ಜ.21ಕ್ಕೆ ಶಾಸಕ ಜಮೀರ್ ಪುತ್ರಿಯ ವಿವಾಹ, ವಿಶೇಷ ಆಮಂತ್ರಣ
ಬೆಂಗಳೂರು, ಜನವರಿ 05: ಶಾಸಕ ಜಮೀರ್ ಅಹಮದ್ ಖಾನ್ ತಮ್ಮ ಮಗಳ ಮದುವೆಗೆ ದೀಪ, ಡ್ರೈಫ್ರೂಟ್ಸ್ ನೀಡಿ ಆಹ್ವಾನಿಸಿದ್ದಾರೆ.
ಜನವರಿ 21 ರಂದು ಜಮೀರ್ ಪುತ್ರಿಯ ವಿವಾಹ ನಗರದ ಅರಮನೆ ಮೈದಾನದಲ್ಲಿ ನೆರವೇರಲಿದೆ. ಶಾಸಕರು, ರಾಜಕೀಯ ನಾಯಕರಿಗೆ ಶುಭ ಕಾರ್ಯದ ನಿಮಿತ್ತ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ.

ಆಮಂತ್ರಣ ಪತ್ರಿಕೆ ಜತೆ ದೀಪ ಹಾಗೂ ಡ್ರೈಫ್ಟ್ರೂಟ್ಸ್ಗಳನ್ನು ಗಿಫ್ಟ್ ನೀಡಿದ್ದಾರೆ, ಪುತ್ರಿಯ ವಿವಾಹವನ್ನು ಜಮೀರ್ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಜನವರಿ 21 ರಂದು ಮದುವೆ ಜರುಗಲಿದೆ.
ವಸತಿ ಸಚಿವ ವಿ ಸೋಮಣ್ಣ, ಸಚಿವ ಕೆ ಗೋಪಾಲಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ, ಮುಸ್ಲಿಂ ಮುಖಂಡರು ಸೇರಿದಂತೆ ಅರಬ್ ಶೈಲಿಯಲ್ಲಿ ವಿನ್ಯಾಸ ಮಾಡಿರುವ ಮದುವೆ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ.
Recommended Video
ಗೋಲ್ಡ್ ಖರೀದಿ ಮಾಡೋರಿಗೆ ಶಾಕಿಂಗ್ ನ್ಯೂಸ್..! | Oneindia Kannada
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಮಂದಿಗೆ ಆಮಂತ್ರಣ ನೀಡಿದ್ದಾರೆ.












Click it and Unblock the Notifications