Get Updates
Get notified of breaking news, exclusive insights, and must-see stories!

ದಿನಗೂಲಿ ನೌಕರರ ಬೇಡಿಕೆ ಈಡೇರಿಸುವಂತೆ ಸಿಎಂಗೆ ಶಾಸಕ ಸೋಮಶೇಖರ್ ರೆಡ್ಡಿ ಮನವಿ

ಬೆಂಗಳೂರು, ಸೆಪ್ಟೆಂಬರ್ 22: ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ರಾಜ್ಯ ದಿನಗೂಲಿ ನೌಕರರ ಸಂಘದ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಯಿತು.

ಸಿಎಂ ಬೊಮ್ಮಾಯಿಯವರು ದಿನಗೂಲಿ ನೌಕರರ ಸಂಘದ ಬೇಡಿಕೆ ಮನವಿ ಸ್ವೀಕರಿಸಿ, ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ದಿನಾಂಕ 09-03-2021 ರಿಂದ ನೌಕರರ ಸಂಘದ ಬೇಡಿಕೆಯ ಕಡತ ಬಾಕಿ ಇದೆ ಎಂಬುದನ್ನು ಮನವರಿಕೆ ಮಾಡಲಾಯಿತು.

ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಲ್ಲಿ ಅಧಿಸೂಚಿಸಲ್ಪಟ್ಟ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ವಿನಂತಿಸಲಾಯಿತು.

MLA Somashekhar Reddy Appeals To CM Bommai To Fulifill Demands Of Daily Wages Employees

ಈ ಸದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಕ್ಷೇಮಾಭಿವೃದ್ದಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ. ಕೆ. ಕೋಳಿ ನೇತೃತ್ವದಲ್ಲಿ ನೌಕರರ ಸಂಘದ ಇತರೆ ಪದಾಧಿಕಾರಿಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ಮನವಿ ಮಾಡಿದರು.

ಪತ್ರದಲ್ಲೇನಿದೆ?
2012ರಲ್ಲಿ ಘನ ರಾಜ್ಯ ಸರ್ಕಾರವು ದಿನಗೂಲಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 'ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012' ಜಾರಿಗೆ ತಂದಿದ್ದು, ಅದರಂತೆ ಆಯಾ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಟ ವೇತನ ಹಾಗೂ ಶೇ.90ರಷ್ಟು ಹೆಚ್‌ಆರ್‌ಎ ಮತ್ತು ಶೇ.90ರಷ್ಟು ಡಿ.ಎಯನ್ನು ಮಾತ್ರ ನೀಡಲಾಗುತ್ತಿದೆ.

ಆದರೆ ಅಧಿಸೂಚನೆ ಸಂಖ್ಯೆ ಸಿ ಆ ಸು ಇ 44 ಸೇ ಸ್ಥ 2013 ದಿನಾಂಕ: 22-2-2014ರನ್ವಯ ಮುಂಬಡ್ತಿ ಹೊರತುಪಡಿಸಿ ಇನ್ನುಳಿದ ಪೂರ್ಣಪ್ರಮಾಣದ ಸವಲತ್ತುಗಳನ್ನು ಇದುವರೆಗೂ ಕಲ್ಪಿಸಿರುವುದಿಲ್ಲ.

MLA Somashekhar Reddy Appeals To CM Bommai To Fulifill Demands Of Daily Wages Employees

ಅಂದು 13 ಸಾವಿರ ಇದ್ದ ನೌಕರರ ಸಂಖ್ಯೆ ನಿವೃತ್ತಿ ಹಾಗೂ ಮರಣದಿಂದಾಗಿ ಈಗ ಸುಮಾರು 6 ರಿಂದ 7 ಸಾವಿರ ಮಾತ್ರ ಉಳಿದಿರುತ್ತಾರೆ. ಅವರುಗಳು ಸಹ 3- 4 ವರ್ಷಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿ ವೇತನ ಇಲ್ಲದೇ ಇರುವುದರಿಂದ ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಕೆಲವೊಂದು ನೌಕರರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರಲ್ಲಿ ಆಧಿಸೂಚಿಸಲ್ಪಟ್ಟ ನೌಕರರಿಗೆ ಈ ಕೆಳಕಂಡ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಂತೆ ಹಾಗೂ ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದ ಈ ಬಡ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮಲ್ಲಿ ಕಳಕಳಿಯಿಂದ ಸಂಘದ ಪರವಾಗಿ ತಮ್ಮಲ್ಲಿ ವಿನಂತಿಸಲಾಗಿದೆ.

1. ಅಧಿನಿಯಮ ಜಾರಿಗೊಂಡ ದಿನಾಂಕದಿಂದ ಅನ್ವಯವಾಗುವಂತೆ ವಾರ್ಷಿಕ ವೇತನ ಬಡ್ತಿ ನೀಡುವುದು, ಹಾಗೂ ಹೆಚ್‌ಆರ್‌ಎ ಹಾಗೂ ತುಟ್ಟಿ ಭತ್ಯೆಯನ್ನು ಶೇ.100 ರಷ್ಟು ನೀಡುವುದು ಹಾಗೂ ಹಬ್ಬದ ಮುಂಗಡ ಸೌಲಭ್ಯವನ್ನು ನೀಡುವುದು.

MLA Somashekhar Reddy Appeals To CM Bommai To Fulifill Demands Of Daily Wages Employees

2. ವೈದ್ಯಕೀಯ ಸೌಲಭ್ಯ, ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡುವುದು.

3. ನಿವೃತ್ತಿ ಮರಣ ಹೊಂದಿದ ನೌಕರರ ಕುಟುಂಬಗಳಿಗೆ ನಿವೃತ್ತಿ ವೇತನ ಮಂಜೂರು ಮಾಡುವುದು.

4. ಮರಣ ಹೊಂದಿದ ದಿನಗೂಲಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಹುದ್ದೆ ನೀಡುವುದು, ಒಟ್ಟಾರೆ ಸರ್ಕಾರಿ ನೌಕರರಿಗೆ ಒದಗಿಸಲಾದ ಎಲ್ಲ, ಸೌಲಭ್ಯಗಳನ್ನು ವಿಸ್ತರಿಸುವುದು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪರಿಗೂ ಮನವಿ ಮಾಡಲಾಗಿತ್ತು. ಅವರೂ ಸಹ ದಿನಗೂಲಿ ನೌಕರರ ಬೇಡಿಕೆ ಈಡೇರಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಾರಣಾಂತರಗಳಿಂದ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಸಂಘದ ಬೇಡಿಕೆಗಳು ಕುರಿತು ಸುದೀರ್ಘ ಚರ್ಚೆಸಲಾಗಿದ್ದು, ನೂತನ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರು ನೌಕರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರವಾಗಿ ಬೇಡಿಕೆ ಇಡೇರಿಸುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭೇಟಿ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ದಿನಗೂಲಿ ಕ್ಷೇಮಾಭಿವೃದ್ದಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ. ಕೆ. ಕೋಳಿ, ಕಾರ್ಯಾಧ್ಯಕ್ಷ ಶೇಖ್ ಅಲಿ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ, ಉಪಾಧ್ಯಕ್ಷ ಎಂ ಮಹದೇವ ಸೇರಿದಂತೆ ಇತರೆ ಸದಸ್ಯರು, ನಿರ್ದೇಶಕರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+