ಐದು ಹೊಸ ಡ್ರೆಸ್ ಜತೆ ಹೆಣ್ಣು ಮಗುವನ್ನು ಬಿಟ್ಟುಹೋದ ತಾಯಿ

ಬೆಂಗಳೂರು, ಅಕ್ಟೋಬರ್ 27: ಐದು ಜತೆ ಹೊಸ ಡ್ರೆಸ್‌ ಜತೆ ಹೆಣ್ಣುಮಗುವನ್ನು ದೇವಸ್ಥಾನದೆದುರು ಬಿಟ್ಟುಹೋದ ಘಟನೆ ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ.

ನವಜಾತ ಮಗುವನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದ ನಿದರ್ಶನವಿದೆ, ಕೆಲವೊಮ್ಮೆ ಸಾಕಲು ಕಷ್ಟವಾಗುತ್ತದೆ ಎಂದು ಬಿಟ್ಟು ಹೋದ ನಿದರ್ಶನಗಳಿವೆ ಆದರೆ ನೋಡಲು ಸ್ಥಿತಿವಂತರಂತೆ ಕಾಣುವ ಅವರು ಐದು ಹೊಸ ಡ್ರೆಸ್‌ಗಳ ಜತೆಗೆ ಮಗುವನ್ನು ದೇವಸ್ಥಾನದೆದುರು ಬಿಟ್ಟು ಹೋಗಿದ್ದಾರೆ.

ಹೆಣ್ಣು ಶಿಶುವೊಂದಕ್ಕೆ ಉಣ್ಣೆಯ ಬ್ಯಾಗ್ ಮತ್ತು ಹೊದಿಕೆ ಇರಿಸಿ ಬಿಟ್ಟು ಹೋಗಿದ್ದಾರೆ. ದುಬಾರಿ ಬೆಲೆಯ ಬಟ್ಟೆಯನ್ನು ಇಡಲಾಗಿತ್ತು, ಜನಿಸಿ ಸುಮಾರು 20 ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಮಗುವನ್ನು ಗಮನಿಸಿದ ಭಕ್ತರು ದೇವಸ್ಥಾನದ ಮ್ಯಾನೇಜರ್ ಗಮನಕ್ಕೆ ಈ ವಿಷಯ ತಂದಿದ್ದರು.

Mother left baby girl in temple with five pair of new dresses

ಅಂದು 50 ವರ್ಷ ದಾಟಿದ ಮಹಿಳೆಯೊಬ್ಬರು 28-30 ವರ್ಷ ವಯಸ್ಸಿನ ಮತ್ತೊಬ್ಬ ಮಹಿಳೆಯ ಜತೆಗೆ ಬಂದಿದ್ದರು, ಸುಮಾರು ಒಂದು ಗಂಟೆಗಳ ಕಾಲ ಇದ್ದುದನ್ನು ಭಕ್ತರು ಗಮನಿಸಿದ್ದರು, ಅವರೇ ದೇವಸ್ಥಾನದ ಮೂಲೆ ಮೂಲೆಯಗಳನ್ನು ಪರಿಶೀಲಿಸುತ್ತಿದ್ದರು, ಹಾಗಾದರೆ ತಾಯಿಯೇ ಬಂದು ಮಗುವನ್ನು ಬಿಟ್ಟು ಹೋಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ತಾಯಿಗೆ ಎರಡನೇ ಅಥವಾ ಮೂರನೇ ಹೆಣ್ಣು ಮಗು ಜನಿಸರಬೇಕು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮಗುವನ್ನು ಸರ್ಕಾಋಇ ಆರೈಕೆ ಕೇಂದ್ರಕ್ಕೆ ಒಪ್ಪಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ. ದೇವಸ್ಥಾನ ಮತ್ತು ಅಕ್ಕಪಕ್ಕದ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+