ಜಾತಿ ಬಿಟ್ಟು ಪ್ರಚಾರ ಮಾಡಿ: ಶಿವರಾಮೇಗೌಡರಿಗೆ ಸಚಿವ ಎಂಟಿಬಿ ತರಾಟೆ
Recommended Video

ಬೆಂಗಳೂರು, ಏಪ್ರಿಲ್ 3: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ. ಅವರು ತೆಲುಗಿನ ನಾಯ್ಡು ಕುಟುಂಬದವರು. ಮಂಡ್ಯದ ಗೌಡರನ್ನು ಮದುವೆಯಾಗಿ ಬಂದ ಮಾತ್ರಕ್ಕೆ ಗೌಡ್ತಿ ಆಗುವುದಿಲ್ಲ ಎಂದು ಜಾತಿ ವಿಚಾರ ಕೆದಕಿದ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಮೈತ್ರಿ ಸರ್ಕಾರದ ಸಚಿವ ಎಂಟಿಬಿ ನಾಗರಾಜ್ ಹರಿಹಾಯ್ದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮದುವೆಯಾದ ಬಳಿಕ ಗಂನ ಜಾತಿಯೇ ಹೆಂಡತಿಗೆ ಬರುತ್ತದೆ. ಸುಮಲತಾ ಮತ್ತು ಅಂಬರೀಷ್ ಮದುವೆಯಾಗಿ 28 ವರ್ಷ ಸಂಸಾರ ನಡೆಸಿದ್ದಾರೆ. ಸಹಜವಾಗಿಯೇ ಅವರು ಗೌಡ್ತಿಯೇ ಆಗುತ್ತಾರೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ಶಿವರಾಮೇಗೌಡ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮತಯಾಚನೆಗೆ ಹೋಗುವಾಗ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಬೇಕು. ಅದರ ಹೊರತು ಜಾತಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಬಾರದು ಎಂದು ಅವರು ಕಿಡಿಕಾರಿದ್ದಾರೆ.
ನಾಯ್ಡು ಜಾತಿ ಬಿಟ್ಟು ಗೌಡರನ್ನು ಮದುವೆಯಾದ ಸುಮಲತಾ ಮಂಡ್ಯ ಗೌಡ್ತಿ ಹೇಗೆ ಆಗುತ್ತಾರೆ? ಅವರ ಪರ ಪ್ರಚಾರ ಬಂದಿರುವ ದರ್ಶನ್, ರಾಕ್‌ಲೈನ್ ವೆಂಕಟೇಶ್ ಕೂಡ ನಾಯ್ಡು ಸಮುದಾಯಕ್ಕೆ ಸೇರಿದವರು. ಅವರೆಲ್ಲರೂ ನಾಯ್ಡುಗಳೇ ಆದರೆ, ಗೌಡರ ಕಥೆ ಏನಾಗಬೇಕು? ಮಂಡ್ಯವನ್ನು ಅವರು ನಾಯ್ಡುಮಯ ಮಾಡಲು ಹೊರಟಿದ್ದಾರೆ. ಸುಮಲತಾಳ ಗಂಡನನ್ನು ನಂಬಿಕೊಂಡು ನಾನು ನನ್ನ 20 ವರ್ಷ ಹಾಳುಮಾಡಿಕೊಂಡೆ ಎಂದು ಏಕವಚನದಲ್ಲಿ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದರು.












Click it and Unblock the Notifications