• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಪ್ರದೇಶಗಳಿವು

|

ಬೆಂಗಳೂರು, ಜೂನ್ 24: ಕೊರೊನಾವೈರಸ್ ದಾಳಿ ಶುರುವಾಗಿ ಬರೋಬ್ಬರಿ ಒಂದೂವರೆ ತಿಂಗಳು ಕಳೆದ ಬಳಿಕವೂ ಬೆರಳೆಣಿಕೆಯಷ್ಟಿದ್ದ ಸೋಂಕಿತರ ಸಂಖ್ಯೆ ಕಳೆದ 15-20 ದಿನಗಳಲ್ಲಿ ನಾಲ್ಕೈದು ಪಟ್ಟು ಹೆಚ್ಚಾಗಿದೆ.

   ಚೀನಾ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸಪೋರ್ಟ್ ಮಾಡಲ್ಲ ಎಂದ ರಷ್ಯಾ ಸಚಿವ | Russia | China | Oneindia Kannada

   ಬೆಂಗಳೂರಿನ ಪಾದರಾಯನಪುರದಲ್ಲಿ 70, ವಿವಿಪುರಂನಲ್ಲಿ 45, ಎಸ್‌ಕೆ ಗಾರ್ಡನ್‌ನಲ್ಲಿ 23, ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ 22, ಮಂಗಮ್ಮನಪಾಳ್ಯದಲ್ಲಿ 16, ಕೆಆರ್‌ ಮಾರುಕಟ್ಟೆಯಲ್ಲಿ 14 ಪ್ರಕರಣಗಳಿವೆ.

   ಭಾರತದಲ್ಲಿ ಒಂದೇ ದಿನ 15,968 ಮಂದಿಗೆ ಕೊರೊನಾವೈರಸ್ ಪಾಸಿಟಿವ್!

   ಬೆಂಗಳೂರಿನಲ್ಲಿ ಒಟ್ಟು 80,022 ಮಂದಿಯ ಪರೀಕ್ಷೆ ನಡೆಸಲಾಗಿದೆ. ಒಟ್ಟು 502 ಕಂಟೈನ್ಮೆಂಟ್ ಜೋನ್‌ಗಳಿವೆ. 458 ಕಂಟೈನ್ಮೆಂಟ್‌ ಜೋನ್‌ಗಳಲ್ಲಿ ಪ್ರಕರಣ ಸಕ್ರಿಯವಾಗಿವೆ.ಪಾಸಿಟಿವಿಟಿ ಪ್ರಮಾಣ ಶೇ.1.88ರಷ್ಟಿದೆ, ಶೇ.68 ಪ್ರಕರಣಗಳು ಸಕ್ರಿಯವಾಗಿವೆ. ಶೇ.32ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ.

   ಕಳೆದ 24 ಗಂಟೆಗಳಲ್ಲಿ 107 ಪ್ರಕರಣಗಳು ಪತ್ತೆಯಾಗಿವೆ, ಅದರಲ್ಲಿ 64 ಪುರುಷರು, 43 ಮಹಿಳೆಯರಿದ್ದಾರೆ. 40 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿ 2245 ಪ್ರಕರಣಗಳಿವೆ. 1343 ಮಂದಿ ಕ್ವಾರಂಟೈನ್ ಪೂರೈಸಿದ್ದಾರೆ. 902 ಮಂದಿ ಇನ್ನೂ ಕ್ವಾರಂಟೈನ್‌ನಲ್ಲಿದ್ದಾರೆ.

   ದ್ವಿತೀಯ ಸಂಪರ್ಕದಲ್ಲಿ 6350 ಮಂದಿ ಇದ್ದಾರೆ, ಅದರಲ್ಲಿ 5077 ಮಂದಿ ಕ್ವಾರಂಟೈನ್ ಪೂರೈಸಿದ್ದಾರೆ, 1273 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಜೂನ್ 23 ರಂದು ಕರ್ನಾಟಕದಲ್ಲಿ ಹೊಸದಾಗಿ 322 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು, 8 ಮಂದಿ ಸಾವನ್ನಪ್ಪಿದ್ದಾರೆ.

   ಬೆಂಗಳೂರಿನಲ್ಲಿ 102 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಒಟ್ಟು 1505 ಕೊರೊನಾ ಸೋಂಕಿತರಿದ್ದಾರೆ. 435 ಮಂದಿ ಗುಣಮುಖರಾಗಿದ್ದಾರೆ. 996 ಪ್ರಕರಣಗಳು ಸಕ್ರಿಯವಾಗಿವೆ. 73 ಮಂದಿ ಮೃತಪಟ್ಟಿದ್ದಾರೆ. ಜೂನ್ 23 ರಂದು 24 ಮಂದಿ ಬಿಡುಗಡೆಯಾಗಿದ್ದಾರೆ.

   English summary
   In Bengaluru most active Coronavirus cases are in Padarayanapura (70), VV Puram (45), SK Garden (23), Dharmarayaswamy Temple (22), Mangammanapalya (16), and KR Market (14) among others.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X