನು ಸಾಯಿಬರಾಬಾದ್ ಠಾಣೆಯಲ್ಲಿಡಲಾಗಿದೆ.

ಪೊಲೀಸರಿಗೆ ಥ್ಯಾಂಕ್ಸ್ ಎಂದ ಮುತ್ತೂಟ್ ಸಂಸ್ಥೆ

ಪೊಲೀಸರಿಗೆ ಥ್ಯಾಂಕ್ಸ್ ಎಂದ ಮುತ್ತೂಟ್ ಸಂಸ್ಥೆ

ನಮಗೆ ಸಕಾಲಿಕ ಬೆಂಬಲ ನೀಡಿದ ತೆಲಂಗಾಣ ಮತ್ತು ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕರು ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ನಾವು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇವೆ. ಅಧಿಕಾರಿಗಳ ಜತೆ ನಾವು ಮಾತುಕತೆ ನಡೆಸುತ್ತಿದ್ದು, ಮುಂದೆಯೂ ಅವರ ಸಹಕಾರವನ್ನು ಯಾಚಿಸುತ್ತಾ, ಪೊಲೀಸರು ವಶಪಡಿಸಿಕೊಂಡ ಚಿನ್ನವನ್ನು ಆದಷ್ಟು ಶೀಘ್ರವಾಗಿ ನಮಗೆ ವಾಪಸ್ಸು ಮಾಡಲಾಗುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ. ಈ ಮೂಲಕ ಅದನ್ನು ಆಯಾ ಆಭರಣಗಳ ಮಾಲೀಕ ಗ್ರಾಹಕರಿಗೆ ಒದಗಿಸು ಅನುವು ಮಾಡಿಕೊಡುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಸಂಸ್ಥೆ ಹೇಳಿದೆ.

ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್

ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್

ಈ ಬಗ್ಗೆ ಪ್ರತಿಕ್ರಿಯಿಸಿದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್, "ಮುತ್ತೂಟ್ ಫೈನಾನ್ಸ್‍ನಲ್ಲಿ ನಮ್ಮ ಅಗ್ರಗಣ್ಯ ಆದ್ಯತೆಯೆಂದರೆ, ನಮ್ಮ ಮೌಲಿಕ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ನಮ್ಮ ಉದ್ಯೋಗಿಗಳಿಗೆ ಸಕಾರಾತ್ಮಕ ವಾತಾವರಣವನ್ನು ಕಲ್ಪಿಸಿಕೊಡುವುದು. ಈ ಮೂಲಕ ಉದ್ಯೋಗಿಗಳು ಸುರಕ್ಷಿತ ಎಂಬ ಭಾವನೆಯಿಂದ ಅತ್ಯುತ್ತಮ ಕ್ಷಮತೆಯನ್ನು ಸಾಧಿಸಲು ಅನುವು ಮಾಡಿಕೊಡುವುದು. ಈ ಘಟನೆಯ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ನಾವು ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಿದ್ದೇವೆ. ಈ ಕೃತ್ಯ ಎಸಗಿದ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಪೊಲೀಸರು ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನ್ನದು" ಎಂದು ಹೇಳಿದರು.

ಸಿಸಿಟಿವಿ ದೃಶ್ಯದ ನೆರವು

ಸಿಸಿಟಿವಿ ದೃಶ್ಯದ ನೆರವು

ಎರಡು ವಾರ ಹಿಂದಷ್ಟೇ ಮುತ್ತೂಟ್ ಫೈನಾನ್ಸ್‌ನ ಕೃಷ್ಣಗಿರಿ ಶಾಖೆಯಲ್ಲೂ ಕಳ್ಳತನ ಯತ್ನ ನಡೆದಿತ್ತು. ಆದರೆ ವಿಫಲವಾಗಿತ್ತು. ಆದರೆ ಹೊಸೂರಿನಲ್ಲಿ ದರೋಡೆಗೆ ಸಿಸಿಟಿವಿ ದೃಶ್ಯ ನೆರವಾಗಿತ್ತು. ಗನ್ ಹಿಡಿದ ವ್ಯಕ್ತಿಯೊಬ್ಬ, ಮುತ್ತೂಟ್ ಸಂಸ್ಥೆ ಸಿಬ್ಬಂದಿಯನ್ನು ಮಂಡಿಯೂರಿ ಕುಳಿತುಕೊಳ್ಳುವಂತೆ ಬೆದರಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ತಮಿಳುನಾಡಿನ ಹೊಸೂರು ಪೊಲೀಸರು ಮುತ್ತೂಟ್ ಫೈನಾನ್ಸ್‌ ಸಿಬ್ಬಂದಿ ಕೊಟ್ಟ ಮಾಹಿತಿ ಹಾಗೂ ಸಿಸಿಟಿವಿಯಲ್ಲಿ ಕಂಡು ಬಂದ ಮುಖಕ್ಕೆ ಮಾಸ್ಕ್, ಹೆಲ್ಮೆಟ್ ಧರಿಸಿದ್ದ ದರೋಡೆಕೋರರನ್ನು ಪೊಲೀಸರು ಗುರುತಿಸಿ ಬಲೆ ಬೀಸಿ, ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

  'Parakram' ವೇದಿಕೆಯಲ್ಲಿ ಪ್ರಭಾವಿಗಳ ಮುಖಾಮುಖಿ-ನಾ ಅತ್ತ.. ನೀ ಇತ್ತ ಅಂತಿದ್ದಾರೆ ಮೋದಿ-ದೀದಿ | Oneindia Kannada
  ಮುತ್ತೂಟ್ ಸಮೂಹದ ಬಗ್ಗೆ

  ಮುತ್ತೂಟ್ ಸಮೂಹದ ಬಗ್ಗೆ

  ಮುತ್ತೂಟ್ ಸಮೂಹ 20 ವೈವಿಧ್ಯಮಯ ವಹಿವಾಟು ವಿಭಾಗಗಳನ್ನು ಹೊಂದಿದೆ. 5300ಕ್ಕೂ ಹೆಚ್ಚು ಶಾಖೆಗಳೊಂದಿಗೆ ಈ ಸಮೂಹವು ಪ್ರತಿದಿನ 2.5 ಲಕ್ಷಕ್ಕೂ ಗ್ರಾಹಕರಿಗೆ ಪ್ರತಿ ದಿನ ಸೇವೆ ಒದಗಿಸುತ್ತಿದೆ. ಈ ಸಮೂಹದ ಪ್ರಮುಖ ಕಂಪನಿಗಳು 46 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಮಾರುಕಟ್ಟೆ ಬಂಡವಾಳವನ್ನು ಹೊಂದಿವೆ. ಕ್ರೋಢೀಕೃತ ಎಯುಎಂ 52,286 ಕೋಟಿ ರೂಪಾಯಿ ಆಗಿದ್ದು, ಇದು ಭಾರತದ ಅತಿದೊಡ್ಡ ಚಿನ್ನದ ಸಾಲ ನೀಡುವ ಎನ್‍ಬಿಎಫ್‍ಸಿ ಆಗಿದೆ. ಜಾಗತಿಕವಾಗಿ ಈ ಸಮೂಹವು ಅಮೆರಿಕ, ಬ್ರಿಟನ್, ಯುಎಇ, ಕೋಸ್ಟರಿಕ, ನೇಪಾಳ ಮತ್ತು ಶ್ರೀಲಂಕಾದಲ್ಲಿ ಅಸ್ತಿತ್ವ ಹೊಂದಿದೆ.

  English summary
  All the seven robbers who had looted 23 kg gold worth Rs. 10 crore from the branch have been arrested by the police authorities within 24 hours of the incident and taken into custody.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X