ಬೆಸ್ಕಾಂ ಸಹಾಯವಾಣಿಯ ಮತ್ತಷ್ಟು ಸಂಖ್ಯೆಗಳು ಪ್ರಕಟ
ಈಗಿರುವ ಬೆಸ್ಕಾಂ ಸಹಾಯವಾಣಿ ಸಂಖ್ಯೆಯಾದ 1921ಗೆ ಹೆಚ್ಚುವರಿಯಾಗಿ ಮತ್ತಷ್ಟು ಸಂಖ್ಯೆಗಳನ್ನು ನೀಡಿದ ಬೆಸ್ಕಾಂ. ಬೆಂಗಳೂರು, ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ವಲಯಗಳಿಗೆ ಪ್ರತ್ಯೇಕ ನಂಬರ್.
ಬೆಂಗಳೂರು, ಜೂನ್ 26: ಸಾಮಾನ್ಯವಾಗಿ ಯಾವುದೇ ವಿದ್ಯುತ್ ವ್ಯತ್ಯಯಗಳಿಗೆ ಹಾಗೂ ಇಲಾಖಾ ಮಟ್ಟದಲ್ಲೇ ಆಗಬೇಕಿರುವ ರಿಪೇರಿ ಮುಂತಾದ ವಿಚಾರಗಳಿಗೆ ಜನಸಾಮಾನ್ಯರು ಬೆಸ್ಕಾಂ ಸಹಾಯವಾಣಿ ಸಂಖ್ಯೆಯಾದ 1912ಗೆ ಕರೆ ಮಾಡುವುದು ರೂಢಿಯಲ್ಲಿದೆ.
Dear Consumer's
— Namma BESCOM (@NammaBESCOM) June 26, 2017
If helpline no 1912 is busy,please contact following no's, pic.twitter.com/oqgqbZu5zW
ಆದರೆ, ಕೆಲವೊಮ್ಮೆ ಈ ಸಂಖ್ಯೆಗೆ ಎಷ್ಟೇ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗುವುದಿಲ್ಲ. ಗ್ರಾಹಕರ ಕರೆಗಳು ಈ ಸಂಖ್ಯೆಗೆ ಹೆಚ್ಚಾದಂತೆಲ್ಲಾ ಸಂಪರ್ಕ ಅಲಭ್ಯವಾಗುತ್ತದೆ. ಇದರಿಂದ ನಾಗರಿಕರ ಅಸಮಾಧಾನವೂ ಹೆಚ್ಚಾಗುತ್ತದೆ.

ಈ ಹಿನ್ನೆಲೆಯಲ್ಲಿ, ಬೆಸ್ಕಾಂ ಸಂಸ್ಥೆಯು ತನ್ನ ತನ್ನ ಸಹಾಯವಾಣಿಯ ಮತ್ತಷ್ಟು ಸಂಖ್ಯೆಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿದೆ. ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ವಲಯಗಳಿಗೆ ತಲಾ ಮೂರು ಪ್ರತ್ಯೇಕ ಸಂಖ್ಯೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಕೋರಿದೆ.












Click it and Unblock the Notifications