ಇಂದಿರಾ ಗಾಂಧಿ ವಿರುದ್ಧ ಅಪಪ್ರಚಾರ, 'ಪೋಸ್ಟ್‌ಕಾರ್ಡ್‌' ವಿರುದ್ಧ ಕಾಂಗ್ರೆಸ್ ದೂರು

ಬೆಂಗಳೂರು, ಸೆಪ್ಟೆಂಬರ್ 22: ವಿವಾದಾತ್ಮಕ ಜಾಲತಾಣ 'ಪೋಸ್ಟ್ ಕಾರ್ಡ್ ಕನ್ನಡ ಡಾಟ್ ಕಾಂ' ವಿರುದ್ಧ ಕಾಂಗ್ರೆಸ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾರಿಗೆ ದೂರು ನೀಡಿದೆ.

'ಪೋಸ್ಟ್ ಕಾರ್ಡ್ ಕನ್ನಡ ಡಾಟ್ ಕಾಂ'ನಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು ವೆಬ್‌ಸೈಟ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

 Misrepresentation against Indira Gandhi, Complaint filed by Karnataka Congress

ಕೆ.ಪಿ.ಸಿ.ಸಿ. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗವು ಸಲ್ಲಿಸಿದ ದೂರಿನಲ್ಲಿ, 'ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಇಂದಿರಾ ಗಾಂಧಿಯವರ ವಿರುದ್ಧ ಅಪಪ್ರಚಾರ ನಡೆಸಲು postcardkannada.com ವೆಬ್ಸೈಟ್ ಸೃಷ್ಟಿಸಲಾಗಿದೆ.ಇಂದಿರಾ ಗಾಂಧಿ ಅವರ ಚಾರಿತ್ರ್ಯ ಮತ್ತು ಗೌರವಕ್ಕೆ ಧಕ್ಕೆ ತರುವಂತ ಕೀಳು ಮಟ್ಟದ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಮುಖಾಂತರ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ," ಎಂದು ದೂರಲಾಗಿದೆ.

"ದೇಶದ ಎಲ್ಲ ಮಹಿಳೆಯರನ್ನು ಅವಮಾನಿಸುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ ಮಾಡುವ ಮೂಲಕ ವಿಕೃತ ಕಾರ್ಯ ಎಸಗುತ್ತಿದ್ದಾರೆ. ಹೀಗಾಗಿ ಈ ಕೂಡಲೇ ವೆಬ್‌ಸೈಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಇಂಥಹವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+