ಬೆಂಗಳೂರು; ಮತ್ತಷ್ಟು ಅಂತಾರಾಷ್ಟ್ರೀಯ ವಿಮಾನ ಶೀಘ್ರ ಆರಂಭ

ಬೆಂಗಳೂರು ಜೂ.21: ಜಗತ್ತಿನಾದ್ಯಂತ ಕೋವಿಡ್ ಪಿಡುಗು ಆವರಿಸಿದ್ದರಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಇದೇ ವರ್ಷಾಂತ್ಯಕ್ಕೆ ಪುನಾರಂಭಗೊಳ್ಳಲಿವೆ ಎಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇತರ ದೇಶಗಳಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭಿಸಲಾಗಿದೆ. ಈ ಪೈಕಿ ಒಂದಷ್ಟು ಪ್ರಮುಖ ವಿಮಾನಯಾನ ಸೇವೆಗಳ ಮಾಹಿತಿಯನ್ನು ಕೆಐಎ ಅಧಿಕಾರಿಗಳು ಸೋಮವಾರ ನೀಡಿದ್ದಾರೆ.

ಯುನೈಟೆಡ್ ಏರ್ ಲೈನ್ಸ್ ಸಂಸ್ಥೆಯು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರತಿದಿನದ ಸೇವೆಯನ್ನು ವರ್ಷದ ಕೊನೆಯ ತ್ರೈಮಾಸಿಕಕ್ಕೆ ಆರಂಭಿಸಲು ಚಿಂತನೆ ನಡೆಸಿದೆ.

More International flight servicce from Bengaluru Airport by end of 2022

ಆಸ್ಟ್ರೇಲಿಯಾ ನ್ಯಾಷನಲ್ ಕ್ಯಾರಿಯರ್ ಕ್ವಾಂಟಾಸ್ ಸಂಸ್ಥೆ ಮುಂದಿನ ಸೆಪ್ಟಂಬರ್ 14ರಿಂದ ಬೆಂಗಳೂರಿನಿಂದ ಸಿಡ್ನಿಗೆ ವಾರಕ್ಕೆ ನಾಲ್ಕು ದಿನಗಳ ಕಾಲ ಸೇವೆ ನೀಡಲಿದೆ.

ಇನ್ನು ಏರ್ ಇಂಡಿಯಾದಿಂದ ಟೆಲ್‌ ಅವಿಲ್‌ ವಾರಕ್ಕೆ ಎರಡು ಬಾರಿ ಹಾಗೂ ಅಮೆರಿಕನ್ ಏರ್ ಲೈನ್ಸ್‌ನಿಂದ ಸಿಯಾಟಲ್ ದೇಶಕ್ಕೆ ದೈನಂದಿನ ವಿಮಾನ ಸೇವೆ ಆದಷ್ಟು ಶೀಘ್ರವೇ ಆರಂಭವಾಗುವ ಸಾಧ್ಯತೆ ಇದೆ. ಈ ಕುರಿತು ವೇಳಾಪಟ್ಟಿ ಸಿದ್ಧಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಆಗಷ್ಟೇ ಆರಂಭಿಸಲಾಗಿದ್ದ ಹೊಸ ವಿಮಾನಯಾನ ಸೇವೆಗಳನ್ನು ಈಗಾಗಲೇ ಆರಂಭಿಸಲಾಗಿದೆ.

More International flight servicce from Bengaluru Airport by end of 2022

ಟೋಕಿಯೊಗೆ ಸೇವೆ ಆರಂಭ; ಜಪಾನ್ ಏರ್‌ಲೈನ್ಸ್ ಸಂಸ್ಥೆಯ ವಿಮಾನಗಳು ಬೆಂಗಳೂರಿನಿಂದ ಟೋಕಿಯೋಗೆ ವಾರಕ್ಕೆ ಮೂರು ಭಾರಿ ಸಂಚರಿಸಲಿವೆ. ಈ ಸೇವೆ ಮುಂದಿನ ಆಗಸ್ಟ್‌ನಿಂದ ಜಾರಿಗೊಳ್ಳಲಿದೆ. ಬೆಂಗಳೂರಿನಿಂದ ಆಮ್‌ಸ್ಟರ್ ಡ್ಯಾಮ್‌ಗೆ ಹಾಲಿ ವಾರಕ್ಕೆ ಮೂರು ಬಾರಿ ಇರುವ ಸೇವೆಯನ್ನು ನಾಲ್ಕಕ್ಕೆ ಹೆಚ್ಚಿಸಲಾಗುತ್ತದೆ.

ಸ್ಥಗಿತೊಂಡಿದ್ದ ವಿಮಾನ ಸೇವೆಗಳಲ್ಲಿ ಒಂದಷ್ಟು ಸೇವೆಗಳು ಈಗಾಗಲೇ ಆರಂಭವಾಗಿವೆ. ಮಾರ್ಚ್‌ನಿಂದ ಮೇ ತನಕ ಕೆಐಎ ನಿಂದ ಸಂಚರಿಸಿದವರ ಅಂಕಿ ಸಂಖ್ಯೆ ಗಮನಿಸಿದರೆ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪಡೆಯುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+