ಪ್ರವೀಣ್ ಡಿ ರಾವ್ ತಂಡದಿಂದ ಫ್ಯೂಷನ್ ಸಂಗೀತ ಸಂಜೆ

ಬೆಂಗಳೂರು, ಫೆ.9: ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತ ಸಮ್ಮಿಶ್ರಣವನ್ನು ಸಂಗೀತ ರಸಿಕರಿಗೆ ಉಣಬಡಿಸಲು ಸಂಗೀತಗಾರ ಪ್ರವೀಣ್ ಡಿ. ರಾವ್ ನೇತೃತ್ವದ ಚಕ್ರಫೋನಿಕ್ಸ್ ತಂಡ ಸಜ್ಜಾಗಿದೆ. ಫೆ.13ರಂದು ಸಂಜೆ ಬೆಂಗಳೂರಿಗರು ಸಂಗೀತ ಧಾರೆಯಲ್ಲಿ ಮಿಂದೇಳಬಹುದು.

ಗಾಯಕ ಅಜಯ್ ರಾವ್, ಗಾಯಕಿ ಕಮ್ ಕೊಳಲು ವಾದಕಿ ವಿ ವಾರಿಜಾಶ್ರೀ, ಸಂಗೀತಗಾರ ಪ್ರವೀಣ್ ಡಿ ರಾವ್ ಹಾಗೂ ಪ್ರಮಥ್ ಕಿರಣ್ ಅವರಿರುವ ಚಕ್ರಫೋನಿಕ್ಸ್ ತಂಡ ಸಂಗೀತದ ವೈವಿಧ್ಯತೆಯ ಪರಿಚಯವನ್ನು ಲೈವ್ ಶೋ, ಸಂಗೀತ ರಸಸಂಜೆಗಳ ಮೂಲಕ ಮಾಡುತ್ತಾ ಬಂದಿದೆ.

Chakrafonics Music event Gayana Samaja Bengaluru

ಭಾರತೀಯ ಶಾಸ್ತ್ರೀಯ ಸಂಗೀತ(ಗಾಯನ ಹಾಗೂ ವಾದ್ಯ), ಫ್ಯೂಷನ್, ಕನ್ನಡ ಭಾವಗೀತೆ ಗಾಯನ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಭಜನೆ, ಭಕ್ತಿಗೀತೆ ಗಾಯನ, ಗುಲಾಂ ಅಲಿ, ಜಗಜೀತ್ ಸಿಂಗ್, ಹರಿಹರನ್, ಮಧುರಾಣಿ ಮುಂತಾದವರ ಗಜಲ್ ಗಾಯಕ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಚಕ್ರಫೋನಿಕ್ಸ್ ನಿರತವಾಗಿದೆ.

ಭಾರತೀಯ ಶಾಸ್ತ್ರೀಯ ಸಂಗೀತ, ಗಾಯನ, ವಾದ್ಯ ಸಂಯೋಜನೆ ಕುರಿತಂತೆ ಹಲವಾರು ವರ್ಕ್ ಶಾಪ್ ಗಳನ್ನು ಚಕ್ರ ಫೋನಿಕ್ಸ್ ನಡೆಸುತ್ತಾ ಬಂದಿದೆ. ಈಗ ಚಕ್ರಫೋನಿಕ್ಸ್ ತಂಡ ಫೆ.13ರಂದು ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನೀಡಲು ಮುಂದಾಗಿದೆ.

ದಿನಾಂಕ/ಸಮಯ: ಫೆ.13, ಸಂಜೆ 7 ಗಂಟೆ ನಂತರ
ಸ್ಥಳ: ಗಾಯನ ಸಮಾಜ, ಕೆ.ಆರ್ ರಸ್ತೆ, ಬೆಂಗಳೂರು
ಟಿಕೆಟ್ ದರ: 200 ರು
ಟಿಕೆಟ್ ಕೊಳ್ಳಲು ವೆಬ್ ತಾಣ: www.bookurevent.com

ಚಕ್ರಫೋನಿಕ್ಸ್ ತಂಡ ಆಹ್ವಾನ ವಿಡಿಯೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+