ಮಿಸ್ಟರ್ ಇಂಡಿಯಾ 2018: ಬೆಂಗಳೂರಲ್ಲೇ ನಡೆಯಿತು ಆಡಿಷನ್

ಬೆಂಗಳೂರು, ಅಕ್ಟೋಬರ್ 8: ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ದಕ್ಷಿಣ ಭಾರತದಿಂದ ಐವರು ಯುವ ಮಾಡೆಲ್ ಗಳು ಆಯ್ಕೆಯಾಗಿದ್ದಾರೆ.ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಆಡಿಷನ್ ನಡೆದಿದೆ.

ಬೆಂಗಳೂರಿನ ಝೋನ್ ದಿ ಪಾರ್ಕ್ ಹೋಟೆಲ್ ನಲ್ಲಿ ನಡೆದ ಮ್ಯಾನ್ ಹಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು, ಕೊಚ್ಚಿ, ಚೆನೈನಿಂದ ಆಗಮಿಸಿದ್ದ ಪುರುಷ ಮಾಡೆಲ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಅಭಿನಿತ್ ಸಿನ್ಹ, ಪ್ರಸಾದ್ ಕಾರ್ಯಪ್ಪ, ಆರ್. ಅರ್ಜುನ್, ನಿತೇಶ್ ಗರ್ಗ್, ಪುನೀತ್ ಅಗರ್ ವಾಲ್ ರಾಷ್ಟ್ರೀಯ ಮಟ್ಟದ ಮ್ಯಾನ್ ಹಂಟ್‌ಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಪ್ರಥಮಬಾರಿಗೆ ನಡೆದ ಪುರುಷ ಫ್ಯಾಶನ್ ಶೋ ದಲ್ಲಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ವಾಕ್ ಮಾಡುವುದಷ್ಟೇಯಲ್ಲದೇ ತೀರ್ಪುಗಾರರು ಕೇಳಿದ ಕ್ಲಿಷ್ಟ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿ ತೀರ್ಪುಗಾರರ ಮನ ಗೆದ್ದರು.

Mister india Audition First time done in Bengaluru

ದಕ್ಷಿಣದಿಂದ ಆಯ್ಕೆಯಾದ ಐವರು ಯುವ ಮಾಡೆಲ್ ಗಳು ದೆಹಲಿಯಲ್ಲಿ ಅಕ್ಟೋಬರ್ 25-27 ರಂದು ನಡೆಯುವ ರಾಷ್ಟ್ರೀಯ ಮಟ್ಟದ ಮ್ಯಾನ್ ಹಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮ್ಯಾನ್ ಹಂಟ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಾಡೆಲ್‌ಗಳು ನವೆಂಬರ್ 26 ರಿಂದ ಡಿಸೆಂಬರ್ 2 ರ ವರೆಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೂವತ್ತು ವರ್ಷಗಳ ಇತಿಹಾಸ: ಮೂವತ್ತು ವರ್ಷಗಳ ಹಿಂದೆ ಪುರುಷ ಮಾಡಲ್ ಗಳಿಗಾಗಿ ಆರಂಭವಾಗಿದ್ದ ಮ್ಯಾನ್ ಹಂಟ್‌ಗೆ ಇದೇ ಮೊದಲಬಾರಿ ಬೆಂಗಳೂರು ಸಾಕ್ಷಿಯಾಗಿದೆ. ಕಳೆದ ಮೂರು ದಶಕಗಳಿಂದ ಈ ವೇದಿಕೆಯು ಪುರುಷ ಮಾಡಲ್‌ಗಳಿಗೆ ಅದ್ಭುತ ಅವಕಾಶಗಳನ್ನು ಕಲ್ಪಿಸಿಕೊಟ್ಟೆದೆ. ಬಾಲಿವುಡ್ ಜಗತ್ತಿನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಜಾನ್ ಇಬ್ರಾಹಿಂ, ಡಿನೋ ಮೊರಿಯಾ, ರಾಜಿವ್ ಸಿಂಗ್ ಇದೇ ವೇದಿಕೆಯಿಂದ ಹೊರಹೊಮ್ಮಿದ ಪ್ರತಿಭೆಗಳು.

ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಹೆಮ್ಮೆಯೆನಿಸಿದೆ ಎಂದು ದಕ್ಷಿಣ ಭಾರತ ಮ್ಯಾನ್ ಹಂಟ್ ಫ್ಯಾಶನ್ ಶೋ ಮುಖ್ಯಸ್ಥೆ ಪ್ರತಿಭಾ ಸಂಶಿಮಠ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+