ಜೂನ್‌ 8ರಿಂದ ಲಾಲ್‌ ಬಾಗ್‌ನಲ್ಲಿ ಸಿರಿಧಾನ್ಯ ಮೇಳ

ಬೆಂಗಳೂರು, ಜೂನ್ 2: ಗ್ರಾಮೀಣ ಕುಟುಂಬ ಸಂಸ್ಥೆಯು ಜೂ.8ರಿಂದ ಮೂರು ದಿನಗಳ ಕಾಲ ಸಿರಿಧಾನ್ಯ ಮೇಳವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸಿದೆ.

ಲಾಲ್‌ಬಾಗ್‌ನ ಡಾ. ಎಂ.ಎಚ್‌ ಮರಿಗೌಡ ಸಭಾಂಗಣದಲ್ಲಿ ಮೇಳ ಆಯೋಜಿಸಿದ್ದು, ಮೇಳದಲ್ಲಿ ಸುಮಾರು 100 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಗಟು ಖರೀದಿದಾರರಿಗೆ ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನೂ ಕೂಡ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಟುಂಬದ ಸಂಸ್ಥಾಪಕ ಅಧ್ಯಕ್ಷ ಎಂ.ಎಚ್ ಶ್ರೀಧರಮೂರ್ತಿ ತಿಳಿಸಿದ್ದಾರೆ.

ನಾನಾ ಸಿರಿಧಾನ್ಯಗಳು ಹಾಗೂ ಮಹಿಳಾ ಸಂಘಗಳು ತಯಾರಿಸಿದ ಪದಾರ್ಥಗಳು, ಬಗೆ ಬಗೆಯ ಸಿರಿಧಾನ್ಯ ತಿಂಡಿಗಳು ಮೇಳದಲ್ಲಿ ದೊರೆಯಲಿದೆ. ಜೂ.8ರಂದು ಬೆಳಗ್ಗೆ 11 ಗಂಟೆಗೆ ಉತ್ತರ ಕರ್ನಾಟಕ, ಕರಾವಳಿ ಮತ್ತಿತರೆ ಭಾಗಗಳ 10 ಮಂದಿ ಸಿರಿಧಾನ್ಯ ಬೆಳೆಯುವ ರೈತರನ್ನು ಸನ್ಮಾನಿಸಲಾಗುತ್ತದೆ.

Millet mela in Lal bagh from june 8

ಜೂ.9ರಂದು ಬೆಳಗ್ಗೆ 11ಕ್ಕೆ ರೈತರಿಗೆ ಸರಿಧಾನ್ಯ ಬೆಳೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಮೇಳದಲ್ಲಿ ಕೈಮಗ್ಗ, ಖಾದಿ ವಸ್ತ್ರಗಳು ಹಾಗೂ ಕರಕುಶಲ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ಇದೇ ವೇಳೆ ಮೂರು ದಿನಗಳ ಮೇಳದಲ್ಲಿ ಮಣ್ಣಿನ ಅಡುಗೆ ಪಾತ್ರೆಗಳು, ತಾಮ್ರದ ಕುಡಿಯುವ ನೀರಿನ ಬಾಟಲಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+