ಅಪಾರ್ಟ್‌ಮೆಂಟ್ ಮೇಲಿಂದ ಮಗು ತಳ್ಳಿ ತಾನೂ ಜಿಗಿದ ತಾಯಿ

ಬೆಂಗಳೂರು, ಆಗಸ್ಟ್‌ 6: ಶೀಲ ಶಂಕಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಕಾರಣ 19ನೇ ಮಹಡಿಯಿಂದ ಹಾರಿ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಹೃದಯ ವಿದ್ರಾವಕ ಘಟನೆಯಲ್ಲಿ ಮೊದಲು ಮಗುವನ್ನು ತಾಯಿ ಅಪಾರ್ಟ್‌ಮೆಂಟ್‌ ಮೇಲಿಂದ ಎಸೆದು ತಾನೂ ಕೂಡ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ದಂಪತಿ ನಡುವೆ ತೀವ್ರ ಜಗಳವಾಗಿದೆ. ಈ ವೇಳೆ ನಿನ್ನಿಂದ ದೂರವಾಗುತ್ತಿದ್ದೇನೆ ಎಂದು ಪಂಕಜ್ ಹೇಳಿ ಮನೆಯಿಂದ ಹೊರಗೆ ಹೋಗಿದ್ದ, ಸೋಮವಾರ ಆತನ ಮೊಬೈಲ್ ಆಫ್ ಆಗಿತ್ತು. ಪದೇ ಪದೇ ಕರೆ ಮಾಡಿ ಸಂಪರ್ಕಿುವ ಪ್ರಯತ್ನ ಮಾಡಿರುವ ಜ್ಯೋತಿ ಕೊನೆಗೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದರು.

Mother Commits Suicide With Daughter Jumping From 19th Floor

ಸಾವಿಗೂ ಮುನ್ನ ಮಗಳ ಜೊತೆ ವಿಡಿಯೋಮಾಡಿರುವ ಜ್ಯೋತಿ ನನ್ನ ನಡತೆ ಬಗ್ಗೆ ಪತಿ ಪಂಕಜ್ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು.

ಜ್ಯೋತಿ ಎಂಬಾಕೆ ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜ್ಯೋತಿ ತನ್ನ ಏಳು ವರ್ಷದ ಶಾಬುನಾ ಎಂಬ ಹೆಣ್ಣು ಮಗುವನ್ನು ಕೊಂದು ಕಟ್ಟಡದ ಮೇಲಿನಿಂದ ಹಾಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಕಜ್ ಎಂಬವರ ಜೊತೆ ಹನ್ನೆರಡು ವರ್ಷಗಳ ಜ್ಯೋತಿಗೆ ಮದುವೆಯಾಗಿತ್ತು. ಪತಿ ಪಂಕಜ್ ಅವರು ಆಶೋಕ ಪಿಲ್ಲರ್ ಬಳಿ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿದ್ದರು. ನಿನ್ನೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ. ಜಗಳದ ಬಳಿಕ ಬೇಸರಗೊಂಡ ಪತಿ ಮನೆಯಿಂದ ಹೊರಗೆ ಹೋಗಿದ್ದಾರೆ. ಆ ವೇಳೆ ಜ್ಯೋತಿ ತನ್ನ ಮಗಳನ್ನು ಕೊಂದು ಕಟ್ಟಡದಿಂಡ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳೆ.

ಘಟನೆ ಕುರಿತಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+