IT Corridor: ಬೆಂಗಳೂರಲ್ಲಿ ಮತ್ತೊಂದು ಮಹತ್ವ ಯೋಜನೆ: ತಗ್ಗಲಿದೆ ಸಂಚಾರ ದಟ್ಟಣೆ
ಬೆಂಗಳೂರು, ಸೆಪ್ಟಂಬರ್ 30: ಸಂಚಾರ ದಟ್ಟಣೆಗೆ ಹೆಸರಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿವೆ. ಇದೀಗ ನಗರದ ಪ್ರಮುಖ ಭಾಗದಲ್ಲಿ ಐಟಿ ಕಾರಿಡಾರ್‌ಗೆ ಕೇಂದ್ರ ರಕ್ಷಣಾ ಸಚಿವಾಲಯ ಭೂಮಿ ಬಿಟ್ಟು ಕೊಟ್ಟಿದೆ. ಇದರಿಂದ ಈ ಮಾರ್ಗದ ಸಂಚಾರವು ಕೇವಲ 5ರಿಂದ 8 ನಿಮಿಷಗಳಿಗೆ ತಗ್ಗಲಿದೆ ಎಂದು ವರದಿ ಆಗಿದೆ.
ಹೌದು, ಬಹು ನಿರೀಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಬೆಳ್ಳಂದೂರು ರಸ್ತೆಯ ಅಗಲೀಕರಣಕ್ಕೆ ಕೇಂದ್ರ ರಕ್ಷಣಾ ಸಚಿವಾಲಯವು ಒಟ್ಟು ಸುಮಾರು 12 ಎಕರೆ ಭೂಮಿ ನೀಡುವುದಾಗಿ ಒಪ್ಪಿಗೆ ನೀಡಿದೆ. ಈ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆಯಿಂದ ಕಂಗಾಲಾಗಿದ್ದ ಸವಾರರಿಗೆ ಖಷಿ ಸುದ್ದಿ ಸಿಕ್ಕಂತಾಗಿದೆ.

ಬೆಂಗಳೂರಿನ ಪೂರ್ವ ಭಾಗದಲ್ಲಿ ಟೆಕ್ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದು ಎಂಜಿ ರಸ್ತೆಯಿಂದ ಬೆಳ್ಳಂದೂರು ಮಧ್ಯದಲ್ಲಿ ನಿರ್ಮಾಣವಾಗಲಿದೆ. ಇಲ್ಲಿ ರಸ್ತೆ ಅಗಲೀಕರಣಕ್ಕೆ ಬೇಕಾಗಿದ್ದ ಜಾಗವನ್ನು ರಕ್ಷಣಾ ಇಲಾಖೆ ನೀಡಲು ಮುಂದಾಗಿದೆ. ಎಲ್ಲವು ಅಂದುಕೊಂಡಂತೆ ಆದರೆ ಭವಿಷ್ಯದಲ್ಲಿ ಎಂಜಿ ರಸ್ತೆಯಿಂದ ಬೆಳ್ಳಂದೂರಿಗೆ ನೀವು ಹಾಲಿ ಒಂದು ಗಂಟೆಯ ಬದಲಾಗಿ ಕೇವಲ 5ರಿಂದ 8 ನಿಮಿಷದಲ್ಲಿ ಸಂಚರಿಸಬಹುದಾಗಿದೆ.
ರಕ್ಷಣಾ ಸಚಿವಾಲಯವು ತಾತ್ವಿಕ ಒಪ್ಪಿಗೆ ನೀಡಿದ್ದು, ನಗರದಾದ್ಯಂತ ರಸ್ತೆ ವಿಸ್ತರಣೆಗಾಗಿ ಇನ್ನೂ 10 ಎಕರೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಹಸ್ತಾಂತರಲು ಸಿದ್ಧವಿದೆ ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಜೊತೆ ಮಹತ್ವದ ಸಭೆ ನಡೆಯಿತು. ಅಲ್ಲಿ ರಕ್ಷಣಾ ಸಚಿವಾಲಯ ಭೂಮಿ ನೀಡುವ ಬಗ್ಗೆ ತಿಳಿಸಿದೆ.
ಆಗರದಿಂದ ಸರ್ಜಾರಪುರ ವರೆಗೆ ರಸ್ತೆ ಯೋಜನೆ
ಇನ್ನೂ ಬಿಬಿಎಂಪಿಯು ಮಾಡಿ ಸಂಚಾರ ದಟ್ಟಣೆ ತಗ್ಗಿಲು, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಂಡಲು ಆಗರ ಕರೆಯಿಂದ ಸರ್ಜಾಪುರ ರಸ್ತೆವರೆಗೆ ರಸ್ತೆ ವಿಸ್ತರಣೆ ಕೆಲಸ ಆರಂಭಿಸಲು ಮುಂದಾಗಿದೆ. ಹೀಗೆ ವಿವಿಧ ಕಡೆಗಳಲ್ಲಿನ ಪ್ರಮುಖ ರಸ್ತೆಗಳ ಅಗಲೀಕರಕ್ಕೆ ಅಗತ್ಯ 10.7 ಎಕರೆ ಭೂಮಿ ಹಸ್ತಾಂತರಿಸಲು ರಕ್ಷಣಾ ಸಚಿವಾಲ ಒಪ್ಪಿಗೆ ನೀಡಿದೆ.
ಸದ್ಯ ಆರಂಭಿಕ ಹಂತದಲ್ಲಿ 35 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 3.5 ಕಿ.ಮೀ ರಸ್ತೆ ಅಗಲೀಕರಣ ಮಾಡಲು ಬಿಬಿಎಂಪಿ ಈಗಾಗಲೇ ಟೆಂಡರ್ ಆಹ್ವಾನಿಸಿದೆ. ಸದ್ಯ ಬಿಬಿಎಂಪಿಗೆ ಟ್ರಿನಿಟಿ, ಈಜಿಪುರ ಕಡೆಗಳಲ್ಲಿ ಭೂಮಿ ಅಗತ್ಯವಾಗಿದ್ದು, ಅದರ ಸಿಕ್ಕ ಬಳಿಕ ಟ್ರಾಫಿಕ್ ನಿವಾರಣೆ ಯೋಜನೆ ಅನುಷ್ಠಾನಗೊಳಿಸಲಿದೆ.












Click it and Unblock the Notifications