• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೀಂ ಇಂಡಿಯಾದಂತೆ ನಾವೆಲ್ಲ ಜನಪ್ರತಿನಿಧಿಗಳು: ಅನಂತ್

By Mahesh
|

ಬೆಂಗಳೂರು, ಡಿ.14: ಆನೇಕಲ್ ತಾಲೂಕು ಜಿಗಣಿ ಹೋಬಳಿಯ ರಾಗಿಹಳ್ಳಿ ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲ ಕೆಲಸ ಮಾಡಬೇಕಿದೆ. ಭಾರತದ ಕ್ರಿಕೆಟ್ ತಂಡದಂತೆ ನಾವೆಲ್ಲ ಜನಪ್ರತಿನಿಧಿಗಳು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ರಾಗಿಹಳ್ಳಿ ಗ್ರಾಮ ಪಂಚಾಯತ್ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆ ಪಕ್ಷಾತೀತ ಯೋಜನೆ. ನಾವೆಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ಸಂಸದರಿಂದ ಗ್ರಾಮ ಪಂಚಾಯತ್ ಸದಸ್ಯರವರೆಗೆ ನಾವುಗಳು ಈ ಗ್ರಾಮಾಭಿವೃದ್ಧಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಗಳವರು ಕೂಡ ಕೈ ಜೋಡಿಸಬೇಕೆಂದು ಮನವಿ ಮಾಡಿದರು. [ಆಂಧ್ರದ ಗ್ರಾಮ ದತ್ತು ಪಡೆದ ಸಚಿನ್ ತೆಂಡೂಲ್ಕರ್]

ಅಧಿಕಾರಿಗಳು ಯೋಜನೆಯನ್ನು ಕಾಲಬದ್ಧವಾಗಿ ಮತ್ತು ಪಾರದರ್ಶಕವಾಗಿ ಜಾರಿಗೊಳಿಸಬೇಕೆಂದು ಸೂಚಿಸಿದರು. ನೆರೆದ ಜನರಿಗೆ ನಾನು ಈ ಗ್ರಾಮ ಪಂಚಾಯತ್ ದತ್ತು ತೆಗೆದುಕೊಂಡಿದ್ದರೂ ನೀವೇ ನನ್ನನ್ನು ದತ್ತು ತೆಗೆದುಕೊಂಡಂತಾಗಿದೆ ಎಂದು ನುಡಿದರು.

ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಅನಂತಕುಮಾರ್ ಅವರು ನನ್ನ ಲೋಕಸಭಾ ಕ್ಷೇತ್ರದಡಿಯ ರಾಗಿಹಳ್ಳಿ ಗ್ರಾಮ ಪಂಚಾಯತ್ ನ ಆದರ್ಶಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿರುವದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಗ್ರಾಮದ ಸಮಸ್ಯೆಗಳತ್ತ ಗಮನ ಹರಿಸಲಾಗುವುದು : ಅನಂತ್

ಗ್ರಾಮದ ಸಮಸ್ಯೆಗಳತ್ತ ಗಮನ ಹರಿಸಲಾಗುವುದು : ಅನಂತ್

ಚರಂಡಿ ವ್ಯವಸ್ಥೆ, ಪ್ರತಿ ಮನೆಗೆ ಶೌಚಾಲಯ, ಸೂಕ್ತ ಕುಡಿಯುವ ನೀರು ವ್ಯವಸ್ಥೆ, ರೈತ ಸಲಹಾ ಕೇಂದ್ರ ಮೊದಲಾದ ಬೇಡಿಕೆಗಳು ಗಮನಕ್ಕೆ ಬಂದಿದ್ದು, ಪ್ರತಿ ಮನೆಗೆ ಶೌಚಾಲಯಕ್ಕಾಗಿ ತಕ್ಷಣ ಯೋಜನೆ ರೂಪಿಸಲಾಗುವುದು ಮತ್ತು ಶಿವನಹಳ್ಳಿ ಹಾಗು ರಾಗಿಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಶೀಘ್ರದಲ್ಲೇ ಮಾಡಲಾಗುವುದು.

ಜನಧನ್ ಯೋಜನೆಯನ್ನು ಜಾರಿ

ಜನಧನ್ ಯೋಜನೆಯನ್ನು ಜಾರಿ

ಪ್ರತಿ ಬಡಕುಟುಂಬಕ್ಕೆ ಬ್ಯಾಂಕ್ ಖಾತೆ ಒದಗಿಸುವ ಪ್ರಧಾನಮಂತ್ರಿ ಜನಧನ್ ಯೋಜನೆಯನ್ನು ಜಾರಿಮಾಡಲಾಗುವುದು, ಗ್ರಾಮೀಣ ಭಾರತ ಅಭಿವೃದ್ಧಿಗಾಗಿ ಇರುವ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅನಂತಕುಮಾರ್ ಹೇಳಿದರು.

ಗಣ್ಯರ ಉಪಸ್ಥಿತಿ

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾಪಂಚಾಯತ್ ಅಧ್ಯಕ್ಷ ರಾಮಚಂದ್ರ, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಮಾತನಾಡಿದರು. ಜಿಲ್ಲಾಪಂಚಾಯತ್ ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರುಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿವನಹಳ್ಳಿ ರಾಮಕೃಷ್ಣ ಮಿಶನ್ ಶಾಲೆಗೆ ಭೇಟಿ

ಶಿವನಹಳ್ಳಿ ರಾಮಕೃಷ್ಣ ಮಿಶನ್ ಶಾಲೆಗೆ ಭೇಟಿ

ಶಿವನಹಳ್ಳಿ ರಾಮಕೃಷ್ಣ ಮಿಶನ್ ಶಾಲೆಯ ಆವರಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸೌರ ವಿದ್ಯುತ್ ದೀಪಗಳನ್ನು ವಿತರಣೆ ಮಾಡಲಾಯಿತು.

ಶಿವನಹಳ್ಳಿ ರಾಮಕೃಷ್ಣ ಮಿಶನ್ ಶಾಲೆಯಲ್ಲಿ ಗಣ್ಯರು

ಶಿವನಹಳ್ಳಿ ರಾಮಕೃಷ್ಣ ಮಿಶನ್ ಶಾಲೆಯಲ್ಲಿ ಗಣ್ಯರು

ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾಪಂಚಾಯತ್ ಅಧ್ಯಕ್ಷ ರಾಮಚಂದ್ರ, ಜಿಲ್ಲಾಪಂಚಾಯತ್ ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರುಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು, ರಾಮಕೃಷ್ಣ ಆಶ್ರಮದ ವಿಷ್ಣುವiಯಾನಂದ ಸ್ವಾಮೀಜಿ, ಸೌಖ್ಯಾನಂದ ಸ್ವಾಮೀಜಿ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Fertilizer and Chemical minister, MP Ananth Kumar adopts Ragihalli Gram Panchayat Pradhan Mantri Sansad Adarsh Gram Yojana. Ragihalli comes under Bengaluru South Parliamentary Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more