ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಹಮ್ಮದ್ ನಲಪಾಡ್‌ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರ

|
Google Oneindia Kannada News

Recommended Video

ಮೊಹಮ್ಮದ್ ನಲಪಾಡ್‌ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರ | Oneindia kannada

ಬೆಂಗಳೂರು, ಮಾರ್ಚ್ 04 : ಮೊಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್ ಲೋಕನಾಥ್ ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಘಟನೆ ನಡೆದು 15 ದಿನಗಳ ಬಳಿಕ ಅವರು ಚೇತರಿಸಿಕೊಂಡಿದ್ದು, ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡರು.

ಶನಿವಾರ ಸಂಜೆ ಮೊಹಮ್ಮದ್ ನಲಪಾಡ್‌ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿ ಅಶ್ವಥ್ ಗೌಡ ಅವರ ನೇತೃತ್ವದ ತಂಡ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿತ್ತು. ಸುಮಾರು ಎರಡು ಗಂಟೆಗಳ ಕಾಲ ವಿದ್ವತ್‌ ಹೇಳಿಕೆಯನ್ನು ತಂಡ ದಾಖಲು ಮಾಡಿಕೊಂಡಿತು.

ಮೊಹಮ್ಮದ್ ನಲಪಾಡ್‌ ಜಾಮೀನು ಅರ್ಜಿ ವಜಾಮೊಹಮ್ಮದ್ ನಲಪಾಡ್‌ ಜಾಮೀನು ಅರ್ಜಿ ವಜಾ

ಫೆ.17ರಂದು ಬೆಂಗಳೂರಿನ ಯು.ಬಿ.ಸಿಟಿಯಲ್ಲಿನ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್‌ ಮತ್ತು ಆತನ ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?

ಮೊಹಮ್ಮದ್ ನಲಪಾಡ್‌ ಮತ್ತು ಉಳಿದ 6 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 63ನೇ ಸೆಷನ್ಸ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮಾರ್ಚ್ 7ರಂದು ಅಂತ್ಯಗೊಳ್ಳಲಿದೆ. ವಿದ್ವತ್ ನೀಡಿದ ಹೇಳಿಕೆಯ ವಿವರಗಳು ಇಲ್ಲಿವೆ...

ಫೆ.17ರಂದು ಏನಾಯಿತು

ಫೆ.17ರಂದು ಏನಾಯಿತು

ಫೆ.17ರ ಶನಿವಾರ ರಾತ್ರಿ 8 ಗಂಟೆಗೆ ಸ್ನೇಹಿತರ ಜೊತೆ ಫರ್ಜಿ ಕೆಫೆಗೆ ಬಂದೆ. 10 ಗಂಟೆ ಸುಮಾರಿಗೆ ಊಟ ಮುಗಿಸಿ ಹೊರಡಲು ಸಿದ್ಧರಾದೆವು. ಅದೇ ಸಮಯಕ್ಕೆ ಮೊಹಮ್ಮದ್ ನಲಪಾಡ್‌ ಮತ್ತು ಆತನ ಸ್ನೇಹಿತರು ಕೆಫೆಗೆ ಬಂದರು. ಆಗ ನನ್ನ ಕಾಲು ಮೊಹಮ್ಮದ್ ನಲಪಾಡ್‌ ಸ್ನೇಹಿತನಿಗೆ ತಾಕುತು.

ಕಾಲು ಚಾಚಿಕೊಂಡು ಕುಳಿತಿದ್ದೀಯಾ?

ಕಾಲು ಚಾಚಿಕೊಂಡು ಕುಳಿತಿದ್ದೀಯಾ?

ಮೊಹಮ್ಮದ್ ನಲಪಾಡ್‌ ಸ್ನೇಹಿತನಿಗೆ ಕಾಲು ತಾಕಿದ ಕೂಡಲೇ ನಾನು ಕ್ಷಮೆ ಕೇಳಿದೆ. ಆಗ ಸ್ನೇಹಿತನೊಬ್ಬ 'ಏನೋ ಅಣ್ಣನ ಎದುರೇ ಕಾಲು ಚಾಚಿಕೊಂಡು ಕುಳಿತಿದ್ದೀಯಾ?' ಎನ್ನುತ್ತಾ ಗಲಾಟೆ ಆರಂಭಿಸಿದ. ಕಾಲಿನ ಮೂಳೆ ಮುರಿದಿದೆ ಎಂದು ಹೇಳಿದೆ. 'ಅಣ್ಣನ ಎದುರೇ ಮಾತನಾಡುತ್ತೀಯಾ ಎಂದು ಕೆನ್ನೆಗೆ ಹೊಡೆದ'. ನಂತರ ನನ್ನ ಸ್ನೇಹಿತರು ರಕ್ಷಣೆಗೆ ಬಂದರು ಆಗ ಎಲ್ಲರೂ ಸೇರಿ ಹಲ್ಲೆ ಮಾಡಿದರು.

ಬಾಟಲಿಯಿಂದ ಹಲ್ಲೆ ಮಾಡಿದರು

ಬಾಟಲಿಯಿಂದ ಹಲ್ಲೆ ಮಾಡಿದರು

'ಬಾಟಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದರು. ಆಗ ಮೂಗಿನಿಂದ ರಕ್ತ ಸುರಿಯಲು ಆರಂಭಿಸಿತು. ಅಷ್ಟಕ್ಕೂ ಸುಮ್ಮನಾಗದೇ ನನ್ನ ಬಟ್ಟೆ ಹರಿದರು. ಕಾಲಿನಿಂದ ಒದೆಯಲು ಆರಂಭಿಸಿದರು. ಸ್ನೇಹಿತರು ನನ್ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾದರು'.

ಪಾರ್ಕಿಂಗ್‌ ಲಾಟ್‌ನಲ್ಲೂ ಹಲ್ಲೆ

ಪಾರ್ಕಿಂಗ್‌ ಲಾಟ್‌ನಲ್ಲೂ ಹಲ್ಲೆ

'ಸ್ನೇಹಿತರು ಆಸ್ಪತ್ರೆಗೆ ಸೇರಿಸಲು ನನ್ನನ್ನು ಕಾರಿನ ಬಳಿ ಕರೆದುಕೊಂಡು ಬಂದರು ಅಲ್ಲಿಗೂ ಹಿಂಬಾಲಿಸಿಕೊಂಡು ಬಂದ ಮೊಹಮ್ಮದ್ ನಲಪಾಡ್‌ ಮತ್ತು ಆತನ ಸ್ನೇಹಿತರು ನನ್ನ ಮೇಲೆ ಹಲ್ಲೆ ಮಾಡಿದರು'

ನಲಪಾಡ್‌ನನ್ನು ಪಾರ್ಟಿಯಲ್ಲಿ ನೋಡಿದ್ದೆ

ನಲಪಾಡ್‌ನನ್ನು ಪಾರ್ಟಿಯಲ್ಲಿ ನೋಡಿದ್ದೆ

'ನಲಪಾಡ್‌ನನ್ನು ಹಿಂದೆ ಪಾರ್ಟಿಗಳಲ್ಲಿ ನೋಡಿದ್ದೆ. ಆದರೆ, ಒಮ್ಮೆಯೂ ಅವರ ಜೊತೆ ಮಾತನಾಡಿರಲಿಲ್ಲ. ಆ ದಿನದ ಕೌರ್ಯ ನೆನಪು ಮಾಡಿಕೊಂಡರೆ ಇಂದಿಗೂ ಭಯವಾಗುತ್ತದೆ'.

ಗುರು ಬಂದಿದ್ದರಿಂದ ಹೊರ ಹೋದರು

ಗುರು ಬಂದಿದ್ದರಿಂದ ಹೊರ ಹೋದರು

'10.20ರ ಸುಮಾರಿಗೆ ಮಲ್ಯ ಆಸ್ಪತ್ರೆಗೆ ನನ್ನನ್ನು ಕರೆದುಕೊಂಡು ಬಂದರು. ನಲಪಾಡ್ ಮತ್ತು ಸ್ನೇಹಿತರು ಅಲ್ಲಿಗೂ ಬಂದು ಬೆದರಿಕೆ ಹಾಕಿದರು. ರಾಜ್ ಕುಮಾರ್ ಅವರ ಮೊಮ್ಮಗ ಗುರು ಆಸ್ಪತ್ರೆಗೆ ಬಂದರು. ಆಗ ನಲಪಾಡ್ ಮತ್ತು ಆತನ ಸ್ನೇಹಿತರು ಅಲ್ಲಿಂದ ತೆರಳಿದರು'.

ನಲಪಾಡ್‌ ಜಾಮೀನು ಅರ್ಜಿ ವಜಾಗೊಳ್ಳಲು 4 ಕಾರಣಗಳುನಲಪಾಡ್‌ ಜಾಮೀನು ಅರ್ಜಿ ವಜಾಗೊಳ್ಳಲು 4 ಕಾರಣಗಳು

English summary
Two weeks after the incident, Central Crime Branch (CCB) police recorded the statement of the Vidvat, who was allegedly brutally attacked by Shantinagar MLA N.A.Haris son Mohammed Nalapad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X