ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ತಿಂಗಳೊಳಗೆ 12 ಕ್ಕೂ ಹೆಚ್ಚು ಸಿಎನ್ ಜಿ ಸ್ಟೇಷನ್ ಗಳ ನಿರ್ಮಾಣ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 04: ನಗರದಲ್ಲಿ ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಸಿಎನ್ ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ವಾಹನಗಳು ಸಂಚರಿಸುತ್ತಿದ್ದು, ಇದೀಗ ಗ್ಯಾಸ್ ಇಂಡಿಯಾ ಲಿಮಿಟೆಡ್ (ಗೇಲ್) ಸಂಸ್ಥೆಯ ವತಿಯಿಂದ ನಗರದ 22 ಕಡೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ ತುಂಬುವ ಸ್ಟೇಷನ್ ಗಳನ್ನು ಆರಂಭಿಸಲಾಗುತ್ತಿದೆ.

12 ಸ್ಟೇಷನ್ ಗಳು ಈಗಾಗಲೇ ಕಾರ್ಯರಂಭ ಮಾಡಿದರೆ 8 ಸ್ಟೇಷನ್ ಗಳು ಕಾರ್ಯರಂಭ ಮಾಡುವ ಹಂತದಲ್ಲಿವೆ. ಉಳಿದೆರೆಡು ಸ್ಟೇಷನ್ ಗಳ ನಿರ್ಮಾಣ ಕಾರ್ಯ ನಡೆದಿದೆ.

ಡೀಸೆಲ್‌ ಬಸ್ಸುಗಳಿಗೆ ಗುಡ್ ಬೈ; ನಗರಕ್ಕೆ CNG ಬಸ್ಡೀಸೆಲ್‌ ಬಸ್ಸುಗಳಿಗೆ ಗುಡ್ ಬೈ; ನಗರಕ್ಕೆ CNG ಬಸ್

ಈ ವರ್ಷದಲ್ಲಿ 25 ಸ್ಟೇಷನ್ ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಇಂದೋರ್, ಆಗ್ರಾ ನಗರಗಗಳಲ್ಲೂ ಸಿಎನ್ ಜಿ ಪೂರೈಕೆ ಸ್ಟೇಷನ್ ಗಳ ನಿರ್ಮಾಣಕ್ಕೆ ಗೇಲ್ ಸಂಸ್ಥೆ ಚಿಂತಿಸಿದೆ.

More than 12 CNG stations will set up by month end

 ದೊಡ್ಡಬಳ್ಳಾಪುರ : ಕಸದಿಂದ ಕೈತುಂಬಾ ಸಂಪಾದನೆ! ದೊಡ್ಡಬಳ್ಳಾಪುರ : ಕಸದಿಂದ ಕೈತುಂಬಾ ಸಂಪಾದನೆ!

ಜಿಗಣಿ, ಲಗ್ಗೆರೆ, ಹಾರ್ಡ್ ವೇರ್ ಪಾರ್ಕ್, ಪೀಣ್ಯ, ಸುಂಕದಕಟ್ಟೆ, ಬೊಮ್ಮಸಂದ್ರ, ಅಗರ, ಟಾಟಾ ನಗರಗಳಲ್ಲಿ ಈಗಾಗಲೇ ಸ್ಟೇಷನ್ ಗಳು ಕಾರ್ಯರಂಭ ಮಾಡಿವೆ. ಕೆಆರ್ ಪುರ, ಗೊವಿಗೆರೆ, ಸರ್ಜಾಪುರ ರಸ್ತೆ, ಕಟ್ಟಿಗಾನಹಳ್ಳಿ, ಆನೇಕಲ್, ದೊಡ್ಡಬಳ್ಳಾಪುರ ರಸ್ತೆ, ವಿರೂಪಾಕ್ಷಪುರ, ಬನಶಂಕರಿ, ಮಾಗಡಿ ರಸ್ತೆ, ಗೊಲ್ಲಹಳ್ಳಿ ಹಾಗೂ ದೂರವಾಣಿನಗರ ಬಳಿ ಸ್ಟೇಷನ್ ಗಳು ನಿರ್ಮಾಣ ಹಂತದಲ್ಲಿವೆ ಎಂದು ಗೇಲ್ ಅಧಿಕಾರಿಗಳು ತಿಳಿಸಿದ್ದಾರೆ.

English summary
GAIL gas said More than 12 CNG stations will set up by month end in Benagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X