ಅತಿ ಹೆಚ್ಚು ಕಾರು ಹೊಂದಿರುವ ನಗರ ಮುಂಬೈ, ಬೆಂಗಳೂರಿಗೆ ಯಾವ ಸ್ಥಾನ
ಬೆಂಗಳೂರು, ಮಾರ್ಚ್ 25: ವಾಣಿಜ್ಯನಗರ ಮುಂಬೈ ವಾಹನ ದಟ್ಟಣೆ ಸುದ್ದಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ಕಿಲೋಮೀಟರ್‌ಗೆ ದೇಶದಲ್ಲಿ ಅತಿ ಹೆಚ್ಚು ಕಾರು ಸಾಂಧ್ರತೆ ಇರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಪ್ರತಿ ಕಿ.ಮೀಗೆ 510 ಕಾರುಗಳಿವೆ ಎಂದು ವರದಿಯಲ್ಲಿ ದಾಖಲಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಅತಿ ಕಡಿಮೆ ಕಾರು ದಟ್ಟೆಣೆ ಇರುವ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಪ್ರತಿ ಕಿ.ಮೀ 148 ಕಾರುಗಳು ಬೆಂಗಳೂರಿನಲ್ಲಿವೆ ಎನ್ನುವ ವಿಷಯ ಬಹಿರಂಗಗೊಂಡಿದೆ.
2016ರಲ್ಲಿ ನಡೆದ ಸಮೀಕ್ಷೆಯಲ್ಲಿ 430 ಕಾರುಗಳಿದ್ದವು ಕಳೆದ ಎರಡು ವರ್ಷಗಳಲ್ಲಿ ಪ್ರತಿ ಕಿ.ಮೀ 80 ಕಾರುಗಳು ಹೆಚ್ಚಾಗಿವೆ. ನಂತರ ಸ್ಥಾನದಲ್ಲಿ ಮಹಾರಾಷ್ಟ್ರದ ಪುಣೆ ಪ್ರತಿ ಕಿ.ಮೀಗೆ 359ಕಾರುಗಳನ್ನು ಹೊಂದಿದೆ.

ಇದನ್ನು ಬಿಟ್ಟರೆ ಕೊಲ್ಕತ್ತ, ಚೆನ್ನೈ, ಬೆಂಗಳೂರು, ದೆಹಲಿ ನಂತರದ ಸ್ಥಾನದಲ್ಲಿದೆ. ಕೊಲ್ಕತ್ತದಲ್ಲಿ 319, ಚೆನ್ನೈನಲ್ಲಿ 297, ದೆಹಲಿಯಲ್ಲಿ 108, ಬೆಂಗಳೂರಿನಲ್ಲಿ ಪ್ರತಿ ಕಿ.ಮೀಗೆ 149 ಕಾರುಗಳಿವೆ ಎಂದು ವರದಿ ತಿಳಿಸಿದೆ.
ಕಾರಿನ ಸಾಂಧ್ರತೆ ಹೆಚ್ಚಾಗಿರುವುದು ಮುಂಬೈ, ಒಉಣೆಯಂತಹ ಮಹಾನಗರಗಳಿಗೆ ತಲೆನೋವಾಗಿದೆ. ಪಾರ್ಕಿಂಗ್ ಸಮಸ್ಯೆಯೂ ಕೂಡ ವಿಪರೀತವಾಗಿದೆ. ಈ ರೀತಿಯ ಕಾರು ಖರೀದಿ ಪ್ರಕ್ರಿಯೆಗೆ ತಡೆ ಹಾಕದಿದ್ದರೆ ಮುಂಬೈ ಹಾಗೂ ಪುಣೆ ನಗರಗಳು ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ.












Click it and Unblock the Notifications