ಮೊಬೈಲಿನಲ್ಲಿ ಸಂಪೂರ್ಣ ಕನ್ನಡ ಬ್ರೌಸರ್ ಬೇಕೆ?
ಮೊಬೈಲ್ ಫೋನ್ ಸಂಪೂರ್ಣ ಕನ್ನಡಮಯ ಮಾಡಿಕೊಳ್ಳುವ ಬಯಕೆಯುಳ್ಳ ಕನ್ನಡ ಪ್ರೇಮಿಗಳಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ಈಗಾಗಲೇ ಮೊಝಿಲ್ಲಾ ಫೈರ್ಫಾಕ್ಸ್ ಡೆಸ್ಕ್ ಟಾಪ್ ಆವೃತ್ತಿ ಬಳಕೆ ಮಾಡಿದವರಿಗೆ ಈಗ ಆಂಡ್ರಾಯ್ಡ್ ಮೊಬೈಲ್ ಆವೃತ್ತಿಯಲ್ಲಿ ಕನ್ನಡದಲ್ಲಿ ಫೈರ್ಫಾಕ್ಸ್ ಬಳಸಬಹುದಾಗಿದೆ.
ಆದರೆ, ಫೈರ್ಫಾಕ್ಸ್ ಮೊಬೈಲ್ ಆವೃತ್ತಿ ಬಿಡುಗಡೆಗೆ ಮುನ್ನ - ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದೆ. ಹೌದು, ಸಾರ್ವಜನಿಕರೂ ಕೂಡಾ ಈ ಟೆಸ್ಟಿಂಗ್ ನಲ್ಲಿ ಪಾಲ್ಗೊಳ್ಳಬಹುದು. ಜತೆಗೆ ಮೊಝಿಲ್ಲಾದ ಇನ್ನಿತರ ಉತ್ಪನ್ನಗಳನ್ನು ಕನ್ನಡಕ್ಕೆ ಅನುವಾದ ಮಾಡಿ ವೆಬ್ ಲೋಕದಲ್ಲಿ ಕನ್ನಡದ ಬಳಕೆ ಹೆಚ್ಚಿಸಬಹುದು. ಸಂಪೂರ್ಣ ಕನ್ನಡ ಬ್ರೌಸರ್ ಫೆನೆಕ್ ಅವೃತ್ತಿ ಹುಟ್ಟು ಹಾಗೂ ಬೆಳವಣಿಗೆ ಬಗ್ಗೆ ಓಂಶಿವಪ್ರಕಾಶ್ ಅವರು ನೀಡಿರುವ ವಿವರಣೆ ಮುಂದಿದೆ ಓದಿ...
ಸ್ಯಾಮ್ ಸಂಗ್ ಮೊಬೈಲ್ ಗಳು 9 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿರುವ ವಿಷಯ ತಿಳಿದ ಮೊಝಿಲ್ಲಾ ತಂಡ, ಆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊಝಿಲ್ಲಾ ಫೈರ್ಫಾಕ್ಸ್ ನ ಫೆನೆಕ್ (Fennec) ಆವೃತ್ತಿಯನ್ನು ಹೊರತರಲು ಸಂಬಂಧಪಟ್ಟ ಸಮುದಾಯಗಳನ್ನು ಮಾರ್ಚ್ ನಲ್ಲಿ ಸಂಪರ್ಕಿಸಿತ್ತು. ಅದರಲ್ಲಿ ಕನ್ನಡವೂ ಒಂದು. ಫೆನೆಕ್ ಆವೃತ್ತಿ 31ರಲ್ಲಿ ಕನ್ನಡವನ್ನೂ ನೋಡುವ ಅವಕಾಶ ಇದರಿಂದ ಲಭ್ಯವಾಯಿತು (ಮೊಬೈಲ್ ನಲ್ಲಿ). ಈಗಾಗಲೇ ಮೊಝಿಲ್ಲಾ ಡೆಸ್ಕ್ ಟಾಪ್ ಆವೃತ್ತಿ ಕನ್ನಡದಲ್ಲಿ ಲಭ್ಯವಿರುವುದು ನಿಮಗೆ ತಿಳಿದಿರಬಹುದು.

ಮೊಝಿಲ್ಲಾ ಫೈರ್ಫಾಕ್ಸ್ ನ ಫೆನೆಕ್ (Fennec) ಆವೃತ್ತಿ
ಫೆನೆಕ್ ಆವೃತ್ತಿ 31ರಲ್ಲಿ ಕನ್ನಡವನ್ನೂ ನೋಡುವ ಅವಕಾಶ ಇದರಿಂದ ಲಭ್ಯವಾಯಿತು (ಮೊಬೈಲ್ ನಲ್ಲಿ). ಈಗಾಗಲೇ ಮೊಝಿಲ್ಲಾ ಡೆಸ್ಕ್ ಟಾಪ್ ಆವೃತ್ತಿ ಕನ್ನಡದಲ್ಲಿ ಲಭ್ಯವಿರುವುದು ನಿಮಗೆ ತಿಳಿದಿರಬಹುದು.

ಕನ್ನಡೀಕರಿಸುವ ಕೆಲಸ ಮೊದಲಾಗಬೇಕಿತ್ತು
ಫೆನೆಕ್ ಗೆ ಕನ್ನಡ ಆವೃತ್ತಿ ಸೇರಿಸಲು ಮೊದಲು ಅದರಲ್ಲಿರುವ ಎಲ್ಲ ಇಂಗ್ಲೀಷ್ ವಾಕ್ಯಗಳನ್ನು ಕನ್ನಡೀಕರಿಸುವ ಕೆಲಸ ಮೊದಲಾಗಬೇಕಿತ್ತು. 4459 ಪದಗಳನ್ನು ಒಳಗೊಂಡ ದೊಡ್ಡ ಮೊತ್ತದ ಸಾಲುಗಳನ್ನು ಕನ್ನಡೀಕರಿಸುವ ಕೆಲಸವನ್ನು ಮೊಝಿಲ್ಲಾ ಕನ್ನಡ ಸಮುದಾಯ ಪೂರ್ಣಗೊಳಿಸಿದೆ.

ಮೊಬೈಲ್ ಅಪ್ಲಿಕೇಷನ್ ಬಳಸಿ ಟೆಸ್ಟ್
ಈಗ ಮುಗಿಸಲಾಗಿರುವ ಅನುವಾದದ ಕೆಲಸವನ್ನು ಮೊಬೈಲ್ ಅಪ್ಲಿಕೇಷನ್ ಬಳಸಿ ಟೆಸ್ಟ್ ಮಾಡಬಹುದಾಗಿದೆ. ಈ ಕೊಂಡಿಯಲ್ಲಿರುವ ಆಂಡ್ರಾಯ್ಡ್ ಅಪ್ಲಕೇಷನ್ ಅನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿಳಿಸಿಕೊಂಡು ಕನ್ನಡೀಕರಿಸಿದ ಫೈರ್ಫಾಕ್ಸ್ ಕೆಲಸ ಮಾಡುವುದನ್ನು ನೋಡಬಹುದು.

ನಿಮ್ಮ ಪ್ರತಿಕ್ರಿಯೆಗಳನ್ನು ಇಲ್ಲಿ ದಾಖಲಿಸಿ
ಯಾವುದೇ ಬದಲಾವಣೆ ಬೇಕು ಎನಿಸಿದಲ್ಲಿ ನಿಮ್ಮ ಪ್ರತಿಕ್ರಿಯೆಗಳನ್ನು ಲಿನಕ್ಸಾಯಣ.ನೆಟ್ ನಲ್ಲಿ ಬಂದಿರುವ 'ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ' ಎಂಬ ಲೇಖನದ ಕೊನೆಯಲ್ಲಿ ದಾಖಲಿಸಿ.
ಈ ಅನುವಾದಗಳನ್ನು ನೀವೇ ಖುದ್ದಾಗಿ ಸರಿಪಡಿಸಲು http://mozilla.locamotion.org/kn/mobile/ ನಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications