ಸಿದ್ದು ಸಿಡಿಯುತ್ತಾ, ಮೋದಿ ಟುಸ್ ಅನ್ನತ್ತಾ?

ಬೆಂಗಳೂರು, ಅ, 30 : ದೀಪಾವಳಿ ಹತ್ತಿರವಾಗಿದೆ ವಿವಿಧ ಬಗೆಯ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಟಾಕಿಗಳ ಮೇಲೂ ತಮ್ಮ ಪ್ರಭಾವ ಬೀರಿದ್ದಾರೆ. ಮೋದಿ ಹೆಸರಿನ ಫ್ಲವರ್ ಪಾಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸದ್ಯ ದೇಶದ ತುಂಬಾ ನರೇಂದ್ರ ಮೋದಿ ಅವರದ್ದೇ ಮಾತು. ಆದ್ದರಿಂದಲೇ ಸಿನಿಮಾ ತಾರೆಯರು, ಕ್ರಿಕೆಟಿಗರನ್ನು ಮೀರಿಸಿ ಮೋದಿ ಹೆಸರಿನ ಪಟಾಕಿಗಳು ಮಾರುಕಟ್ಟೆ ಬಂದಿವೆ. ಫ್ಲವರ್ ಪಾಟ್ ಗೆ ಮೋದಿ ಹೆಸರಿಡಲಾಗಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಮೋದಿ ಪಟಾಕಿ ಲಭ್ಯವಿದೆ.

modi and siddu

ನರೇಂದ್ರ ಮೋದಿ ಫ್ಲವರ್ ಪಾಟ್ ಬೆಲೆ 1000 ರೂ. ಇದರ ಜೊತೆಗೆ ಮೋದಿ ಹೆಸರಿನ ರಾಕೆಟ್, ಚಿಕ್ಕ ಪಟಾಕಿಗಳು ಸೇರಿದಂತೆ 12 ವಿವಿಧ ಪಟಾಕಿಗಳು ಮಾರುಕಟ್ಟೆಗೆ ಬಂದು ಮೋಡಿ ಮಾಡುತ್ತಿವೆ. ಸದ್ಯ ಬೆಂಗಳೂರಿನ ಪಟಾಕಿ ಮಾರುಕಟ್ಟೆಯಲ್ಲಿ ನರೇಂದ್ರ ಮೋದಿ ಅವರ ಹೆಸರಿನ ಬ್ರಾಂಡ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದು ವ್ಯಾಪಾರಸ್ಥರ ಮಾತು.

ನರೇಂದ್ರ ಮೋದಿ ಸದ್ಯ ಕೇವಲ ರಾಜಕಾರಣಿಯಾಗಿ ಉಳಿದಿಲ್ಲ. ದೀಪಾವಳಿಯಲ್ಲಿ ಜನರ ಮನರಂಜಿಸುವ ಪಟಾಕಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕ ಸಿಎಂ ಸಿದ್ಧರಾಮಯ್ಯ ಅವರ ಹೆಸರಿನ ಸಿದ್ದು ಬಾಂಬ್ ಸಹ ಮಾರುಕಟ್ಟೆಗೆ ಬಂದಿದೆ. ಆದರೆ, ನರೇಂದ್ರ ಮೋದಿ ಅವರ ಪಟಾಕಿಗಳು ವ್ಯಾಪಾರವಾದಂತೆ ಆಗುತ್ತಿಲ್ಲ.

ಕಳೆದ ವರ್ಷ ಲಾಲೂ ಪ್ರಸಾದ್ ಯಾದವ್ ಹೆಸರಿನ ಪಟಾಕಿಗಳನ್ನು ಮಾರಾಟಕ್ಕೆ ತಂದಿದ್ದೇವು ಎಂದು ಪಾಟ್ನಾ ಮೂಲದ ಪಟಾಕಿ ವ್ಯಾಪಾರಿಗಳು ಹೇಳಿದ್ದಾರೆ. ಆದರೆ, ಈ ಬಾರಿ ಮೇವು ಹಗರಣದಲ್ಲಿ ಲಾಲೂ ಜೈಲು ಸೇರಿರುವುದರಿಂದ ಅವರ ಬ್ರಾಂಡ್ ಗೆ ಹೆಚ್ಚಿನ ಬೇಡಿಕೆ ಇಲ್ಲ ಎಂಬುದು ಅವರ ಅಭಿಪ್ರಾಯ. ದೇಶದಲ್ಲಿ ಮೋದಿ ಮೋಡಿ ನಡೆಯುತ್ತಿರುವುದರಿಂದ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಮಾರುಕಟ್ಟೆಯಲ್ಲಿ ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಹೆಸರಿನ ವಿವಿಧ ಪಟಾಕಿಗಳು ಲಭ್ಯವಿವೆ. ನಿಮಗೆ ಯಾರು ಇಷ್ಟವೋ ಅವರ ಹೆಸರಿನ ಪಟಾಕಿ ಖರೀದಿಸಿ ಹಬ್ಬ ಆಚರಣೆ ಮಾಡಿ. ಪಟಾಕಿ ಹೊಡೆಯುವ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಎಚ್ಚರ ವಹಿಸಲು ಮರೆಯದಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+