'ಅಲ್ಲಾಡ್ಸು' ಹಾಡಿಗೆ ನರ್ತಿಸಿದ ಶಿಕ್ಷಕಿಯರಿಗೆ ಶಿಕ್ಷಣ ಸಚಿವರ ಎಚ್ಚರಿಕೆ

Recommended Video

      ಟೀಚರ್ಸ್ ವಿರುದ್ಧ ಕ್ರಮ ಕೈಗೊಳ್ತಾರಾ ಸಚಿವ ಸುರೇಶ್ ಕುಮಾರ್ | TEACHER DANCE | ONEINDIA KANNADA

      ಬೆಂಗಳೂರು, ಜನವರಿ 15: 'ಅಲ್ಲಾಡ್ಸು', 'ಅಲ್ಲಾಡ್ಸು' ಹಾಡಿಗೆ ವೇದಿಕೆ ಮೇಲೆ ನೃತ್ಯ ಮಾಡಿದ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

      ನಗರದ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕಿಯರು ಬಾಟಲ್‌ಗಳನ್ನು ಹಿಡಿದುಕೊಂಡು 'ಅಲ್ಲಾಡ್ಸ್, ಅಲ್ಲಾಡ್ಸ್‌' ಹಾಡಿಗೆ ನೃತ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

      ಈ ಬಗ್ಗೆ ಫೇಸ್‌ಬುಕ್ ನಲ್ಲಿ ವಿಡಿಯೋ ಹಾಕಿರುವ ಸಚಿವ ಸುರೇಶ್ ಕುಮಾರ್, 'ಶಾಲೆಯ ಮುಖ್ಯೋಪಾಧ್ಯಾಯರಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಅಸಭ್ಯವಾಗಿ ನರ್ತಿಸಿರುವ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

      Minister Suresh Kumar Gave Notice To Teachers Who Danced

      ಶಿಕ್ಷಕಿಯರು ನೃತ್ಯ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, 'ಸಮಾಜದಲ್ಲಿ ಮೇಲ್ಪಂಕ್ತಿ ಹಾಕಿಕೊಡಬೇಕಾದವರೇ ಹೀಗೆ ಅಸಭ್ಯವಾಗಿ ನೃತ್ಯ ಮಾಡಿದರೆ ಮಕ್ಕಳು ಆ ಶಿಕ್ಷಕಿಯರ ಬಗ್ಗೆ ಏನೆಂದುಕೊಳ್ಳಬೇಕು?' ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

      'ಪಕ್ಕೆಲುಬು' ವಿಡಿಯೋ ಖ್ಯಾತಿಯ ಶಿಕ್ಷಕನ ಬಗ್ಗೆಯೂ ವಿಡಿಯೋದಲ್ಲಿ ಮಾತನಾಡಿದ್ದು, ಆತ ತಮ್ಮನ್ನು ಭೇಟಿಯಾದ, ಘಟನೆ ಬಗ್ಗೆ ಸ್ವಲ್ಪವೂ ಪಶ್ಚಾತಾಪ ಆತನಿಗೆ ಇಲ್ಲದ ಬಗ್ಗೆಯೂ ಸುರೇಶ್ ಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ.

      ಇಂತಹಾ ಮುಜುಗರ ಘಟನೆಗಳು ಇನ್ನು ಮುಂದೆ ನಡೆಯದಿರಲಿ, 'ಶಿಕ್ಷಕ' ಸ್ಥಾನಕ್ಕೆ ಇರುವ ಘನತೆಯನ್ನು ಹೆಚ್ಚಿಸುವ ಕಾರ್ಯವನ್ನು ರಾಜ್ಯದ ಶಿಕ್ಷಕರು ಮಾಡಬೇಕೆಂದು ಸುರೇಶ್ ಕುಮಾರ್ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

      ಆದರೆ ಮಾಹಿತಿ ಪ್ರಕಾರ ಶಾಲೆಗೆ ದಾನ ಮಾಡಿದ ಸ್ಪೂರ್ತಿ ಮಹಿಳಾ ಸಂಘದ ಸದಸ್ಯೆಯರು ಕಾರ್ಯಕ್ರಮ ಮುಗಿದ ನಂತರ ಹೀಗೆ ನೃತ್ಯ ಮಾಡಿದ್ದಾರೆ. ಇದರಲ್ಲಿ ಶಾಲೆಯ ಶಿಕ್ಷಕಿಯರು ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+