ನರೇಂದ್ರ ಮೋದಿ ಸುಳ್ಳನ್ನೇ ಸತ್ಯವೆಂದು ಸಾಧಿಸುವ ಪ್ರಧಾನಿ: ದಿನೇಶ್ ಗುಂಡೂರಾವ್
ಬೆಂಗಳೂರು, ಡಿಸೆಂಬರ್ 12: ನರೇಂದ್ರ ಮೋದಿ ಸುಳ್ಳನ್ನೇ ಸತ್ಯವೆಂದು ತೋರಿಸುವ ಪ್ರಧಾನಿ ಎಂದು ಕೆಪಿಸಿಸಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನರೇಂದ್ರ ಮೋದಿಯವರ ಅಬ್ಬರದ ಭಾಷಣ, ಸುಳ್ಳು ಆಶ್ವಾಸನೆ, ಶ್ರೀಮಂತರ ಪರ ಕೆಲಸದ ಕಾರಣಕ್ಕೆ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ಜನ ವಿರೋಧಿ ನೀತಿಗಳಿಂದಾಗಿ ವಿಶ್ವಾಸ ಕಳೆದುಕೊಂಡ ಬಿಜೆಪಿಗೆ ಚುನಾವಣಾ ಫಲಿತಾಂಶದಿಂದ ದೊಡ್ಡ ಪಾಠ ಕಲಿತಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ, ಮಿಜೋರಾಂ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ, ನಾವು ಯಾವತ್ತೂ ಸುಳ್ಳನ್ನೇ ಸತ್ಯವೆಂದು ತೋರಿಸಿಲ್ಲ ಜನರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ನಡೆಸಿಕೊಂಡು ಹೋಗಿಲ್ಲ, ಮೋದಿ ಸುಳ್ಳನ್ನೇ ಸತ್ಯವೆಂದು ಸಾಧಿಸುವ ಪ್ರಧಾನಿ ಹಾಗಾಗಿಯೇ ಜನರು ಬಿಜೆಪಿಯನ್ನು ದೂರವೇ ಇಟ್ಟಿದ್ದಾರೆ. ಈ ಚುನಾವಣೆ ಬಳಿಕ ಜನರು ಬಿಜೆಪಿಯನ್ನು ಎಷ್ಟು ನಂಬುತ್ತಾರೆ ಎನ್ನುವುದು ಜಗಜ್ಜಾಹಿರವಾಗಿದೆ ಎಂದು ಹೇಳಿದ್ದಾರೆ.
"ನರೇಂದ್ರ ಮೋದಿ ಸುಳ್ಳನ್ನೇ ಸತ್ಯವೆಂದು ಸಾಧಿಸುವ ಪ್ರಧಾನಿ" ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್.
— Karnataka Congress (@INCKarnataka) December 12, 2018
ಅಬ್ಬರದ ಭಾಷಣ, ಸುಳ್ಳು ಅಶ್ವಾಸನೆ, ಶ್ರೀಮಂತರ ಪರ ಕೆಲಸದ ಕಾರಣಕ್ಕೆ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ.
ಜನ ವಿರೋಧಿ ನೀತಿಗಳಿಂದಾಗಿ ವಿಶ್ವಾಸ ಕಳೆದುಕೊಂಡ ಬಿಜೆಪಿಗೆ ಚುನಾವಣಾ ಫಲಿತಾಂಶದಿಂದ ದೊಡ್ಡ ಪಾಠ.#Results2018
ಐದರಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಗೆ ಇತ್ತು ಆದರೆ ಐದು ಸ್ಥಾನವೂ ಕಾಂಗ್ರೆಸ್. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ಬುನಾದಿಯಾಗಿದೆ. ಬಿಜೆಪಿ ಸೋಲು ಅನುಭವಿಸಿದ್ದು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮಹದಾಸೆ ಭಗ್ನವಾದಂತಾಗಿದೆ.












Click it and Unblock the Notifications