Monsoon: ಬೆಂಗಳೂರಿನಲ್ಲಿ 'ಮುಂಗಾರು ಪೂರ್ವ' ಬಿಬಿಎಂಪಿ ಕಾರ್ಯಕ್ರಮಗಳ ಪಟ್ಟಿ

ಬೆಂಗಳೂರು, ಏಪ್ರಿಲ್ 19: ಬೆಂಗಳೂರಿನಲ್ಲಿ ಪ್ರತಿ ಭಾರಿ ಮಳೆಗಾಲದಲ್ಲೂ ಅನೇಕ ಕಡೆಗಳಲ್ಲಿ ನಷ್ಟ, ಜೀವ ಹಾನಿ, ಸಂಚಾರ ಸಮಸ್ಯೆಯಂತಹ ತೊಂದರೆಗಳು ಆಗುತ್ತಲೇ ಇರುತ್ತವೆ. ಈ ಭಾರಿ ಹೀಗಾಗದಂತೆ ಎಚ್ಚರಿಕೆ ವಹಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲವು ಕಾರ್ಯಕ್ರಮ ಆಯೋಜಿಸುತ್ತಿದೆ.

ಮುಂಗಾರು ಪ್ರಾರಂಭವಾಗುವ ಅವಧಿಯು ಸಮೀಪಿಸುತ್ತಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಗಾರಿನಿಂದ ಆಗುವ ಮಳೆ ಹಾನಿ ತಡೆಗಟ್ಟಲು 15 ದಿನಗಳ ಕಾಲ 'ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ' ಹಮ್ಮಿಕೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.

Monsoon Rain BBMP Held Pre Monsoon Program 15 Days in Zonal Wise at Bengaluru

ಮುಂಗಾರು ಪೂರ್ವ ಆರಂಭದ ಹಿನ್ನೆಲೆ ಈಗಾಗಲೇ ರಾಜಕಾಲುವೆಗಳಲ್ಲಿ ಹೂಳೆತ್ತುವುದು, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ರಸ್ತೆ ಬದಿಯ ತೊಳು ಚರಂಡಿ(Shoulder Drain)ಗಳನ್ನು ಸ್ವಚ್ಛಗೊಳಿಲಾಗುತ್ತಿದೆ. ವಾರ್ಡ್ ಮಟ್ಟದಲ್ಲಿ ಈಗಾಗಲೇ ಗುರುತಿಸಲಾಗಿರುವ ಸಂಪರ್ಕ ಚರಂಡಿಗಳ (Lead off Drains to SWD) ಗಳಿಂದ ಹೂಳೆತ್ತುವುದು ಹಾಗೂ ಇತರೆ ಮುಂಜಾಗೃತ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.

'ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ'

ಹೆಚ್ಚಿನ ಸ್ವಚ್ಛತಾ ಕಾರ್ಯ ನಡೆಸುವ ಕಾರಣ ಆಯಾ ವಲಯ ವ್ಯಾಪ್ತಿಯ ಮುಖ್ಯ ಅಭಿಯಂತರರ ನೇತೃತ್ವದ ತಂಡವು ತಮ್ಮ ಅಧೀನದ ತಾಂತ್ರಿಕ ಸಿಬ್ಬಂದಿಯೊಂದಿಗೆ ದಿನಾಂಕ 19.04.2024 ರಿಂದ 03.05.2024 ರವರೆಗೆ ಪ್ರತಿನಿತ್ಯ ಮುಂಗಾರು ಪೂರ್ವ 'ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ '(Fortnightly Program)ಅನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಅದರಂತೆ ಇಂದಿನಿಂದ ಎಲ್ಲಾ ಕಡೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

Monsoon Rain BBMP Held Pre Monsoon Program 15 Days in Zonal Wise at Bengaluru

ವಯಲವಾರು ತೆಗೆದುಕೊಳ್ಳಬೇಕಾದ ಕ್ರಮಗಳು

* ಆಯಾ ವಾರ್ಡ್ ಮಟ್ಟದಲ್ಲಿ ಈಗಾಗಲೇ ಗುರುತಿಸಲಾಗಿರುವ ರಾಜಕಾಲುವೆಯ ಸಂಪರ್ಕ ಚರಂಡಿಗಳಿಂದ ಮತ್ತು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಿಂದ ಹೂಳೆತ್ತುವುದು.

* ದಿನನಿತ್ಯ ರಸ್ತೆ ಬದಿಯಲ್ಲಿ ಶೇಖರಣೆಯಾಗುತ್ತಿರುವ ಘನತ್ಯಾಜ್ಯ ಸ್ಥಳಗಳನ್ನು ಸ್ವಚ್ಛಗೊಳಿಸುವುದು.

* ವಾರ್ಡ್ ಮಟ್ಟದ ರಸ್ತೆ ಬದಿಯ ತೋಳು ಚರಂಡಿಗಳನ್ನು ಸ್ವಚ್ಛಗೊಳಿಸುವುದು.

* ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ತೊಳುಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆ ಮೇಲೆ ಶೇಖರಣೆಯಾಗಿರುವ ಅನುಪಯುಕ್ತ ಕಟ್ಟಡ ತ್ಯಾಜ್ಯ (Debris) ಗಳನ್ನು ತೆರೆವುಗೊಳಿಸುವುದು.

* ಯಾಂತ್ರಿಕ ಕಸ ಗುಡುಸುವಿಕೆ ಯಂತ್ರವನ್ನು ಪರಿಣಾಮಕಾರಿಯಾಗಿ ಮತ್ತು ತೀವ್ರತರದಲ್ಲಿ ಬಳಸುವುದು.

* ಮೇಲ್ಸೇತುವೆ ಮತ್ತು ಕೆಳಸೇತುವೆ Lead off Drains ಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲುವೆಕೆ ಆಗದೆಂಬ ಪ್ರಮಾಣ ಪತ್ರವನ್ನು ಸಲ್ಲಿಸುವುದು.

* ರಸ್ತೆ ಗುಂಡಿಗಳನ್ನು ದುರಸ್ಥಿ ಪಡಿಸುವಂತೆ ಸೂಚನೆ ನೀಡಲಾಗಿದೆ.

ಪ್ರತಿನಿತ್ಯ ಸ್ವಚ್ಛತಾ ಕಾರ್ಯ ನಡೆಯುವ ಛಾಯಾಚಿತ್ರಗಳನ್ನು ಅಧಿಕಾರಿಗಳು [email protected] ಗೆ ಕಳುಹಿಸಲು ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+