ತಾಯಿ ಮಂಗನ ಮೌನ ರೋದನೆ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕರುಣಾಜನಕ ದೃಶ್ಯ..Video Viral
ಬೆಂಗಳೂರು; ತಾಯಿ-ಮಕ್ಕಳ ಪ್ರೀತಿ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿ ಇರುತ್ತವೆ. ಅವುಗಳಿಗೂ ಏನಾದರೂ ಆದರೆ ಪರಸ್ಪರ ರೋದಿಸುತ್ತವೆ. ಭಾವುಕವಾಗುತ್ತವೆ ಎಂದು ಸಾಕಷ್ಟು ಪ್ರಾಣಿಗಳಲ್ಲಿ ನೋಡಿದ್ದೇವೆ. ಅಪರೂಪ ಎಂಬಂತೆ ಇಲ್ಲೊಂದು ತಾಯಿ ಮಂಗ ತನ್ನ ಮರಿ ಸತ್ತು ದಿನಗಳೇ ಕಳೆದರೂ ಸಹಿತ ಮಗುವಿನ ಅಸ್ತಿಪಂಜರ ಹಿಡಿದು ಎದೆಗಪ್ಪಿ ತಿರುಗಾಡುತ್ತಿರುವ ದಶ್ಯವು ಕಲ್ಲು ಹೃದಯವರನ್ನು ಕರಗಿಸುವಂತಿದೆ.
ತಾಯಿ ಪ್ರೀತಿಗೆ ಸರಿ ಸಾಟಿಯೇ ಇಲ್ಲ ಎಂಬ ಮಾತಿದೆ. ಈ ಮಾತನ್ನು ಅಕ್ಷರಶಃ ನಿಜವೆಂದು ಪ್ರತಿಬಿಂಬಿಸುಂತಹ ಹೃದಯಸ್ಪರ್ಶಿ ದೃಶ್ಯವು ಬೆಂಗಳೂರಿನ ಹಸಿರು ಮೆಟ್ರೋ ಮಾರ್ಗದ ಮಾದಾವರ ನಿಲ್ದಾಣದಲ್ಲಿ ಕಂಡು ಬಂದಿದೆ. ಅಲ್ಲಿಂದ ಓಡಾಡುವ ಪ್ರಯಾಣಿಕರು ತಾಯಿಯಿ ಪ್ರೀತಿ, ಮಮಕಾರಕ್ಕೆ ಸಾಕ್ಷಿಯಾಗಿದ್ದಾರೆ. ಕುರುಳು ಹಿಂಡುವ ಈ ತಾಯಿ ಮಂಗನ ದೃಶ್ಯಗಳಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಅದೀಗ ವೈರಲ್ ಆಗುತ್ತಿದೆ.

ಮರಿ ಮಂಗ ಸತ್ತು ವಾರವೇ ಆಗಿದೆ!
ಮರಿ ಮಂಗ ಸತ್ತು ವಾರವೇ ಕಳೆದಿರಬಹುದು. ಆದರೆ ಮಗುವಿನ ಸಾವಿನ ಸತ್ಯವನ್ನು ಒಪ್ಪದ ತಾಯಿ ಕೋತಿ ಅದರ ಅಸ್ತಿಪಂಜರವನ್ನು ಹಿಡಿದು ಮೆಟ್ರೊ ನಿಲ್ದಾಣದಲ್ಲೆಲ್ಲ ಸುತ್ತಾಡುತ್ತಿದೆ. ಜೀವಂತ ಮರಿ ಮಂಗನಂತೆ ಎದೆಗಪ್ಪಿಕೊಂಡು ಪ್ರೀತಿ ತೋರಿಸುತ್ತಿದೆ. ಈ ದೃಶ್ಯ ನೋಡಲು ಕರುಣಾಜನಕವೆನಿಸುತ್ತದೆ. ಜೊತೆಗೆ ತಾಯಿ ಮಮಕಾರ, ಪ್ರೀತಿ ಮುನುಷ್ಯರಂತೆ ಪ್ರಾಣಿಗಳಲ್ಲಿ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ಮಂಗಗಳು ಸದಾ ಕಿಟಲೇ ಮಾಡುತ್ತಿರುತ್ತವೆ. ಅವುಗಳಿಂದ ಭಾವುಕ ವರ್ತನೆ ತೀರಾ ಕಡಿಮೆ. ಅಂಥದರಲ್ಲಿ ಈ ತಾಯಿ ಕೊಟಿ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಅಸ್ತಿಪಂಜರದೊಂದಿಗೆ ಜಗತ್ತಿನ ಇರುವಿಕೆ ಮರೆತು ಮಗು ಕಳೆದುಕೊಂಡು ತನ್ನದೇ ಆದ ಲೋಕದಲ್ಲಿ ಓಡಾಡುತ್ತಿದೆ. ಮೌನವಾಗಿಯೇ ರೋದಿಸುತ್ತಿದೆ. ಅದನ್ನು ಕಂಡ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಮಮ್ಮಲ ಮರುಗಿದ್ದಾರೆ. ಹೃದಯ ವಿದ್ರಾವಕ ದಶ್ಯಗಳಿರುವ ವಿಡಿಯೋ ವೈರಲ್ ಆಗುತ್ತಿದೆ.
'ಜಗತ್ತಿನಲ್ಲಿ ತಾಯಿ ಪ್ರೀತಿ ಒಂದೇ' ಅದು ಮನುಷ್ಯರಾದರೂ ಅಷ್ಟೇ, ಪ್ರಾಣಿಗಳಾದರು ಅಷ್ಟೆ ಎಂದು ನೆಟ್ಟಿಗರು ವೈರಲ್ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ.












Click it and Unblock the Notifications